ಬೆಂಗಳೂರಲ್ಲಿ ಮೊದಲ ತಲಾಖ್ ಕೇಸ್, ಟೆಕ್ಕಿ ಪತಿ ವಿರುದ್ಧ ಎಫ್‌ಐಆರ್

ಬೆಂಗಳೂರು, ಸೆಪ್ಟೆಂಬರ್ 18: ದಿಢೀರ್ ತ್ರಿವಳಿ ತಲಾಖ್ ನಿಷೇಧವಾದ ಬಳಿಕ ಬೆಂಗಳೂರಲ್ಲಿ ಮೊದಲ ತಲಾಖ್ ಪ್ರಕರಣ ದಾಖಲಾಗಿದೆ.

ಗುರುಪ್ಪನಪಾಳ್ಯ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಸಮೀರುಲ್ಲಾ ರೆಹಮತ್(38) ತನ್ನ ಪತ್ನಿಗೆ ತಲಾಖ್ ನೀಡಿದ್ದು, ಈ ಸಂಬಂಧ ಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪತ್ನಿ ಸುದ್ದಗುಂಟೆ ಪಾಳ್ಯ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಸಮೀರುಲ್ಲಾ ವಿಪ್ರೋ ಸಂಸ್ಥೆಯ ಉದ್ಯೋಗಿಯಾಗಿದ್ದು,ಪತ್ನಿ ದುಬೈನಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದಾರೆ. 2010ರಲ್ಲಿ ಆಕೆಯ ಪಾಲಕರಿಂದ 7.5 ಲಕ್ಷ ರೂ ಬೆಲೆಯ ಐ10 ಕಾರು, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಪಡೆದು ಮದುವೆಯಾಗಿದ್ದ.

Bengaluru Techie Gave Triple Talaq To Wife

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ವರ್ಷದ ಹಿಂದೆ ವರದಕ್ಷಿಣೆ ವಿಚಾರಣೆ ಪತ್ನಿ ಜೊತೆ ಗಲಾಟೆಯಾಗಿತ್ತು. ಆಕೆಯ ಪಾಲಕರು , ಸಂಬಂಧಿಕರು ಮತ್ತು ಸಮುದಾಯದ ಹಿರಿಯರು ಸೇರಿ ಬುದ್ಧಿಮಾತು ಹೇಳಿದ್ದರು. ಜೊತೆಗೆ 7 ಲಕ್ಷ ಕೊಟ್ಟು ಸರಿಪಡಿಸಿದ್ದರು.

ಪತ್ನಿಗೆ ಬಿಟಿಎಂ ಲೇಔಟ್‌ನಲ್ಲಿ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದ, ಆಕೆಯ ಮನೆಗೆ ಹೋಗುವುದನ್ನು ಬಿಟ್ಟಿದ್ದ, ಒಂದು ದಿನ ಏಕಾಏಕಿ ಬಂದು ಮೂರು ಬಾರಿ ತಲಾಖ್ ಎಂದು ಹೇಳಿ ಹೋಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಿಢೀರ್ ತ್ರಿವಳಿ ತಲಾಖ್ ನಿಷೇಧದ ಬಳಿಕ ಬೆಂಗಳೂರಲ್ಲಿ ಮೊದಲ ಹಾಗೂ ರಾಜ್ಯದಲ್ಲಿ ಎರಡನೇ ತಲಾಖ್ ಪ್ರಕರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+