ಪಾರ್ಕಿನ್ಸನ್ ರೋಗಿಗಳಿಗಾಗಿ ಸ್ಮಾರ್ಟ್ ಚಮಚ ನಿರ್ಮಿಸಿದ ಬೆಂಗಳೂರು ವಿದ್ಯಾರ್ಥಿ!
ಬೆಂಗಳೂರು ಅಕ್ಟೋಬರ್ 11: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಪಾರ್ಕಿನ್ಸನ್ ರೋಗಿಗಳಿಗೆ ಸ್ಮಾರ್ಟ್ ಚಮಚವನ್ನು ತಯಾರಿಸಿದ್ದಾನೆ. ಇದಕ್ಕಾಗಿ ಭಾರೀ ಮೆಚ್ಚಿಗೆಯನ್ನು ಯುವಕ ಪಡೆದುಕೊಂಡಿದ್ದಾನೆ. ಕಳೆದ ನವೆಂಬರ್‌ನಲ್ಲಿ ಜರ್ಮನಿಯಲ್ಲಿ ನಡೆದ ರೊಬೊಟಿಕ್ಸ್ ಸ್ಪರ್ಧೆಯಲ್ಲಿ 17 ವರ್ಷದ ಆರವ್ ಅನಿಲ್ ಭಾರತವನ್ನು ಪ್ರತಿನಿಧಿಸಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ.
ಆರವ್ ಅನಿಲ್ ಅವರು ಪಾರ್ಕಿನ್ಸನ್ ಹೊಂದಿರುವ ತಮ್ಮ ಚಿಕ್ಕಪ್ಪನಿಗೆ ಸಹಾಯವಾಗಲೆಂದು ಬ್ಯಾಟರಿ-ಚಾಲಿತ ಸ್ಮಾರ್ಟ್ ಚಮಚವನ್ನು ಕಂಡು ಹಿಡಿದಿದ್ದಾರೆ. ಅದು ರೋಗಿಗೆ ಸುಲಭವಾಗಿ ಆಹಾರ ಸೇವಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಪಾರ್ಕಿನ್ಸನ್ ಮೆದುಳಿನ ನರಮಂಡಲಕ್ಕೆ ಸಂಬಂಧಿಸಿದ ಸಂಕೀರ್ಣ ಕಾಯಿಲೆಯಾಗಿದ್ದು, ವಯಸ್ಸಾದಂತೆ ಮೆದುಳಿನ ನರಮಂಡಲ ದುರ್ಬಲಗೊಳಿಸುತ್ತದೆ. ಕೈ ಕಾಲುಗಳಲ್ಲಿ ನಡುಕ ಉಂಟಾಗುತ್ತದೆ. ಅಂಗಿಯ ಗುಂಡಿಯನ್ನು ಹಾಕುವಾಗ, ಆಹಾರವನ್ನು ಸೇವಿಸುವಾಗ, ಮೂಲಭೂತ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ.

ಆರವ್ ಅನಿಲ್ ಅವರ ಚಿಕ್ಕಪ್ಪ ಕೂಡ ಇಂತೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ಆಹಾರ ಸೇವಿಸುವಾಗ ಚಮಚದಿಂದ ಆಹಾರ ಬಾಯಿಗೆ ಬರುವ ಹೊತ್ತಿಗೆ ಅರ್ಧ ಆಹಾರ ಕೆಳಗೆ ಚೆಲ್ಲುತ್ತಿತ್ತು. ಇದರಿಂದಾಗಿ 3D ಪ್ರಿಂಟರ್ ಮತ್ತು ಸಂವೇದಕ ಮೋಟಾರ್‌ಗಳನ್ನು ಬಳಸಿ ಆರವ್ ಅನಿಲ್ ಬ್ಯಾಟರಿ-ಚಾಲಿತ ಸ್ಮಾರ್ಟ್ ಚಮಚವನ್ನು ತಯಾರಿಸಿದರು.
ಈ ಚಮಚ ಅವರ ಕೈ ನಡುಕವನ್ನು ಸರಿದೂಗಿಸುತ್ತದೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಆರವ್ ಹೇಳುತ್ತಾರೆ. ಬೆಂಗಳೂರು ದಕ್ಷಿಣದಲ್ಲಿರುವ ಪ್ರೆಸಿಡೆನ್ಸಿ ಸ್ಕೂಲ್‌ನಲ್ಲಿ 12 ನೇ ತರಗತಿಯ ವಿದ್ಯಾರ್ಥಿಯಾಗಿರುವ ಆರವ್, ಯುಎಸ್, ರಷ್ಯಾ, ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿ ನಡೆದ 20 ಕ್ಕೂ ಹೆಚ್ಚು ರೋಬೋಟಿಕ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಒಂಬತ್ತನೇ ವಯಸ್ಸಿನಲ್ಲಿ ರೊಬೊಟಿಕ್ಸ್‌ನಲ್ಲಿ ಅವನ ಮೋಹವು ಪ್ರಾರಂಭವಾಯಿತು. ಅವನ ತಾಯಿ ಅವನಿಗೆ ಆಟವಾಡುವುದನ್ನು ನಿಲ್ಲಿಸಲು ಸಾಧ್ಯವಾಗದೇ ಇದ್ದಾಗ ಲೆಗೊ ಕಿಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಆರವ್ ಅವರಿಗೆ ಈ ವಿಷಯದಲ್ಲಿ ಆಸಕ್ತಿ ಹೆಚ್ಚಾಯಿತು.
