ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive:ಕೊರೊನಾ ಸೋಂಕಿತನ ಫ್ಲಾಟ್ ಮೇಟ್ ಇಮೇಲ್ ಲೀಕ್

|
Google Oneindia Kannada News

ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ತೆಲಂಗಾಣ ಮೂಲಕದ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಸದ್ಯ ಹೈದರಾಬಾದಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಸೋಂಕು ತಗುಲಿರುವ ಟೆಕ್ಕಿ ಸಂಪರ್ಕಕ್ಕೆ ಬಂದಿರುವವರು ಯಾರು? ಆತ ಯಾವ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ? ಆತನ ವಿಳಾಸವೇನು ಎಂಬುದರ ಬಗ್ಗೆ ಕುತೂಹಲ, ಆತಂಕದಿಂದ ಎಲ್ಲರೂ ಪ್ರಶ್ನಿಸುವಾಗ ಆತನ ಫ್ಲಾಟ್ ಮೇಟ್ ತನ್ನ ಸಂಸ್ಥೆಗೆ ಬರೆದಿರುವ ಪತ್ರ ಈಗ ಆತಂಕ ಮೂಡಿಸಿದೆ.

ಬೆಂಗಳೂರಿನಲ್ಲಿ ಕೊರೊನಾ: ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?ಬೆಂಗಳೂರಿನಲ್ಲಿ ಕೊರೊನಾ: ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?

ಕೊರೊನಾ ವೈರಸ್ ಸೋಂಕು ತಗುಲಿರುವ ಟೆಕ್ಕಿಯ ಗುರುತು ಮತ್ತು ಆತ ಕಾರ್ಯ ನಿರ್ವಹಿಸುತ್ತಿರುವ ಐಟಿ ಪಾರ್ಕ್ ಹಾಗೂ ಬೆಂಗಳೂರಿನ ಕಂಪನಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಟೆಕ್ಕಿ ವಿವರ ಹಾಗೂ ಕಂಪನಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ ಆರೋಗ್ಯ ಇಲಾಖೆ ಹೇಳಿದೆ.

20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ 20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ

ಫೆಬ್ರವರಿ 17 ರಂದು ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ ಟೆಕ್ಕಿಗೆ ಅಲ್ಲಿಗೆ ಬಂದಿದ್ದ ಹಾಂಗ್ ಕಾಂಗ್ ಮೂಲದ ವ್ಯಕ್ತಿಗಳ ಮೂಲಕ ಕೊರೊನಾ ವೈರಾಣು ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಟೆಕ್ಕಿಗೆ ತೀವ್ರಜ್ವರ ಕಾಣಿಸಿಕೊಂಡಿದೆ. ಬಳಿಕ ಕೆಎಸ್ಸಾರ್ಟಿಸಿ ಬಸ್ ಮೂಲಕ ಹೈದರಾಬಾದಿಗೆ ತೆರಳಿದ್ದಾನೆ. ಆದರೆ, ಜ್ವರ ಕಡಿಮೆ ಆಗದ ಕಾರಣ ಅಲ್ಲಿನ ಆಸ್ಪತ್ರೆಗೆ ದಾಖಲಾದಾಗ, ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

Bengaluru techie diagnosed with Corona Virus, Here is his Flatmate mail

ಇದಕ್ಕೆ ಪೂರಕವಾಗಿ ಕೋವಿಡ್ ದಾಳಿಗೆ ತುತ್ತಾಗಿರುವ ಟೆಕ್ಕಿ ಜೊತೆ ಬೆಂಗಳೂರಿನಲ್ಲಿ ಒಂದೇ ಫ್ಲಾಟಿನಲ್ಲಿ ವಾಸವಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಸಂಸ್ಥೆಗೆ ಇಮೇಲ್ ಕಳಿಸಿರುವುದು ಇಲ್ಲಿದೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

"ಇತ್ತೀಚಿನ ಸುದ್ದಿಯಂತೆ, ಕೊರೊನಾ ಸೋಂಕಿತ ತೆಲಂಗಾಣ ಟೆಕ್ಕಿ (ಬೆಂಗಳೂರಿನಲ್ಲಿ ಕಾರ್ಯನಿರ್ವಹಣೆ) ನನ್ನ ಫ್ಲಾಟ್ ಮೇಟ್, ಸುದ್ದಿ ತಿಳಿಯುತ್ತಿದ್ದಂತೆ, ನಾನು ಸೋಂಕು ತಗುಲಿದೆಯೇ ಎಂದು ಪರೀಕ್ಷೆಗೊಳಪಡಿಸಿಕೊಂಡಿದ್ದೇನೆ. ಆತ ಕೆಲಕಾಲ ನನ್ನ ಜೊತೆ ಇದ್ದ, ನಾನು ಈಗ ಸಿಕ್ ಲೀವ್ ಪಡೆದುಕೊಳ್ಳುತ್ತಿದ್ದೇನೆ. ನನ್ನ ವೈದ್ಯಕೀಯ ಪರೀಕ್ಷೆ ಫಲಿತಾಂಶ ಬರುವ ತನಕ ನಾನು WFH ಪಡೆಯಲು ಇಚ್ಛಿಸಿದ್ದೇನೆ, ನನ್ನ ಜೊತೆಗಾರ ಉದ್ಯೋಗಿಗಳು, ಸಿಬ್ಬಂದಿಗಳ ಆರೋಗ್ಯದ ಬಗ್ಗೆ ತುರ್ತಾಗಿ ಕಾಳಜಿ ವಹಿಸಬೇಕಾಗಿದೆ ಎಂದು ಮನೀಶ್(ಹೆಸರು ಬದಲಾಯಿಸಲಾಗಿದೆ) ತಾವು ಕಾರ್ಯ ನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗೆ ಇಮೇಲ್ ಕಳಿಸಿದ್ದಾರೆ. ಈ ಮೂಲಕ ಸೋಂಕು ಹೆಚ್ಚು ಹರಡದಂತೆ ಆತ ಕಾಳಜಿ ವಹಿಸಿರುವುದು, ಒಂದು ವೇಳೆ ಸೋಂಕು ತಗುಲಿದ್ದರೆ, ಇಡೀ ಐಟಿ ಪಾರ್ಕ್ ಆತಂಕ ಎದುರಿಸಬೇಕಾದ ಪರಿಸ್ಥಿತಿಯಿದೆ ಎಂಬುದನ್ನು ಒಂದು ಇಮೇಲ್ ನಲ್ಲಿ ತೋರಿಸಿದ್ದಾರೆ.

English summary
Telangana based techie who is diagnosed with corona virus was working in IT tech park in Begaluru. Here is his flatmate letter to his company seeking WFH.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X