ಬೆಂಗಳೂರು: ಫೆ.10, 11ರಂದು ಈ ನಗರಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು, ಫೆಬ್ರವರಿ 10: ರಾಜಧಾನಿ ಬೆಂಗಳೂರಿನ ಜನರು ಬೆಳಗಿನ ವಿಪರೀತ ಚಳಿ ಹಾಗೂ ಮಧ್ಯಾಹ್ನದ ಬಿರುಬಿಸಿಲಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ತಿಂಗಳುಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.

ಈಗ ಮತ್ತೆ ಫೆಬ್ರವರಿ 10(ಗುರುವಾರ) ಮತ್ತು ಫೆಬ್ರವರಿ 11(ಶುಕ್ರವಾರ)ರಂದು ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಲಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಣೆ ಮತ್ತು ಇತರ ಉನ್ನತೀಕರಣ ಕಾರ್ಯಗಳಿಂದಾಗಿ ವಿದ್ಯುತ್ ಕಡಿತ ಉಂಟಾಗುತ್ತದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಫೆಬ್ರವರಿ 10ರ ವಿದ್ಯುತ್ ವ್ಯತ್ಯಯದ ಪ್ರದೇಶಗಳು
ದಕ್ಷಿಣ ವಲಯ: ಗುರುವಾರ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಕೆಎಸ್‌ಆರ್‌ಟಿಸಿ ಕ್ವಾರ್ಟರ್ಸ್, 6ನೇ ಮುಖ್ಯ ಎಸ್‌.ಆರ್. ನಗರ, ಕನಕ ಲೇಔಟ್, ಗೌಡನಪಾಳ್ಯ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯ ರಸ್ತೆ, ವಸಂತಪುರ, ಬಿಡಿಎ ಕಾಂಪ್ಲೆಕ್ಸ್, ಕಿಮ್ಸ್ ಕೊಲಾಜ್‌ನ 7ನೇ ಕ್ರಾಸ್, 21ನೇ ಮುಖ್ಯ, 13ನೇ ಕ್ರಾಸ್, 14ನೇ ಕ್ರಾಸ್‌ನಲ್ಲಿ ವ್ಯತ್ಯಯವಾಗಲಿದೆ.

Bengaluru To Face Power Cuts From February 10th And February 11th; Full Details

ಉತ್ತರ ವಲಯ:
ಗುರುವಾರ ಬೆಳಗ್ಗೆ 10ರಿಂದ 7 ಗಂಟೆಯವರೆಗೆ ಜಲದರ್ಶಿನಿ ಲೇಔಟ್, ಲಕ್ಷ್ಮಿ ಟೆಂಟ್, ನ್ಯೂ ಬೆಲ್ ರಸ್ತೆ, ಫುಲ್ ಫೀಡರ್, ದುರ್ಗಾ ಲೇಔಟ್ ಮತ್ತು HMT ಲೇಔಟ್, ಸಾಯಿ ಗಾರ್ಡನ್, ಬಸವಲಿಂಗಪ್ಪ ನಗರ, ಸಿಂಗಾಪುರ ಪ್ಯಾರಡೈಸ್ ಸ್ಲಂ ಬೋರ್ಡ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಫೆ.11ರ ವಿದ್ಯುತ್ ವ್ಯತ್ಯಯದ ಪ್ರದೇಶಗಳು
ದಕ್ಷಿಣ ವಲಯ: ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ನಂಜಪ್ಪ ರಸ್ತೆ, ಪಾಪಯ್ಯ ಮಾವಲಿ, ವಿಕಿಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಸಿದ್ದಾಪುರದ 2ನೇ ಬ್ಲಾಕ್, 18ನೇ ಕ್ರಾಸ್, 8ನೇ ಕ್ರಾಸ್, 6ನೇ ಕ್ರಾಸ್, 1ನೇ ಬ್ಲಾಕ್, 3ನೇ ಬ್ಲಾಕ್, 18 ನೇ ಕ್ರಾಸ್, 7ನೇ ಕ್ರಾಸ್, ಸೋಮೇಶ್ವರನಗರ, ಲಕ್ಷ್ಮೀಕಾಂತ ಪಾರ್ಕ್‌ನಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಉತ್ತರ ವಲಯ:
ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೊಸ ಬಿಇಎಲ್ ರಸ್ತೆ, ಯಶವಂತಪುರ 1ನೇ ಮುಖ್ಯ ರಸ್ತೆ, ಗುರುಮೂರ್ತಿ ರೆಡ್ಡಿ ಕಾಲೋನಿ, ರಾಮಯ್ಯ ಲೇಔಟ್, ವಿನಾಯಕ ಲೇಔಟ್ ಅಬ್ಬಿಗೆರೆ, ಪವಿತ್ರಾ ಶಾಲಾ ಪ್ರದೇಶ., ಕೆನರಾ ಬ್ಯಾಂಕ್ L/O, ತಾತಾನಗರ, ದೇವಿ ನಗರ, ಲೊಟ್ಟೆಗೊಳಹಳ್ಳಿ, LKR ನಗರ, ಲಂಕಾನಗರ, ಲಂಕಾನಗರ ರಿಂಗ್ ರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿನಗರದ 5ನೇ, 6ನೇ, 7ನೇ ಮುಖ್ಯರಸ್ತೆ, 8ನೇ ಮೈಲಿ ಬಳಿ, ತುಮಕೂರು ಮುಖ್ಯರಸ್ತೆ ಟಿ. ದಾಸರಹಳ್ಳಿ ಮೆಟ್ರೋ ಹಿಂಭಾಗ, ಕೆ.ಕೆ. ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ.

