Get Updates
Get notified of breaking news, exclusive insights, and must-see stories!

ಬೆಂಗಳೂರಿನಿಂದ ಹೊರಡುವ ವಿಶೇಷ ರೈಲು ಸೇವೆಗಳ ಅವಧಿ ವಿಸ್ತರಣೆ, ಇಲ್ಲಿದೆ ವೇಳಾಪಟ್ಟಿ

ಬೆಂಗಳೂರು: ಮುಂದಿನ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರಿನಿಂದ ಹೊರಡುವ ವಿವಿಧ ಮಾರ್ಗಗಳ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಗಳ ಕಾರ್ಯಾಚರಣೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೊಸ ವೇಳಾಪಟ್ಟಿ ಗಮನಿಸುವಂತೆ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.

ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳ ಮೂಲಕ ಹೊರ ರಾಜ್ಯಗಳಿಗೆ ತೆರಳುವ ಸಾಪ್ತಾಹಿಕ, ಹದಿನೈದು ದಿನಗಳಿಗೊಮ್ಮೆ ತೆರಳುವ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಹೊಸ ದಿನಾಂಕಗಳು, ರೈಲುಗಳ ಸಂಚಾರ ಮಾರ್ಗ, ವಿಸ್ತರಿಸಿದ ದಿನಾಂಕಗಳ ವಿವರ ಇಲ್ಲಿದೆ.

Bengaluru These Routes Weekly Special Trains Operations Extension time Table details

ಈ ಎಕ್ಸ್‌ಪ್ರೆಸ್‌ ರೈಲುಗಳ ಸೇವೆ ವಿಸ್ತರಣೆ

1. ಶನಿವಾರಕ್ಕೊಮ್ಮೆ ಭುವನೇಶ್ವರ - ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (02811) ಸಂಚರಿಸುವ ಈ ರೈಲಿನ ಸೇವೆಯನ್ನು ಜನವರಿ 03ರಿಂದ ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ.

2. ಪ್ರತಿ ಸೋಮವಾರ ಸಂಚರಿಸುವ ಯಶವಂತಪುರ - ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಜನವರಿ 05 ರಿಂದ ಫೆಬ್ರವರಿ 23ರವರೆಗೆ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು-ವಿಶಾಖಪಟ್ಟಣಂ ರೈಲು ಸೇವೆ ವಿಸ್ತರಣೆ

3. ಪ್ರತಿ ಭಾನುವಾರ ಕಾರ್ಯಾಚರಣೆ ಮಾಡುವ ವಿಶಾಖಪಟ್ಟಣಂ - ಎಸ್‌ಎಂವಿಟಿ ಬೆಂಗಳೂರು ರೈಲು (08581) ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 04 ರಿಂದ ರಿಂದ 25 ರವರೆಗೆ ವಿಸ್ತರಿಸಲಾಗಿದೆ.

4. ಸೋಮವಾರಕ್ಕೊಮ್ಮೆ ಸಂಚರಿಸುವ ಎಸ್‌ಎಂವಿಟಿ ಬೆಂಗಳೂರು - ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (08582) ಜನವರಿ 05ರಿಂದ 26ರವರೆಗೆ ಸೇವೆ ನೀಡುವಂತೆ ಮುಂದುವರಿಸಲಾಗಿದೆ.

5. ಗುರುವಾರ ಸಂಚರಿಸುವ ಸಂತ್ರಾಗಚ್ಚಿ - ಯಲಹಂಖ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (02863) ಜನವರಿ 01 ರಿಂದ 15ರವರೆಗೆ ಕಾರ್ಯಾಚರಣೆ ಮುಂದುವರಿಸುತ್ತದೆ.

6. ಪ್ರತಿ ಶನಿವಾರ ಸೇವೆ ನೀಡುವ ಯಲಹಂಕ - ಸಂತ್ರಾಗಚ್ಚಿ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು (02864) ಜನವರಿ 03 ರಿಂದ 17ರವರೆಗೆ ಸೇವೆ ಮುಂದುವರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು SMVT-ನರಸಾಪುರ ರೈಲು ವಿಸ್ತರಣೆ

7. ಶುಕ್ರವಾರ ಸಂಚರಿಸುವ ನರಸಾಪುರ - ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (07153) ಜನವರಿ 16 ರಿಂದ 30ರವರೆಗೆ ತನ್ನ ಸೇವೆ ಮುಂದುವರಿಸಲಿದೆ.

8. ಪ್ರತಿ ಶನಿವಾರ ಓಡಾಡುವ ಎಸ್‌ಎಂವಿಟಿ ಬೆಂಗಳೂರು - ನರಸಾಪುರ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು (07154) ಕಾರ್ಯಾಚರಣೆಯನ್ನು ಜನವರಿ 17 ರಿಂದ 31 ರವರೆಗೆ ವಿಸ್ತರಿಸಲಾಗಿದೆ.

9. ಪ್ರತಿ ಗುರುವಾರದ ಹೈದರಾಬಾದ್ - ಬೆಳಗಾವಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (07043) ಜನವರಿ 01 ರಿಂದ 29 ರವರೆಗೆ ವಿಸ್ತರಣೆ ಆಗಿದೆ.

10. ಬೆಳಗಾವಿ - ಹೈದರಾಬಾದ್ ವಾರದ (ಪ್ರತಿ ಶುಕ್ರವಾರ) ವಿಶೇಷ ಎಕ್ಸ್‌ಪ್ರೆಸ್ ರೈಲು (07044) ಕಾರ್ಯಾಚರಣೆಯು ಜನವರಿ 02 ರಿಂದ 30 ರವರೆಗೆ ಮುಂದುವರಿಸಲಾಗುತ್ತಿದೆ.

11. ಕಾಕಿನಾಡಾ ಟೌನ್ - ಮೈಸೂರು ಹದಿನೈದು ದಿನಗಳಿಗೊಮ್ಮೆ ವಿಶೇಷ ಎಕ್ಸ್‌ಪ್ರೆಸ್ ರೈಲು (07033) ಸೇವೆಯನ್ನು ಜನವರಿ 16 ರಿಂದ 30ರವರೆಗೆ ವಿಸ್ತರಣೆ ಆಗಿದೆ.

12. ಮೈಸೂರು - ಕಾಕಿನಾಡಾ ಟೌನ್ ಹದಿನೈದು ದಿನಕ್ಕೊಮ್ಮೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 17 ರಿಂದ 31ರವರೆಗೆ ಸೇವೆ ಮುಂದುವರಿಸಲಿದೆ. ಪ್ರಯಾಣಿಕರು ಈ ಮೇಲ್ಕಂಡ ವಿಸ್ತರಣೆಗಳನ್ನು ಗಮನಿಸಿ, ತಮ್ಮ ಪ್ರಯಾಣವನ್ನು ತಕ್ಕಂತೆ ಯೋಜಿಸಿಕೊಳ್ಳುವಂತೆ ರೈಲ್ವೆ ಪ್ರಕಟಣೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+