Bengaluru sub urban rail: ಪ್ರಮುಖ ಕಾರಿಡಾರ್ ಆರಂಭಕ್ಕೆ ನೈಋತ್ಯ ರೈಲ್ವೆ ಅನುಮೋದನೆ
ಬೆಂಗಳೂರು, ಜನವರಿ 30: ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (Bengaluru subruban rail project) ಮಹತ್ವದ ಕಾರಿಡಾರ್‌ಗೆ ನೈಋತ್ಯ ರೈಲ್ವೆ (SWR) ಅಂತಿಮವಾಗಿ ಅನುಮೋದನೆ ನೀಡಿದೆ.
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ 'ಕನಕ' ಕಾರಿಡಾರ್ 4ರ ಜೋಡಣೆಗೆ ನೈಋತ್ಯ ರೈಲ್ವೆ (SWR) ಅಂತಿಮವಾಗಿ ಅನುಮೋದನೆ ನೀಡಿದೆ.ಇದು ದಕ್ಷಿಣ ಬೆಂಗಳೂರಿನ ಹೀಲಲಿಗೆಯನ್ನು ಉತ್ತರ ಉಪನಗರದ ರಾಜಾನುಕುಂಟೆಗೆ 46.88 ಕಿಮೀ ಉದ್ದವಿದೆ. ಇದರ ವ್ಯಾಪ್ತಿಯಲ್ಲಿ ಒಟ್ಟು 19 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ ಎಂದು ಕೆರೈಡ್ ತಿಳಿಸಿದೆ.

ಮುಖ್ಯ ಮಾರ್ಗದಿಂದ ತುಸು ದೂರ ಹಳಿ ನಿರ್ಮಾಣ
ಯೋಜನೆಗಾಗಿ ನೈಋತ್ಯ ರೈಲ್ವೆ (SWR) ಕೆರೈಡ್‌ಗೆ ಇನ್ನೂ ಭೂಮಿ ನೀಡದ ಕಾರಣ ಕಾಮಗಾರಿ ತುಸು ವಿಳಂಬ ಸಾಧ್ಯತೆ ಇದೆ ಎನ್ನಲಾಗಿದೆ. ಜನವರಿ 23, 2024 ರಂದು, SWR ನ ಮುಖ್ಯ ಟ್ರ್ಯಾಕ್ ಇಂಜಿನಿಯರ್ 'ಕನಕ' ಕಾರಿಡಾರ್ ಗೆ ಪರಿಷ್ಕೃತ ಕಾರ್ಯ ಯೋಜನೆಯನ್ನು ಅನುಮೋದಿಸಿದರು.
ಆದಷ್ಟು ಶೀಘ್ರವೇ ಬೈಯಪ್ಪನಹಳ್ಳಿ ಮತ್ತು ಹೀಲಲಿಗೆ ನಡುವಿನ 23.67 ಕಿ.ಮೀ. ಉಪನಗರ ರೈಲು ಹಳಿಗಳನ್ನು ಮುಖ್ಯ ರೈಲು ಮಾರ್ಗದಿಂದ ತುಸು ಸ್ವಲ್ಪ ದೂರದಲ್ಲಿ ನಿರ್ಮಿಸಲಾಗುವುದು ಎಂದು ಎಸ್‌ಡಬ್ಲು ಆರ್ ತಿಳಿಸಿದೆ.
ಪರಿಷ್ಕರಣೆ ಬಳಿಕ ಯೋಜನೆಗೆ ಅನುಮೋದನೆ
SWR ಕಳೆದ ವರ್ಷ ಕಾರಿಡಾರ್ 4ರ ಜೋಡಣೆಗೆ ಅನುಮೋದನೆ ನೀಡಿದ್ದರೂ, ನಡೆಯುತ್ತಿರುವ ಡಬ್ಲಿಂಗ್ ಕಾಮಗಾರಿ (ಬೈಯಪ್ಪನಹಳ್ಳಿ-ಹೊಸೂರು, 41 ಕಿಮೀ) ನಡೆಯುತ್ತಿರುವ ಕಾರಣ ಬೈಯಪ್ಪನಹಳ್ಳಿ ಮತ್ತು ರಾಜಾನುಕುಂಟೆ (23.21 ಕಿಮೀ) ನಡುವಿನ ವಿಸ್ತರಣೆಗೆ ವಿನ್ಯಾಸವನ್ನು ಮಾರ್ಪಡಿಸಬೇಕಾಗಿತ್ತು.