Bengaluru To Face Power Cuts From February 10th And February 11th; Full Details

ಪೂರ್ವ ವಲಯ:
ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮರ್ಫಿ ಟೌನ್ ನಲಾ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಗಂಧರ್ವ ಬೇಕರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಬೆಳತ್ತೂರು, ಎಚ್‌ಡಿಎಫ್‌ಸಿ ಬ್ಯಾಂಕ್, ಕುಂಬೆನ ಅಗ್ರಹಾರ, 7ನೇ ಮುಖ್ಯ, 7ನೇ ಎ ಮುಖ್ಯ ಹಂಪಿನಗರ, 8ನೇ ಮುಖ್ಯ 8ನೇ ಕ್ರಾಸ್ ಹಂಪಿನಗರದಲ್ಲಿ ವಿದ್ಯುತ್ ವ್ಯತ್ಯಯ.

ಪಶ್ಚಿಮ ವಲಯ:
ಶುಕ್ರವಾರ ಬೆಳಗ್ಗೆ 10:30ರಿಂದ ಸಂಜೆ 7 ಗಂಟೆಯವರೆಗೆ ಕಾಡಂಬಿ ಶಾಲೆ ಸುತ್ತಮುತ್ತ, 2ನೇ ಕ್ರಾಸ್, 3ನೇ ಹಂತ, 4ನೇ ಬ್ಲಾಕ್ ಬಸವೇಶ್ವರನಗರ, ಕಾಡಂಬಿ ಶಾಲೆ ಸುತ್ತಮುತ್ತ, 3ನೇ ಹಂತ, 1ನೇ ಬ್ಲಾಕ್, 10ನೇ ಮುಖ್ಯ, 9ನೇ ಮುಖ್ಯ, 8ನೇ ಸಿ ಮೇನ್, 8ನೇ ಬಿ ಮೇನ್, 2ನೇ ಇ ಕ್ರಾಸ್ ನಿಂದ 2ನೇ ಎಫ್ & ಜಿ ಕ್ರಾಸ್, 3ನೇ. ವೇದಿಕೆ, 3ನೇ ಬ್ಲಾಕ್ ಬಸವೇಶ್ವರನಗರ ಬಸವೇಶ್ವರನಗರ, 9, 10ನೇ ಮುಖ್ಯ ಬಸವೇಶ್ವರನಗರ, 8ನೇ ಸಿ ಮೇನ್, 9ನೇ ಮುಖ್ಯ, 10ನೇ ಮುಖ್ಯ, 10ಎ ಮುಖ್ಯ, ಮಂಜುನಾಥ್ ನಗರದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಜನರಿಗೆ ಬೆಸ್ಕಾಂ ಸಹಕರಿಸುವಂತೆ ಮನವಿ ಮಾಡಿದೆ.

Recommended Video

      ಕೇಸರಿ ಶಾಲುಗಳನ್ನು ವಿದ್ಯಾರ್ಥಿಗಳಿಗೆ ಹಂಚಿದ ಮಂತ್ರಿಯ ಮಗ ಯಾರು? | oneindia kannada

      ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

      ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+