ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜಾಗತಿಕ ಅಸಾಧಾರಣ ಪ್ರತಿಭೆ ಪ್ರಶಸ್ತಿ' ಪಡೆದ ಬೆಂಗಳೂರು ಬಾಲಕಿ...

|
Google Oneindia Kannada News

ಬೆಂಗಳೂರು, ಜನವರಿ 10: ಕೆಲವು ಮಕ್ಕಳು ಬಾಲ್ಯದಿಂದಲೇ ಅಸಾಧಾರಣ ಪ್ರತಿಭೆ ಹೊಂದಿರುತ್ತಾರೆ. ಅದರಲ್ಲೂ ನಮ್ಮ ಬೆಂಗಳೂರಿನ ಮಕ್ಕಳು ಎಂದರೆ ಇಡೀ ಜಗತ್ತೇ ತಿರುಗಿ ನೋಡುತ್ತೆ. ಅತಿ ಕ್ರಿಯಾಶೀಲ ಹಾಗೂ ಭಾರೀ ಬುದ್ದಿಮತ್ತೆ ಹೊಂದಿರುವ ಮಕ್ಕಳು ಬೆಂಗಳೂರಿನವರು ಎಂದು ಈಗಾಗಲೇ ಖ್ಯಾತಿ ಗಳಿಸಿದ್ದಾರೆ.

ಇಂತಹದೇ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ನಮ್ಮ ಬೆಂಗಳೂರಿನ ಮತ್ತೊಬ್ಬ ಶಾಲಾ ಬಾಲಕಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಸಹ ಪಡೆದಿದ್ದಾಳೆ. 2020 ರ 'ಜಾಗತಿಕ ಅಸಾಧಾರಣ ಬುದ್ದಿಮತ್ತೆಯ ಮಗು' (Global Child Prodigy Award 2020) ಪ್ರಶಸ್ತಿ ಪಡೆದ ಬೆಂಗಳೂರಿನ ಅನನ್ಯಾ ರಾಜಾರಾಮನ್ ಬಾಲಕಿಯ ಬಗ್ಗೆ ಇಲ್ಲಿದೆ ಮಾಹಿತಿ.

ಅನನ್ಯಾ ರಾಜಾರಾಮನ್ ಯಾರು?

ಅನನ್ಯಾ ರಾಜಾರಾಮನ್ ಯಾರು?

ಅನನ್ಯಾ ರಾಜಾರಾಮನ್ ಬೆಂಗಳೂರಿನ ಕೋರಮಂಗಲದ ಗ್ರೀನ್‌ವುಡ್ ಹೈ ಇಂಟರನ್ಯಾಷನಲ್ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿನಿ. ಕಥೆಗಾರ್ತಿ ಹಾಗೂ ಕವಯಿತ್ರಿಯಾಗಿ ಬೆಳೆಯುತ್ತಿರುವ ಅನನ್ಯಾ ರಾಜಾರಾಮನ್ ಪಾಠ ಪ್ರವಚನಗಳ ಜೊತೆ ಚಿಕ್ಕ ವಯಸ್ಸಿನಲ್ಲೇ ಇಂಗ್ಲೀಷ್‌ನಲ್ಲಿ ಬರವಣಿಗೆ ಕೌಶಲವನ್ನು ಅದ್ಭುತವಾಗಿ ರೂಡಿಸಿಕೊಂಡಿದ್ದಾಳೆ. ಅಪರಾಧ ಲೋಕದ ಕತೆಗಳನ್ನು ಬರೆಯುವುದರಲ್ಲಿ ಅನನ್ಯಾಳಿಗೆ ತೀರಾ ಆಸಕ್ತಿಯಂತೆ. ಬರವಣಿಗೆಗಾಗಿ 'Bookatarian' ಎಂಬ ಬ್ಲಾಗೊಂದನ್ನು ಅನನ್ಯಾ ನಿರ್ವಹಿಸುತ್ತಿದ್ದಾಳೆ.

'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?

ಅಪರಾಧ ಲೋಕದ ಕತೆಗಾರ್ತಿ

ಅಪರಾಧ ಲೋಕದ ಕತೆಗಾರ್ತಿ

ಭಾರತದ 'ಬುಕ್‌ ಆಫ್‌ ರೆಕಾರ್ಡ'ನಲ್ಲಿ ಅತಿ ಕಿರಿಯ ವಯಸ್ಸಿನ ಅಪರಾಧ ಲೋಕದ ಕತೆಗಾರ್ತಿ ಎಂಬ ದಾಖಲೆ ಅನನ್ಯಾಳಿಗೆ ಸಂದಿದೆ. 2ನೇ ವಯಸ್ಸಿಗೆ ಅನನ್ಯಾ ಕಥೆ ಬರೆಯಲು ಆರಂಭಿಸಿದ್ದಳು. ಐದು ವರ್ಷವಾಗುವ ಹೊತ್ತಿಗೆ 175 ಕಥೆಗಳನ್ನು ಬರೆದಿದ್ದಳು. ಅನನ್ಯಾ ರಾಜಾರಾಮನ್ ಬರೆದ ಕಾದಂಬರಿ ‘ಮ್ಯಾಗನಸ್ ಹೂಪರ್‌‘ 2016ರಲ್ಲಿ ಪ್ರಕಟಗೊಂಡು ದೆಹಲಿ ಪುಸ್ತಕ ಮೇಳದಲ್ಲಿ ಹೆಚ್ಚು ಮಾರಾಟವಾಗಿದೆ.

ಕಿರಣ್ ಬೇಡಿ ಅವರಿಂದ ಈ ಪ್ರಶಸ್ತಿ

ಕಿರಣ್ ಬೇಡಿ ಅವರಿಂದ ಈ ಪ್ರಶಸ್ತಿ

2017ರಲ್ಲಿ ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಆಯ್ಕೆ ‍ಪ್ರಕ್ರಿಯೆ ಆರಂಭಗೊಂಡಿತ್ತು. 45 ರಾಷ್ಟ್ರಗಳ 15 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಅವರಲ್ಲಿ ಪ್ರಚಂಡ ಬುದ್ಧಿಮತ್ತೆಯ 100 ಮಕ್ಕಳನ್ನು ಆಯ್ಕೆ ಮಾಡುವ ಹೊಣೆ ಪ್ರಶಸ್ತಿಯ ಆಯ್ಕೆ ಸಮಿತಿಯದ್ದಾಗಿತ್ತು. ಆಯ್ಕೆಯಾದ 100 ಮಕ್ಕಳಲ್ಲಿ ಅನನ್ಯಾ ರಾಜಾರಾಮನ್ ಒಬ್ಬಳಾಗಿದ್ದಾಳೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುದುಚೇರಿಯ ರಾಜ್ಯಪಾಲರಾದ ಕಿರಣ್ ಬೇಡಿ ಅವರಿಂದ ಈ ಪ್ರಶಸ್ತಿಯನ್ನು ಅನನ್ಯಾ ಸ್ವೀಕರಿಸಿದ್ದರು.

'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...

ಬೆನ್ನೆಲುಬಾಗಿ ನಿಂತಿದ್ದು ಗುರುಗಳು

ಬೆನ್ನೆಲುಬಾಗಿ ನಿಂತಿದ್ದು ಗುರುಗಳು

ಸಂತಸ ಹಂಚಿಕೊಂಡ ಅನನ್ಯಾ 'ಗ್ಲೋಬಲ್ ಚೈಲ್ಡ್ ಪ್ರಾಡಿಜಿ ಪ್ರಶಸ್ತಿ' ಸ್ವೀಕರಿದರ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಸಂತಸ ಹಂಚಿಕೊಂಡಿರುವ ಅನನ್ಯಾ ರಾಜಾರಾಮನ್, ವಿಶ್ವ ಮಟ್ಟದಲ್ಲಿ ಪ್ರಚಂಡ ಬುದ್ಧಿಮತ್ತೆಯ ನೂರು ಮಕ್ಕಳಲ್ಲಿ ಒಂದಾಗಿರುವುದಕ್ಕೆ ನನಗೆ ಖುಷಿ ಎನಿಸಿದೆ. ಬೇರೆ ದೇಶಗಳ ಪ್ರತಿಭಾನ್ವಿತರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ಈ ಪ್ರಶಸ್ತಿ ಪಡೆಯಲು ಬೆನ್ನೆಲುಬಾಗಿ ನಿಂತಿದ್ದು ನನ್ನ ಗುರುಗಳು ಹಾಗೂ ನನ್ನ ಕುಟುಂಬ ಸದಸ್ಯರಿಗೆ ನಮನಗಳು' ಎಂದು ಹೇಳಿದ್ದಾರೆ.

English summary
Bengaluru Student Ananya Rajaraman Won The Global Child Prodigy Award 2020. Ananya Rajaraman Studying In GreenWood High International School.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X