BSRP: ಉಪಗ್ರಹ ಪಟ್ಟಣಗಳಿಗೆ ರೈಲು ವಿಸ್ತರಣೆಗೆ ಒಪ್ಪದ ನೈಋತ್ಯ ರೈಲ್ವೆ: ಮಾರ್ಗದ ಮಾಹಿತಿ
ಬೆಂಗಳೂರು, ಜನವರಿ 31: ರಾಜಧಾನಿಯಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ಕನಕ ಕಾರಿಡಾರ್‌ಗೆ ನೈಋತ್ಯ ರೈಲ್ವೆ (SWR) ಅನುಮತಿ ನೀಡಿದೆ. ಇದರ ಬೆನ್ನಲ್ಲೆ ನಿರ್ದಿಷ್ಟ ಮಾರ್ಗದಲ್ಲಿ ಯೋಜನೆ ವಿಸ್ತರಣೆಗಾಗಿ ಕೆ-ರೈಡ್ ಮಾಡಿದ್ದ ಮನವಿಯನ್ನು ತಿರಿಸ್ಕರಿಸಲಾಗಿದೆ.
ಬೆಂಗಳೂರಿನ ಉಪಗ್ರಹ ಪಟ್ಟಣಗಳಿಗೆ ಉಪನಗರ ರೈಲು ಯೋಜನೆ ವಿಸ್ತರಣೆ ಮಾಡಲು ಕೆ-ರೈಡ್ ಚಿಂತನೆ ನಡೆಸಿತ್ತು. ಅದಕ್ಕಾಗಿ ಉಪಗ್ರಹ ಪ್ರದೇಶಗಳಿಗೆ ಉಪನಗರ ರೈಲುಗಳನ್ನು ಸಂಪರ್ಕಿಸುವ ನಿರಾಕರಣೆಯನ್ನು SWR ಮರುಪರಿಶೀಲಿಸುವಂತೆ ಕೆ-ರೈಡ್ ಒತ್ತಾಯಿಸಿದೆ.

ಹೌದು, K-Ride ನ ಪ್ರಸ್ತಾವನೆಯಲ್ಲಿ ರಾಜಾನುಕುಂಟೆ- ಹೀಲಲಿಯ ಸಂಪರ್ಕವನ್ನು ಚಂದಾಪುರಕ್ಕೆ, ಕೆಂಗೇರಿಯಿಂದ ನಾಡಪ್ರಭು ಕೆಂಪೇಗೌಡ ಲೇಔಟ್ (ಬಿಡಿಎ), ಚಲ್ಲಘಟ್ಟಕ್ಕೆ ಸಂಪರ್ಕ ಕಲ್ಪಿಸುವುದು ಹಾಗೂ ಉಪಗ್ರಹ ಪಟ್ಟಣಗಳಿಗೆ ಉಪನಗರ ರೈಲು ವಿಸ್ತರಣೆ ಅನ್ವೇಷಿಸುವುದು ಒಳಗೊಂಡಿತ್ತು.
ಡಲ್ಟ್ ಪತ್ರದ ಬಳಿಕ ವಿಸ್ತರಣೆಗೆ ಚಿಂತನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ-ರೈಡ್ ಅಧಿಕಾರಿಯೊಬ್ಬರು, ಕಳೆದ ವರ್ಷ 2023ರ ಏಪ್ರಿಲ್ 28ರಂದು ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ಆಯುಕ್ತರು K-RIDE ಗೆ ಬರೆದ ಪತ್ರದಿಂದ ಈ ಪ್ರಸ್ತಾವನೆ ಹುಟ್ಟಿಕೊಂಡಿತು.ಆ ಪತ್ರದಲ್ಲಿ ಅಸ್ತಿತ್ವದಲ್ಲಿರುವ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯನ್ನು ವಿಸ್ತರಿಸಲು ಡಲ್ಟ್ ವಿನಂತಿಸಿತ್ತು. ಅದರ ಪ್ರಕಾರ ಈ ವಿಸ್ತರಣೆ ಯೋಜನೆ ಬಗ್ಗೆ ಚಿಂತನೆ ನಡೆದಿತ್ತು.