ಪ್ರಾಜೆಕ್ಟ್ ಏಜೆನ್ಸಿ K-RIDE ತರುವಾಯ ಆ ವಿಭಾಗಕ್ಕೆ ಜೋಡಣೆಯನ್ನು ಪರಿಷ್ಕರಿಸಿದ ಬಳಿಕ SWR ಯೋಜನೆಗೆ ಅನುಮೋದನೆ ನೀಡಿದೆ. ಈ ಹಿಂದೆ ಭೂಮಿ ಹಸ್ತಾಂತರ ಕುರಿತು ಕೆರೈಡ್ ಮತ್ತು ರೈಲ್ವೆ ಮಧ್ಯೆ ಜಗಳ ಆಗಿತ್ತು. ಇದೀಗ ಅದೆಲ್ಲವು ಸರಿಹೋಗಿದೆ ಎನ್ನಲಾಗಿದೆ.

2028ಕ್ಕೆ ಬಿಎಸ್‌ಆರ್‌ಪಿ ಪೂರ್ಣ?
ರಾಜ್ಯ ಸರ್ಕಾರ ಮತ್ತು ರೈಲ್ವೆಯ ಜಂಟಿಯಾಗಿ 149-ಕಿಮೀ ಉದ್ದದ ಈ ಬೆಂಗಳೂರು ಉಪನಗರ ರೈಲ್ವೆ ಯೋಜನೆ (BSRP) ಆರಂಭಿಸಿವೆ. ಒಟ್ಟು ಯೋಜನೆಯು ನಾಲ್ಕು ಕಾರಿಡಾರ್ ರೂಪದಲ್ಲಿ ನಿರ್ಮಾಣವಾಗುತ್ತಿದೆ. ಇದರಲ್ಲಿ ನಾಲ್ಕನೇ ಕಾರಿಡಾರ್‌ಗೆ ಅನುಮೋದನೆ ಸಿಕ್ಕಿದ್ದು, ಆದಷ್ಟು ಶೀಘ್ರವೇ ಕಾಮಗಾರಿ ಆರಂಭಗೊಳ್ಲಲಿದೆ. BSRP ಸಂಪೂರ್ಣ ಯೋಜನೆಯ 2028ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ವಿಸ್ತೃತ ಯೋಜನಾ ವರದಿ (ಡಿಪಿಆರ್) ಪ್ರಕಾರ ಕೆ-ರೈಡ್ ರೈಲ್ವೆ ಭೂಮಿ ಅಗತ್ಯವನ್ನು 194.07 ಎಕರೆಯಿಂದ 115.472 ಎಕರೆಗೆ ಇಳಿಸಿದೆ. ಸರ್ವೇ ಬಳಿಕ ಭೂ ಯೋಜನೆಯನ್ನು ಬೆಂಗಳೂರು ರೈಲ್ವೆ ವಿಭಾಗಕ್ಕೆ ನೀಡಿದ್ದೇವೆ. ಭೂ ಯೋಜನೆಗೆ ಅನುಮೋದನೆ ದೊರೆತ ನಂತರ, 115 ಎಕರೆ ಗುತ್ತಿಗೆಗೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಕೆ-ರೈಡ್ ಮಾಹಿತಿ ನೀಡಿದೆ.
ಇನ್ನೂ SWR ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಭೂ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲಿ ಉತ್ತರ ನೀಡಲಾಗುವುದು. ಯೋಜನೆಗಾಗಿ ಭೂಮಿ ಹಸ್ತಾಂತರಕ್ಕೆ ಕೆಲವು ಸಮಸ್ಯೆಗಳು ಇವೆ. ನಗರದ ಹೃದಯಭಾಗದಲ್ಲಿ ಭೂಮಿ ಅಗತ್ಯತೆ ಇದೆ. ಈ ಭೂಮಿ ಪ್ರಸ್ತಾವನೆಯು ರೈಲ್ವೆ ಮಂಡಳಿಗೆ ಹೋಗಲಿದ್ದು, ಶೀಘ್ರದಲ್ಲೇ ನಿರ್ಧಾರ ಪ್ರಕಟಗೊಳ್ಳಲಿದೆ ಎಂದರು.
ಚಂದಾಪುರ, ಚಲ್ಲಘಟ್ಟ ವಿಸ್ತರಣೆಗೆ ಕೋರಿಕೆ
ಕಾರಿಡಾರ್ 4 ಅನ್ನು ಹೊಸೂರು ರಸ್ತೆಯ ಹೀಲಲಿಗೆಯಿಂದ ಚಂದಾಪುರ ಮತ್ತು ಕಾರಿಡಾರ್ 3 ಅನ್ನು ಕೆಂಗೇರಿಯಿಂದ ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಲೇಔಟ್‌ವರೆಗೆ ವಿಸ್ತರಿಸಲು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಕೆ-ರೈಡ್ SWR ಅನುಮತಿ ಕೋರಿದೆ.
ಆದರೆ ಈ ಮನವಿಗೆ ನೈಋತ್ಯ ರೈಲ್ವೆಗೆ ಒಪ್ಪಿಲ್ಲ. ರೈಲು ವಿಸ್ತರಣೆಯನ್ನು ನಿರಾಕರಿಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications