Bengaluru Suburban Rail: ಬೆಂಗಳೂರು ಉಪನಗರ ರೈಲು ಯೋಜನೆಗೆ ಯೂರೋಪ್ ಬ್ಯಾಂಕ್ ನೀಡಿದ್ದು ಎಷ್ಟು ಸಾವಿರ ಕೋಟಿ?
Bengaluru Suburban Rail: ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಯ ಮತ್ತೊಂದು ಅಪ್ಡೇಟ್ ಲಭ್ಯವಾಗಿದೆ. ಈ ಯೋಜನಗೆ ಯೂರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಸಾಲ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಷ್ಟು ಸಾವಿರ ಕೋಟಿ ರೂಪಾಯಿ ಸಾಲ ಒದಗಿಸಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಅಂಕಿಅಂಶಗಳ ಸಹಿತ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಉಪನಗರ ರೈಲು ಯೋಜನೆಗೆ ಯೂರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ 300 ಮಿಲಿಯನ್ ಯೂರೋ ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ₹2800 ಕೋಟಿ ಸಾಲ ಒದಗಿಸಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಇಐಬಿ ಉಪಾಧ್ಯಕ್ಷೆ ನಿಕೋಲಾ ಬೀರ್, "ಬೆಂಗಳೂರಿನಲ್ಲಿ ನಾಲ್ಕು ಕಾರಿಡಾರ್‌ನಲ್ಲಿ ನಿರ್ಮಾಣ ಆಗುತ್ತಿರುವ ಉಪನಗರ ರೈಲು ಯೋಜನೆಗೆ 300 ಮಿಲಿಯನ್ ಯೂರೋ ಸಾಲ ನೀಡಲಾಗುವುದು. ಉಪನಗರ ರೈಲು ಯೋ ನೆಯು ನಗರದ ವಾಹನ ದಟ್ಟಣೆ, ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಅಷ್ಟೇ ಅಲ್ಲದೇ ಜನರಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣವನ್ನು ಒದಗಿಸುತ್ತದೆ. ಜೊತೆಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಈ ಬ್ಯಾಂಕ್ ಈಗಾಗಲೇ ಭಾರತದಲ್ಲಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ 3.25 ಬಿಲಿಯನ್ ಯೂರೋ 30,225 ಕೋಟಿ ರೂಪಾಯಿ ಸಾಲ ನೀಡಿದ್ದು, ಯೂರೋಪ್ ಹೊರತಾಗಿ ಭಾರತ ಅತೀ ದೊಡ್ಡ ಫಲಾನುಭವಿಯಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ನಿರ್ಮಾಣಕ್ಕೆ ಈಗಾಗಲೇ 500 ಮಿಲಿಯನ್ ಅಂದರೆ 4650 ಕೋಟಿ ರೂಪಾಯಿ ಸಾಲ ಕೊಟ್ಟಿದೆ ಎಂದು ಹೇಳದರು.
ಯಾವಾಗ ಪೂರ್ಣ.?: ಇತ್ತೀಚೆಗಷ್ಟೇ ಉಪನಗರ ರೈಲ್ವೆ ಯೋಜನೆ ಮತ್ತು ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವರು, ಚಿಕ್ಕಬಾಣಾವರ-ಬೈಯ್ಯಪ್ಪನಹಳ್ಳಿ (25 ಕಿ.ಮೀ-ಕಾರಿಡಾರ್-2) ಮತ್ತು ಹೀಲಲಗಿ- ರಾಜಾನುಕುಂಟೆ (46.88 ಕಿ.ಮೀ- ಕಾರಿಡಾರ್-4) ಉಪನಗರ ರೈಲ್ವೆ ಯೋಜನೆಗಳನ್ನು 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದಿದ್ದರು.
ಉಪನಗರ ರೈಲು ಯೋಜನೆಯ ಒಟ್ಟು ನಾಲ್ಕು ಕಾರಿಡಾರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಿಗದಿತ ಅವಧಿಯ ಒಳಗೆ 2 ಮತ್ತು 4ನೇ ಕಾರಿಡಾರ್ ಯೋಜನೆಗಳನ್ನು ಉದ್ಘಾಟನೆ ಮಾಡಲಾಗುವುದು. ಬಳಿಕ ಇತರ ಎರಡು ಕಾರಿಡಾರ್‌ಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದರು.
ಬೆಂಗಳೂರು ಮೆಟ್ರೊ, ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಒಂದಕ್ಕೊಂದು ಸ್ಪರ್ಧೆ ನಾಡುವ ಬದಲು ಎಲ್ಲಿ ಯಾರ ಸೇವೆ ಇಲ್ಲವೋ ಅಲ್ಲಿ ಮತ್ತೊಬ್ಬರು ಸೇವೆ ನೀಡುವಂತಾಗಬೇಕು ಎಂದು ಹೇಳಿದ್ದರು.
ಉಪನಗರ ರೈಲು ಯೋಜನೆಯ ಒಟ್ಟು ನಾಲ್ಕು ಕಾರಿಡಾರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ನಿಗದಿತ ಅವಧಿಯ ಒಳಗೆ 2 ಮತ್ತು 4ನೇ ಕಾರಿಡಾರ್ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಬಳಿಕ ಇತರ ಎರಡು ಕಾರಿಡಾರ್‌ಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಸುಮಾರು 21,000 ಕೋಟಿ ವೆಚ್ಚದ 281 ಕಿಲೋ ಮೀಟರ್ ವರ್ತುಲ ರೈಲ್ವೆ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಉಪನಗರ ರೈಲುಗಳನ್ನೂ ಇದರ ಜೊತೆ ಸಂಪರ್ಕ ಮಾಡುವುದು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಕೆ-ರೈಡ್ ಸಂಸ್ಥೆ ಮುಖ್ಯಸ್ಥರು, ಬಿಬಿಎಂಪಿ ಹಾಗೂ ಇಲಾಖೆ ಅಧಿಕಾರಿಗಳೂ ಉಪಸ್ಥಿತರಿದ್ದರು.












Click it and Unblock the Notifications