Parking Fee Rules: ಬೆಂಗಳೂರು ರಸ್ತೆ ಬದಿ ವಾಹನಗಳ ಪಾರ್ಕಿಂಗ್‌ಗೆ ಶುಲ್ಕ ನಿಗದಿ: ಏನಿದು ಹೊಸ ನಿಯಮ
ಬೆಂಗಳೂರು: ಬೆಲೆ ಏರಿಕೆಗಳ ನಡುವೆ ಹೈರಾಣಾಗಿರುವ ಬೆಂಗಳೂರು ನಾಗರಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತೊಂದು ಆಘಾತ ನೀಡಲು ಮುಂದಾಗಿದೆ. ರಸ್ತೆ ಬದಿಗೆ ನಿಲ್ಲಿಸುವ ವಾಹನಗಳಿಗೂ ಪಾರ್ಕಿಂಗ್ ನಿಯಮ ಜಾರಿಗೆ ತರುತ್ತಿದೆ. ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಇಂತಿಷ್ಟು ಶುಲ್ಕ ಈಗಾಗಲೇ ನಿಗದಿ ಮಾಡಿದೆ. ಶೀಘ್ರವೇ ವಸೂಲಿ ಸಹ ಆರಂಭವಾಗಲಿದೆ.
ಬೆಂಗಳೂರಿನಲ್ಲಿನ್ನು ರಸ್ತೆ ಬದಿ ವಾಹನ ನಿಲ್ಲಿಸುವವರು ಎಚ್ಚರಿಕೆ ವಹಿಸಬೇಕು. ಏಕೆಂದರೆ ಪೇ ಆಂಡ್ ಪಾರ್ಕ್ ನಿಯಮ ಜಾರಿಗೆ ಬರಲಿದೆ. ಈ ಸಂಬಂಧ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಜಿಬಿಎ ಅಧಿಕಾರಿಗಳು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಒಪ್ಪುತ್ತಿದ್ದಂತೆ. ಹೊಸ ಶುಲ್ಕ ವಸೂಲಿ ನಿಯಮ ಜಾರಿಗೆ ಬರಲಿದೆ. ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಇದನ್ನು ಶುಲ್ಕ ಕಟ್ಟಿ ಪಾರ್ಕಿಂಗ್ ಮಾಡುವ ನಿಯಮವನ್ನು ಕಮರ್ಷಿಯಲ್ ಸ್ಟ್ರೀಟ್, ಯಲಹಂಕ ಹೆಬ್ಬಾಳದಲ್ಲಿ ಜಾರಿಗೊಳಿಸಲಾಗುತ್ತದೆ. ಅದಕ್ಕಾಗಿ ಈ ಭಾಗದ ರಸ್ತೆಗಳನ್ನು ಜಿಬಿಎ ಗುರುತಿಸಿದೆ.

ಎಲ್ಲೆಲ್ಲಿ ಪಾರ್ಕಿಂಗ್ ಶುಲ್ಕ ನಿಯಮ ಜಾರಿ
ಗಂಟೆ ಲೆಕ್ಕದಲ್ಲಿ ಕಾರು, ದ್ವಿ ಚಕ್ರಮಗಳಿಗೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಪ್ಲಾನ್ ಮಾಡಲಾಗಿದೆ. ರಸ್ತೆ ಬದಿ ಒಂದು ಗಂಟೆ ಕಾರು ಪಾರ್ಕ್ ಮಾಡಿದರೆ 30 ರೂಪಾಯಿ, ದ್ವಿ ಚಕ್ರ ವಾಹನಕ್ಕೆ 15 ರೂಪಾಯಿ, ಅದೇ ರೀತಿ ಕ್ರಮವಾಗಿ ಒಂದು ದಿನಕ್ಕೆ 150 ರೂಪಾಯಿ, 75 ರೂಪಾಯಿ ನಿಗದಿಪಡಿಸಲಾಗಿದೆ.
ಇನ್ನೂ ಮಾಸಿಕ ಪಾಸ್ ಪಡೆಯುವ ಅವಕಾಶ ಸಹ ನೀಡಲಾಗಿದೆ. ನೀವು ರಸ್ತೆ ಬದಿ ಒಂದು ತಿಂಗಳ ಕಾಲ ಪಾರ್ಕ್ ಮಾಡುವಂತಿದ್ದರೆ ಕಾರು ಮಾಲೀಕರು 3000 ರೂಪಾಯಿ ಹಾಗೂ ಬೈಕ್ ಸವಾರರು 1500 ರೂಪಾಯಿ ಕೊಟ್ಟು ಪಾಸ್ ಪಡೆಯಬೇಕು ಎಂದು ಜಿಬಿಎ ತಿಳಿಸಿದೆ.
Bengaluru will soon start collecting parking fees on select streets in areas including CBD, Hebbal & Yelahanka.
— ChristinMathewPhilip (@ChristinMP_) January 3, 2026
Parking charges: ₹30 per hour for four-wheelers & ₹15 per hour for two-wheelers. Daily passes at ₹150 and ₹75 & monthly passes at ₹3,000 and ₹1,500, respectively… pic.twitter.com/bCnGa6ALWE
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಬೇಕಾ ಬಿಟ್ಟಿ ವಾಹನ ಪಾರ್ಕ್ ಮಾಡುವುದಕ್ಕೆ ಕಡಿವಾಣ ಬೀಳಲಿದೆ. ಈ ಹಿಂದೆ ಮನೆ ಮುಂದೆ ವಾಹನಗಳ ನಿಲ್ಲಿಸಿದರೆ ಶುಲ್ಕ ವಾರ್ಷಿಕವಾಗಿ ಪರವಾನಗಿ ಶುಲ್ಕ ಪಾವತಿಸುವ ನಿಯಮ ಜಾರಿಗೆ ತಂದಿದೆ. ಇಲ್ಲವಾದರೆ ದಟ್ಟ ಕಟ್ಟಲು ಸೂಚನೆ ನೀಡುವ ನಿಯಮವಿದೆ. ಪಾರ್ಕಿಂಗ್ ಸ್ಥಳವಿಲ್ಲದೇ ಕಾರು, ಬೈಕ್ ತಂದು ನಿಲ್ಲಿಸಿ ಸಂಚಾರಕ್ಕೆ ಅನಗತ್ಯ ತೊಂದರೆ ಕೊಡುವುದಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ರಸ್ತೆ ಬದಿಯಲ್ಲಿ ಪಾರ್ಕಿಂಗ್‌ಗೂ ಬ್ರೇಕ್ ಹಾಕಲು ಮುಂದಾಗಿದೆ. ಈಗಾಗಲೇ ಶುಲ್ಕ, ತೆರಿಗೆ ಹೆಚ್ಚಳದಿಂದ ಕಂಗಾಲಾಗಿರುವ ಜನರು ಈ ನಿರ್ಧಾರ ಖಂಡಿಸುವ ಸಾಧ್ಯತೆ ಇದೆ.












Click it and Unblock the Notifications