ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Sub Urban Rail: ನೇಮಕವಾಗದ ಕೆ-ರೈಡ್ ಅಧಿಕಾರಿ, ಯೋಜನೆ ವಿಳಂಬ ಆಗಲಿದೆಯೇ?

ಜನಸಂಖ್ಯೆ ಹೆಚ್ಚುತ್ತಿರುವ ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿ ಜೊತೆಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಉಪನಗರ ರೈಲು ಯೋಜನೆಯು ಅನುಕೂಲವಾಗಿದೆ. ಆದರೆ ಹಲವು ಕಾರಣಗಳಿಂದ ಯೋಜನೆ ಅನುಷ್ಠಾನ ತಡವಾಗುತ್ತಿದೆ. ಇದಕ್ಕೆ ಕಾರಣ ಏನು, ಎಷ್ಟು ಹ

|
Google Oneindia Kannada News

ಬೆಂಗಳೂರು, ಜನವರಿ 26: ಜನಸಂಖ್ಯೆ ಹೆಚ್ಚುತ್ತಿರುವ ಸಿಲಿಕಾನ್ ಸಿಟಿಯಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿ ಜೊತೆಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಉಪನಗರ ರೈಲು ಯೋಜನೆಯು ಅನುಕೂಲವಾಗಿದೆ. ಆದರೆ ಹಲವು ಕಾರಣಗಳಿಂದ ಯೋಜನೆ ಅನುಷ್ಠಾನ ತಡವಾಗುತ್ತಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ ಅನುಷ್ಠಾನದ ಹೊಣೆಯನ್ನು ವಿಶೇಷ ಉದ್ದೇಶ ವಾಹನ (ಎಸ್‌ಪಿವಿ) ಕರ್ನಾಟಕ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) (SPV K-RIDE)ವು ಹೊತ್ತಿದೆ. ಇದೀಗ ನಿಗಮವೇ ತಟಸ್ಥವಾಗಿತ್ತು. ಕಳೆದು ಆರು ತಿಂಗಳಿನಿಂದ ಕಾಣೆಯಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Mandya Bypass: ಬೆಂಗಳೂರು- ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತMandya Bypass: ಬೆಂಗಳೂರು- ಮೈಸೂರು ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತ

ಮೂರು ವರ್ಷಗಳ ಕಾಲ K-RIDE ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ಅಮಿತ್ ಗಾರ್ಗ್‌ಗೆ ಅವರ ಅವಧಿ 2022ರ ಜುಲೈ 25ಕ್ಕೆ ಕೊನೆಗೊಂಡಿತ್ತು. ಅವರ ಹುದ್ದೆಯ ಅಧಿಕಾರ ವಿಸ್ತರಣೆಯನ್ನು ಮಾಡಲು ರಾಜ್ಯ ಸರ್ಕಾರ ಒಪ್ಪಿರಲಿಲ್ಲ, ನಿರಾಕರಿಸಿತ್ತು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ (IDD) ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ ಅವರು ಕಳೆದ ವರ್ಷ 2022ರ ಆಗಸ್ಟ್ 10ರಿಂದ ವ್ಯವಸ್ಥಾಪಕ ಉಸ್ತುವಾರಿಗಳಾಗಿ ಅಧಿಕಾರ ವಹಿಸಿಕೊಂಡರು.

Bengaluru Sub-Urban Rail Project Delayed: Officer Has No Appointed To SPV K-RIDE For Project

ಅಲ್ಲಿಂದ ಹೊಸ ವ್ಯವಸ್ಥಾಪಕ ಆಯ್ಕೆ ತನಕ ಗುಪ್ತಾ ಅವರೇ ಹುದ್ದೆಯಲ್ಲಿರುತ್ತಾರೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಈ ವರೆಗೆ ವ್ಯವಸ್ಥಾಪಕ ನೇಮಕದ ಮನಸ್ಸು ರಾಜ್ಯ ಸರ್ಕಾರ ಮಾಡಿದಂತಿಲ್ಲ. ಹೀಗಾಗಿ ನಿಗಮ ಕಣ್ಮರೆ ಆಯಿತಾ? ಎಂಬ ಪ್ರಶ್ನೆ ಎದ್ದಿದೆ.

ಯೋಜನೆಯ ಪಾಲು ಹಂಚಿಕೆಯಾಗಿದೆ. ಇದರಲ್ಲಿ ರಾಜ್ಯದ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಒಟ್ಟು ಶೇಕಡಾ 51 ರಷ್ಟು ಹಾಗೂ ಕೇಂದ್ರ ರೈಲ್ವೆ ಸಚಿವಾಲಯವು ಶೇಕಡಾ 49 ಪಾಲನ್ನು ಹೊಂದಿವೆ.

