Bengaluru Traffic Advisory: ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ಡಿ.22ರಿಂದ ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದೀಗ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವುದಕ್ಕೆ ಮತ್ತೊಂದು ಪ್ರಮುಖ ನಿರ್ಧಾರವನ್ನು ಬೆಂಗಳೂರು ಪೊಲೀಸರು ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಪ್ರಮುಖ ಸೇತುವೆ ಜಂಕ್ಷನ್‌ಗಳಲ್ಲಿ ಒಂದಾಗಿರುವ ಮಾರತ್ತಹಳ್ಳಿ ಸೇತುವೆ ಜಂಕ್ಷನ್‌ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಡಿಸೆಂಬರ್ 22 ರಿಂದ HAL ವಿಮಾನ ನಿಲ್ದಾಣ ಸಂಚಾರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸಂಚಾರ ನಿರ್ಬಂಧಗಳನ್ನು ಘೋಷಿಸಲಾಗಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

Bengaluru Traffic Advisory Major Route Changes From December 22

ಇಲ್ಲಿನ ದೇವರಬೀಸನಹಳ್ಳಿ ಮತ್ತು ಕಾಡುಬೀಸನಹಳ್ಳಿಯಿಂದ ಕೆಎಲ್‌ಎಂ ಸರ್ವಿಸ್ ರಸ್ತೆಯ ಮೂಲಕ ಬರುವ ವಾಹನಗಳು ಇನ್ಮುಂದೆ ವರ್ತೂರು ಮತ್ತು ವೈಟ್‌ಫೀಲ್ಡ್ ಕಡೆಗೆ ಬಲಕ್ಕೆ ತಿರುವು ತೆಗೆದುಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಸೋಷಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವ ಉದ್ದೇಶದಿಂದ ತುಳಸಿ ಥಿಯೇಟರ್ ಜಂಕ್ಷನ್‌ನಲ್ಲಿರುವ ಮಾರ್ಗವನ್ನು ಮುಚ್ಚಲಾಗುತ್ತದೆ ಮತ್ತು ಮಾರತ್ತಹಳ್ಳಿಯಿಂದ ಬರುವ ವಾಹನಗಳು ದೊಡ್ಡನೆಕ್ಕುಂದು ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಳ್ಳಲು ಇರುವುದಿಲ್ಲ ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಸಾಹಿಲ್‌ ಬಾಗ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ಬಂಧಿತ ರಸ್ತೆ ಮಾರ್ಗಗಳು

1. ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕಡೆಯಿಂದ ಕೆಎಂಎಲ್‌ ಮಾಲ್‌ ಸರ್ವಿಸ್ ರಸ್ತೆಯ ಮೂಲಕ ಸಂಚರಿಸಿ ಮಾರತ್ತಹಳ್ಳಿ ಸೇತುವೆ ಜಂಕ್ಷನ್‌ ಬಳಿ ಬಲಕ್ಕೆ ತಿರುವು ತೆಗೆದುಕೊಂಡು ವರ್ತೂರು ಮತ್ತು ವೈಟ್‌ಫೀಲ್ಡ್‌ ಕಡೆಗೆ ಹೋಗುವ ವಾಹನಗಳ ಸಂಚಾರವು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

2. ಇನ್ನು ಮಾರತ್ತಹಳ್ಳಿ ಕಡೆಯಿಂದ ಬರುವ ವಾಹನಗಳು ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಯು - ಟರ್ನ್ ತೆಗೆದುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಸಂಚಾರ ಮಾರ್ಗಗಳು

1. ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕಡೆಯಿಂದ ವರ್ತೂರು ಮತ್ತು ಕುಂದಲಹಳ್ಳಿ ಮಾರ್ಗದ ಕಡೆಗೆ ಸಂಚರಿಸುವ ವಾಹನಗಳು ಹೊರವರ್ತುಲ ರಸ್ತೆಯ ಮೂಲಕ ಸಂಚರಿಸಿ, ಕಾರ್ತಿಕ್‌ ನಗರ ಜಂಕ್ಷನ್‌ ಬಳಿ ಯು - ಟರ್ನ್‌ ತೆಗೆದುಕೊಳ್ಳಬಹುದು. ಕಲಾಮಂದಿರ ಸರ್ವಿಸ್‌ ರಸ್ತೆಯ ಮೂಲಕ ವರ್ತೂರು ಮುಖ್ಯರಸ್ತೆ ತಲುಪಿ, ವೈಟ್‌ಫೀಲ್ಡ್‌ ಮತ್ತು ವರ್ತೂರು ಕಡೆಗೆ ಸಂಚರಿಸಲು ಅವಕಾಶ ಇರಲಿದೆ.

2. ಇನ್ನು ಮಾರತ್ತಹಳ್ಳಿ, ಕುಂದಲಹಳ್ಳಿ ಕಡೆಯಿಂದ ಕೆ.ಆರ್. ಪುರಕ್ಕೆ (ಕೃಷ್ಣರಾಜಪುರ) ಮಾರ್ಗವಾಗಿ ಹೋಗುವ ವಾಹನಗಳು ದೊಡ್ಡನೆಕ್ಕುಂದಿ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ದೊಡ್ಡನೆಕ್ಕುಂದಿ ಮುಖ್ಯರಸ್ತೆಯ ಮೂಲಕ ಕಾರ್ತಿಕ್‌ ನಗರ ಜಂಕ್ಷನ್‌ ಮಾರ್ಗವಾಗಿ ಸಾಗಿ ಹೊರ ವರ್ತುಲ ರಸ್ತೆಯಲ್ಲಿ ಹೋಗುವುದಕ್ಕೆ ಅವಕಾಶ ಇರಲಿದೆ.

ಜನರಿಂದ ಮಿಶ್ರ ಪ್ರತಿಕ್ರಿಯೆ

ಇನ್ನು ಬೆಂಗಳೂರು ಸಂಚಾರ ಪೊಲೀಸರ ಈ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರತ್ತಹಳ್ಳಿ ಸೇತುವೆಯಿಂದ ಮಾರತ್ತಹಳ್ಳಿ ಮಾರುಕಟ್ಟೆಯವರೆಗೆ ಪಾರ್ಕಿಂಗ್ ಸ್ಥಳವಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಈ ಪ್ರದೇಶವು ಬಾಟಲ್ ನೆಕ್ ಆಗಿದೆ ಎಂದು ಕೆಲವರು ಹೇಳಿದ್ದಾರೆ.

ಧನ್ಯವಾದಗಳು ಈ ಭಾಗದಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಕೊನೆಗೂ ತೆರೆ ಬೀಳುವ ಮುನ್ಸೂಚನೆ ಸಿಕ್ಕಂತಾಗಿದೆ. ಇನ್ನು ದೊಡ್ಡನೆಕ್ಕುಂದಿ ಮುಖ್ಯರಸ್ತೆ ಒನ್ ವೇ ಆಗಿರಬೇಕು, ಇಲ್ಲದಿದ್ದರೆ ಇಸ್ರೋ ಯು ಟರ್ನ್‌ನಲ್ಲಿ ಅವ್ಯವಸ್ಥೆ ಸೃಷ್ಟಿಯಾಗಬಹುದು ಎಂದು ಕೆಲವು ನೆಟ್ಟಿಗರು ರಿಯಾಕ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+