ತಿಂಗಳುಗಳ ಹಿಂದೆ ನಡೆದ ಸಭೆಯಲ್ಲಿ K-RIDE ಮಂಡಳಿಯು BSRP ಯೋಜನೆಯನ್ನು ಉಪಗ್ರಹ ಪಟ್ಟಣಗಳಿಗೆ ವಿಸ್ತರಿಸಲು ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನಕ್ಕೆ 'ತಾತ್ವಿಕ' ಅನುಮೋದನೆ ನೀಡಿತು. ಒಟ್ಟು 452 ಕಿ.ಮೀ. ಉದ್ದದ ಈ ವಿಸ್ತರಣೆಗೆ BSRP ಹಂತ-2 ಎಂದು ಕರೆಯಲಾಯಿತು.

ಪೂರ್ವಾನುಮತಿ ಅಗತ್ಯ: ಕೆರೈಡ್
ಇದಕ್ಕೆ ವಲಯ ರೈಲ್ವೇ ಮೂಲಕ ರೈಲ್ವೆ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ಕೆ-ರೈಡ್ ಅಧಿಕಾರಿ ತಿಳಿಸಿದ್ದಾರೆ. ಈ ಪ್ರಕ್ರಿಯೆಯು ರಾಷ್ಟ್ರೀಯ ಉಪನಗರ ರೈಲು ನೀತಿ, 2018 ರ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ, ಇದು ಕಾರ್ಯಸಾಧ್ಯತೆಯ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಮತ್ತು ಭಾರತೀಯ ರೈಲ್ವೆ ನಡುವೆ 50:50 ವೆಚ್ಚ-ಹಂಚಿಕೆಯನ್ನು ನಿರ್ದೇಶಿಸುತ್ತದೆ.
2023ರ ಡಿಸೆಂಬರ್ 28ರಂದು ಕೆ-ರೈಡ್ ಮತ್ತೊಂದು ಪತ್ರ ಬರೆದು, ಹೀಲಲಿಗೆಯಿಂದ ಚಂದಾಪುರ ಮತ್ತು ಕೆಂಗೇರಿಯಿಂದ ಚಲ್ಲಘಟ್ಟ/ಕೆಂಪೇಗೌಡ ಲೇಔಟ್‌ಗೆ ಬಿಎಸ್‌ಆರ್‌ಪಿ ಸಂಪರ್ಕಿಸಲು ಎಸ್‌ಡಬ್ಲ್ಯೂಆರ್‌ನಿಂದ ಅನುಮೋದನೆಯು ನಿರ್ಣಾಯಕವಾಗಿದೆ, ಏಕೆಂದರೆ ಇವುಗಳನ್ನು ಉದ್ದೇಶಿತ ಬಿಎಸ್‌ಆರ್‌ಪಿ ಹಂತ 2 ರಲ್ಲಿ ಸೇರಿಸಲಾಗಿದೆ. ಮರುಪರಿಶೀಲಿಸಲು ಮತ್ತು ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ರೈಲ್ವೆ ಮಂಡಳಿಗೆ ಅನುಮೋದನೆಯನ್ನು ಶಿಫಾರಸು ಮಾಡಲು ಒತ್ತಾಯಿಸಿತ್ತು.
ಬಿಎಸ್‌ಆರ್‌ಪಿ ವಿಸ್ತರಣೆಗೆ ಕೆ-ರೈಡ್ ಆದ್ಯತೆ
ಹತ್ತಿರದ ಉಪಗ್ರಹ ಪ್ರದೇಶಗಳನ್ನು ರೈಲು ಸಂಪರ್ಕ ಯೋಜನೆಗಳನ್ನು ಈಗಲೇ ಕಾರ್ಯಗತಗೊಳಿಸದಿದ್ದರೆ, ವಿಸ್ತರಣೆ ಕಾರ್ಯವು ಇನ್ನೂ ಹಲವು ದಶಕಗಳವರೆಗೆ ವಿಳಂಬವನ್ನು ಎದುರಿಸಬೇಕಾಗುತ್ತದೆ ಎಂಬುದರ ಮೇಲೆ ಪತ್ರದಲ್ಲಿ ಗಮನ ಸೆಳೆಯಲಾಗಿತ್ತು. ಆದರೆ ಇದಕ್ಕೆ ನೈಋತ್ಯ ರೈಲ್ವೆ ಒಪ್ಪಿಲ್ಲ. ಮನವಿ ನಿರಾಕರಿಸಿದೆ.
ಬೆಂಗಳೂರು ಉಪನಗರ ಯೋಜನೆಯ ಕನಕ ಕಾರಿಡಾರ್‌ಗೆ ನೈಋತ್ಯ ರೈಲ್ವೆ ಇತ್ತೀಚೆಗೆ ಅನುಮೋದನೆ ನೀಡಿದೆ. ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications