ರೈತನ ಮಿತ್ರ ಯಾರು? ಎಂದು ಪ್ರಶ್ನೆ ಕೇಳಿದ ಶಿಕ್ಷಕನಿಗೆ ಅಮಾನತ್ತಿನ ಶಿಕ್ಷೆ!

ಬೆಂಗಳೂರು, ಮಾರ್ಚ್ 29: ರೈತನ ಮಿತ್ರ ಯಾರು? ಎಂದು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿದ್ದ ಶಿಕ್ಷಕರೊಬ್ಬರಿಗೆ ಅಮಾನತ್ತಿನ ಶಿಕ್ಷೆ ನೀಡಲಾಗಿದೆ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೌದು, ಆದರೆ ಪ್ರಶ್ನೆ ಕೇಳಿದ್ದಕ್ಕೆ ಶಿಕ್ಷೆಯಲ್ಲ, ಪ್ರಶ್ನೆಗೆ ರಾಜಕೀಯ ವ್ಯಕ್ತಿಗಳ ಉತ್ತರದ ಆಯ್ಕೆಗಳನ್ನು ನೀಡಿದ್ದಕ್ಕೆ. ಎಂಟನೇ ತರಗತಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ರೂಪಿಸಿದ್ದ ಶಿಕ್ಷಕರೊಬ್ಬರು, ರೈತನ ಮಿತ್ರನಾರು? ಎಂದು ಪ್ರಶ್ನೆ ಕೇಳಿ, ಕುಮಾರಸ್ವಾಮಿ, ಎರೆಹುಳು, ಯಡಿಯೂರಪ್ಪ ಎಂದು ಉತ್ತರಗಳ ಆಯ್ಕೆ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆಯ ಚಿತ್ರ ಹರಿದಾಡಿ ಭಾರಿ ವೈರಲ್ ಆಗಿತ್ತು. ಈ ಪ್ರಶ್ನೆ ಮತ್ತು ನೀಡಿರುವ ಉತ್ತರಗಳ ಆಯ್ಕೆಯನ್ನು ಸಾಮಾಜಿಕ ಜಾಲತಾಣದ ಮಂದಿ ಬಹುವಾಗಿ ಮೆಚ್ಚಿಕೊಂಡಿದ್ದರು, ಆದರೆ ಇದು ಶಾಲೆಯ ಆಡಳಿತ ಮಂಡಳಿಗೆ ಇಷ್ಟವಾಗಲಿಲ್ಲ, ಹಾಗಾಗಿ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

Bengaluru teacher sacked for giving Kumaraswamy, Yeddyurappa as answer options

ನಗರದ ಮೌಂಟ್ ಕಾರ್ಮೆಲ್ ಪ್ರೌಢಶಾಲೆಯ ಶಿಕ್ಷಕರು ಹೀಗೊಂದು ವ್ಯಂಗ್ಯದ ಪ್ರಶ್ನೆಯನ್ನು ಕೇಳಿದ್ದರು, ಆದರೆ ಇದರಿಂದ ಅನವಶ್ಯಕವಾಗಿ ಸಿಟ್ಟಿಗೆದ್ದ ಶಾಲಾ ಪ್ರಾಂಶುಪಾಲರು, ಅವರನ್ನು ಕೆಲಸ ವಜಾ ಮಾಡಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ರೈತರ ಬಂಧು ಎನ್ನಲಾಗುತ್ತದೆ, ಕುಮಾರಸ್ವಾಮಿ ಅವರನ್ನು ಸಹ ರೈತರ ಬಂಧು ಎಂದು ಕರೆಯಲಾಗುತ್ತದೆ ಹಾಗಾಗಿ ವ್ಯಂಗ್ಯವಾಗಿ ಆ ಶಿಕ್ಷಕರು ಹೀಗೆ ಪ್ರಶ್ನೆ ಕೇಳಿದ್ದಾರೆ. ಅಮಾನತಿಗೆ ಒಳಗಾದ ಶಿಕ್ಷಕರ ಹೆಸರು ಗೊತ್ತಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+