ಬೆಂಗಳೂರು: ಟೆಕ್ಕಿಯನ್ನು ದೋಚಿದ ಮಂಗಳಮುಖಿಯರು
ಬೆಂಗಳೂರು ಆ. 04: ಮಂಗಳಮುಖಿಯರು ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ನಗರದ ಕಾಮಾಕ್ಷಿ ಪಾಳ್ಯ ಬಳಿಯ ಸುಮನಹಳ್ಳಿ ಜಂಕ್ಷನ್‌ನಲ್ಲಿ ಟೆಕ್ಕಿಯೊಬ್ಬರನ್ನು ಮಂಗಳಮುಖಿಯರ ತಂಡವೊಂದು ದೋಚಿದೆ.
ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದೆ. ಕೆಲಸ ಮುಗಿಸಿ ಬೈಕ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಟೆಕ್ಕಿಯನ್ನು ಅಡ್ಡಗಟ್ಟಿ ಅವರ ಬಳಿ ಇದ್ದ ಹಣ ಮತ್ತು ಒಡವೆ ದೋಚಲಾಗಿದೆ.[ನೀರು ಕೇಳಿದ್ರು, ಸರ್ಕಾರಿ ಉದ್ಯೋಗಿ ಮನೆ ದೋಚಿದ್ರು]

ಇಂಜಿನಿಯರ್ ಮಹೇಶ್ ಮನೆಗೆ ಹಿಂದಿರುಗುತ್ತಿದ್ದಾಗ ಜಂಕ್ಷನ್ ಬಳಿ ಮಂಗಳಮುಖಿಯರ ತಂಡ ಅಡ್ಡಹಾಕಿದೆ. ನಂತರ ಅವರ ಬಳಿ ಇದ್ದ 1,500 ರೂಪಾಯಿ ನಗದು , ಚಿನ್ನದ ಸರ ಮತ್ತು ಉಂಗುರವನ್ನು ಕಸಿದುಕೊಂಡಿದ್ದಾರೆ. ಈ ಬಗ್ಗೆ ಮಹೇಶ್ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳಮುಖಿಯರ ಸೌಲಭ್ಯ ಒದಗಿಸಲು ಸರ್ಕಾರಗಳು ಶಾಸಕರು ಒಂದೆಡೆ ಹೋರಾಟ ಮಾಡುತ್ತಿದ್ದರೆ ಇತ್ತ ಕೆಲವರು ಅಪರಾಧ ಪ್ರಕರಣದಲ್ಲಿ ತೊಡಗಿಕೊಂಡಿರುವುದು ಮಾತ್ರ ದುರ್ದೈವ.












Click it and Unblock the Notifications