ಬೆಂಗಳೂರಿನ ಬಾಡಿಗೆದಾರರಿಗೆ ಎದುರಾಯ್ತು ಹೊಸ ಸಂಕಷ್ಟ: ಶೇ.12ರಷ್ಟು ಜಿಎಸ್‌ಟಿ ಶುಲ್ಕ ಗೊಂದಲ!
ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಇದೀಗ ಹೊಸ ಸಂಕಷ್ಟವೊಂದು ಎದುರಾಗಿದೆ. ಬೆಂಗಳೂರಿನಲ್ಲಿ ದುಬಾರಿ ಅಡ್ವಾನ್ಸ್ ಹಾಗೂ ದುಬಾರಿ ಬಾಡಿಗೆ ಸೇರಿದಂತೆ ಹಲವು ನಿಯಮಗಳನ್ನು ಮನೆಯ ಮಾಲೀಕರು ಹಾಕುತ್ತಿದ್ದು ಇದರಿಂದ ಈಗಾಗಲೇ ಬಾಡಿಗೆಗೆ ಇರುವವರಿಗೆ ಸಂಕಷ್ಟ ಎದುರಾಗಿದೆ. ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಮನೆಗಳ ಮಾಲೀಕರು ಅಥವಾ ಆಸ್ತಿ ಮಾಲೀಕರು ಅನುಸರಿಸುತ್ತಿರುವ ಹೊಸ ನಿಯಮವೊಂದು ಸಂಕಷ್ಟವನ್ನು ತಂದಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ನಿಯಮ. ಅದೇನು ಎನ್ನುವ ವಿವರ ಇಲ್ಲಿದೆ.
ಕೇಂದ್ರ ಸರ್ಕಾರವು ಹೊಸ ಕಾನೂನೊಂದನ್ನು ರೂಪಿಸಿದ್ದು ಇದರಿಂದ ಬಾಡಿಗೆದಾರರಿಂದ ನೇರವಾಗಿ ಹಣ ತೆಗೆದುಕೊಳ್ಳುವುದಕ್ಕೆ ಮನೆ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮನೆಗಳ ಬಾಡಿಗೆದಾರರಿಗೆ ಸಂಕಷ್ಟ ಶುರುವಾಗಿದೆ. ಈಗಾಗಲೇ ಹಲವು ಪ್ರಮುಖ ಬ್ಯಾಂಕ್‌ಗಳು ಸಹ ದುಡ್ಡು ವಿತ್ ಡ್ರಾ ಮಾಡಿಕೊಳ್ಳುವುದಕ್ಕೆ ನಿಯಮಗಳನ್ನು ಬದಲಾಯಿಸಿವೆ. ಹೆಚ್ಚು ಬಾರಿ ಬ್ಯಾಂಕ್‌ನಿಂದ ದುಡ್ಡು ವಿತ್ ಡ್ರಾ ಮಾಡಿಕೊಂಡರೆ ಶುಲ್ಕ ವಿಧಿಸಲಾಗುತ್ತದೆ. ಇದರೊಂದಿಗೆ ಗೂಗಲ್ ಪೇ ಹಾಗೂ ಫೋನ್ ಪೇ ಬಳಕೆಯಲ್ಲಿ ಎದುರಾಗಿದ್ದ ಗೊಂದಲದ ನಂತರ ಇದೀಗ ಮನೆ ಬಾಡಿಗೆಗೂ ಜಿಎಸ್‌ಟಿ ಸಂಕಷ್ಟ ಶುರುವಾಗಿದೆ.

ಬೆಂಗಳೂರು ಬಾಡಿಗೆದಾರರಿಗೆ ಹೊಸ ಸಂಕಷ್ಟ: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮನೆಗಳ ಬಾಡಿಗೆದಾರರಿಗೆ ಹೊಸ ಸಂಕಷ್ಟ ಶುರುವಾಗಿದೆ. ಮನೆಗಳ ಬಾಡಿಗೆ ಮಾಲೀಕರು ಮನೆಗಳ ಬಾಡಿಗೆದಾರರಿಂದ ಹಣದ ರೂಪದಲ್ಲಿಯೇ ಬಾಡಿಗೆ ಕೊಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರವು ಜಿಎಸ್‌ಟಿಯಲ್ಲಿ ತಂದಿರುವ ಬದಲಾವಣೆ. ಮನೆಗಳ ಬಾಡಿಗೆಯನ್ನು ಆನ್‌ಲೈನ್‌ನಲ್ಲಿ ಅಂದರೆ ಫೋನ್ ಪೇ ಹಾಗೂ ಗೂಗಲ್ ಪೇ ಸೇರಿದಂತೆ ಆನ್‌ಲೈನ್ ಪೇಮೆಂಟ್‌ನಲ್ಲಿ ಕೊಡುವುದು ಬೇಡ. ಹಣದ ರೂಪದಲ್ಲಿಯೇ ಕೊಡಿ. ಒಂದೊಮ್ಮೆ ಆನ್‌ಲೈನ್‌ನಲ್ಲಿ ಪಾವತಿ ಮಾಡುವುದಾದರೆ ಅದಕ್ಕಾಗಿ ಹೆಚ್ಚುವರಿಯಾಗಿ ಶೇ. 12ರಷ್ಟು ಜಿಎಸ್‌ಟಿ ಶುಲ್ಕದ ಹಣವನ್ನೂ ಕೊಡಬೇಕು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಏನಿದು ಜಿಎಸ್‌ಟಿ ಗೊಂದಲ: ಇನ್ನು ಮನೆಗಳ ಬಾಡಿಗೆಗೆ ಜಿಎಸ್‌ಟಿ ಗೊಂದಲ ಶುರುವಾಗಿದೆ. ಮನೆಗಳ ಆಸ್ತಿದಾರರು ಅಥವಾ ಮನೆಗಳ ಮಾಲೀಕರು ಜಿಎಸ್‌ಟಿಗೆ ನೊಂದಾಯಿಸಿಕೊಂಡಿದ್ದರೆ ಮಾತ್ರ ಅವರು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಹಲವು ಮನೆಗಳ ಮಾಲೀಕರು ಹಾಗೂ ಪಿ.ಜಿ ಮಾಲೀಕರು ಜಿಎಸ್‌ಟಿಗೆ ನೋಂದಣಿ ಮಾಡಿಸಿಕೊಳ್ಳದಿದ್ದರೂ ಬಾಡಿಗೆದಾರರಿಂದ ಜಿಎಸ್‌ಟಿ ರೂಪದಲ್ಲಿ ಹೆಚ್ಚುವರಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬಾಡಿಗೆ ಹಣಕ್ಕೆ ಶೇ. 12.5ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕು ಎಂದು ಸುಳ್ಳು ಹೇಳಿ ಹಣ ವಸೂಲಿಗೆ ಕೆಲವು ಮನೆಗಳ ಮಾಲೀಕರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೆಲವು ಮನೆ ಮಾಲೀಕರು ತೆರಿಗೆ ತಪ್ಪಿಸುವ ಹಾಗೂ ಹಣದ ರೂಪದಲ್ಲೇ ಬಾಡಿಗೆ ಪಡೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.












Click it and Unblock the Notifications