ರಾಜ್ಯ ಸರ್ಕಾರದಲ್ಲಿ ಐಎಎಸ್ ಅಧಿಕಾರಿಗಳ ಒಂದು ವಿಭಾಗವು ಐಎಎಸ್ ಅಧಿಕಾರಿ ಒಬ್ಬರನ್ನು ಖಾಲಿ ಇರುವ ವ್ಯವಸ್ಥಾಪಕರ ಹುದ್ದೆಗೆ ನೇಮಕ ಮಾಡಲು ಆಗ್ರಹಿಸುತ್ತಲೇ ಇದ್ದಾರೆ. ರೈಲ್ವೇ ಸಚಿವಾಲಯವು ರೈಲ್ವೇ ಹಿನ್ನೆಲೆ ಅಥವಾ ತಾಂತ್ರಿಕ ಜ್ಞಾನವನ್ನು ಹೊಂದಿರುವ ತಂತ್ರಜ್ಞ ಇಲ್ಲವೇ ಭಾರತೀಯ ರೈಲ್ವೆ ಇಂಜಿನಿಯರ್‌ಗಳ (IRSE) ಉತ್ಸುಕವಾಗಿದೆ. ಆದರೆ ಸರ್ಕಾರದಿಂದ ಯೋಜನೆಗೆ ನಿರ್ಣಾಯಕವಾದ ವ್ಯವಸ್ಥಾಪಕ ಹುದ್ದೆ ನೇಮಕ ವಿಳಂಬವಾಗಿದೆ.

Bengaluru Sub-Urban Rail Project Delayed: Officer Has No Appointed To SPV K-RIDE For Project

ಉಪನಗರ ರೈಲು ಯೋಜನೆ ಹಿನ್ನೆಲೆ ಏನು?

ಬೆಂಗಳೂರಿನಲ್ಲಿ 40 ವರ್ಷಗಳಿಂದ ಬಾಕಿ ಉಳಿದಿದ್ದ 148 ಕಿಮೀ ಉದ್ದದ ವಿವಿಧ ಹಂತಗಳ ಉಪನಗರ ರೈಲು ಯೋಜನೆಗೆ 2022ರಲ್ಲಿ ಬೆಂಗಳೂರಿಗೆ ಜೂನ್ ತಿಂಗಳಲ್ಲಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು.

ಈ ಮೂಲಕ ಉಪನಗರ ರೈಲು ಯೋಜನೆಯ ಡಿಪಿಆರ್‌ ಪ್ರಕಾರ ನಗರದಲ್ಲಿ 148 ಕಿ.ಮೀ. ಉದ್ದದ ರೈಲು ಸಂಪರ್ಕ ಜಾಲ ನಿರ್ಮಾಣ ಆರಂಭವಾಯಿತು. ಅದರಲ್ಲಿ 55.57 ಕಿ.ಮೀ. ಎಲಿವೇಟೆಡ್‌ ಮಾರ್ಗ ಮತ್ತು 92.6 ಕಿ.ಮೀ. ಉದ್ದ ನೆಲಮಟ್ಟದ ಮಾರ್ಗ ನಿರ್ಮಾಣವಾಗಲಿದೆ. ಇನ್ನೂ ಮೈಸೂರು ರಸ್ತೆಯ ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ, ಬೆಂಗಳೂರು ನಗರ ನಿಲ್ದಾಣ- ರಾಜನುಕುಂಟೆ ಹಾಗೂ ನೆಲಮಂಗಲ- ಬೈಯ್ಯಪ್ಪನಹಳ್ಳಿ ಮತ್ತು ಬೊಮ್ಮಸಂದ್ರ- ದೇವನಹಳ್ಳಿ ಕಾರಿಡಾರ್‌ ನಿರ್ಮಾಣ ಕುರಿತು ಯೋಜನೆಯಲ್ಲಿ ಪ್ರಸ್ತಾಪವಾಗಿದೆ. ಈ ಯೋಜನೆಗಾಗಿ 1800ಕೋಟಿಗೂ ಅಧಿಕ ವೆಚ್ಚದ ಯೋಜನಾ ವರದಿ ಸಿದ್ಧವಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಉಪಯುಕ್ತವಾಗುವ ಈ ಯೋಜನೆ ಬಹುವರ್ಷಗಳಿಂದ ಡಿಪಿಆರ್‌ ಇನ್ನಿತರ ಕಾರಣದಿಂದ ಹಾಗೇಯೆ ಉಳಿದಿತ್ತು. ನಂತರ ಪ್ರಧಾನಮಂತ್ರಿಗಳಿಂದ ಚಾಲನೆ ದೊರೆತು ಏಳು ತಿಂಗಳ ಕಳೆದರು ಯೋಜನೆ ಚುರುಕು ಪಡೆದಿಲ್ಲ ಎಂಬುದೇ ಸ್ಥಳಿಯರು ಅಸಮಧಾನವಾಗಿದ್ದು, ನಿಗದಿತ ಅವಧಿಗೆ ಹಂತ ಹಂತವಾಗಿ ಯೋಜನೆ ಪೂರ್ಣಗೊಳಿಸಲು ಆಗ್ರಹ ಕೇಳಿ ಬಂದಿದೆ.

English summary
Bengaluru Sub-Urban Rail Project Delayed: Officer has no appointed to SPV K-RIDE organization for project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X