ಈ ಬಗ್ಗೆ ಅವರು ಮಾತನಾಡಿ, "ಮೆಕ್ಯಾನಿಕ್ಸ್, ಸಾಫ್ಟ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಯೋಜನೆಯು ನನ್ನ ಆಸಕ್ತಿಯನ್ನು ಹೆಚ್ಚಿಸಿದೆ. ನಾನು ರೊಬೊಟಿಕ್ಸ್‌ನ ಬಗ್ಗೆ ಹೆಚ್ಚು ಉತ್ಸಾಹ ಹೊಂದಿದ್ದೇನೆ. ನನ್ನ ತಾಯಿ ತನ್ನ ಕೆಲಸವನ್ನು ತೊರೆದರು ಮತ್ತು ಆರು ವರ್ಷಗಳ ಹಿಂದೆ 21 ನೇ ಶತಮಾನದ ಕೌಶಲ್ಯಗಳನ್ನು ಇತರ ಮಕ್ಕಳಿಗೆ ಕಲಿಯಲು ವೇದಿಕೆಯನ್ನು ಒದಗಿಸಲು ರೋಬೋಲೆಕ್ಟ್ರೋ ಟೀಮ್ ಸ್ಟುಡಿಯೋ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು'' ಎನ್ನುತ್ತಾರೆ.
ಅವರ ತಂದೆ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಮೆಕಾಟ್ರಾನಿಕ್ಸ್ ಇಂಜಿನಿಯರ್ ಆಗಿದ್ದರು. ಹೀಗಾಗಿ ಆರವ್ ಅವರಿಗೆ ಇವೆಲ್ಲಾ ಕಷ್ಟ ಅನಿಸಲಿಲ್ಲ. ಆರವ್ ತನ್ನ ಕೋಣೆಯನ್ನು ನವೀಕರಿಸಲು ತನ್ನ ಕೌಶಲ್ಯಗಳನ್ನು ಬಳಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. "ನಾನು ನನಗಾಗಿ ಹೊಸ ವಸ್ತುಗಳನ್ನು ನಿರ್ಮಿಸಲು ಇಷ್ಟಪಡುತ್ತೇನೆ, ಇದರಲ್ಲಿ ಸಾಕಷ್ಟು ಪ್ರಯೋಗ ಮತ್ತು ದೋಷವಿರುತ್ತದೆ. ಆದರೆ ವೈಫಲ್ಯಗಳಿಂದ ಕಲಿಯುವು ತುಂಬಾ ಇದೆ. ಈ ವರ್ಷ ಬೆಂಗಳೂರಿನಲ್ಲಿ ತುಂಬಾ ಬಿಸಿಲು ಇತ್ತು. ಹಾಗಾಗಿ ನಾನು ವೇಗ ನಿಯಂತ್ರಣಗಳೊಂದಿಗೆ ಫ್ಯಾನ್ ಅನ್ನು ನಿರ್ಮಿಸಿದೆ ಮತ್ತು ನನ್ನ ಕೋಣೆಗೆ ಸ್ವಯಂಚಾಲಿತ ಬ್ರೈಟ್‌ನೆಸ್ ಹೊಂದಾಣಿಕೆಯೊಂದಿಗೆ ದೀಪಗಳನ್ನು ನಿರ್ಮಿಸಿದೆ'' ಎನ್ನುತ್ತಾರೆ ಆರವ್.
ಕಾಲೇಜುಗಳಿಗೆ ಅರ್ಜಿ ಸಲ್ಲಿಸಲು ಕೆಲವೇ ತಿಂಗಳುಗಳು ಬಾಕಿಯಿದ್ದು, ನೆದರ್‌ಲ್ಯಾಂಡ್ಸ್‌ನಲ್ಲಿ ರೊಬೊಟಿಕ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯಲು ಆರವ್ ಅವರು ಬಯಸುತ್ತಾರೆ. "ಭಾರತದಲ್ಲಿನ ಇಂಜಿನಿಯರಿಂಗ್ ಕೋರ್ಸ್‌ಗಳು ತುಂಬಾ ಸಿದ್ಧಾಂತ-ಆಧಾರಿತವಾಗಿವೆ ಮತ್ತು ಕಾಲೇಜು ಪ್ರವೇಶಿಸಲು ತುಂಬಾ ಒತ್ತಡದಿಂದ ಕೂಡಿರುತ್ತವೆ. ನಾನು ಪರೀಕ್ಷೆಗಳನ್ನು ಬರೆಯಲು ಇಷ್ಟಪಡುವುದಿಲ್ಲ, ಆದರೆ ನಾನು ಪ್ರಾಯೋಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮತ್ತು ವಸ್ತುಗಳನ್ನು ನಿರ್ಮಿಸಲು ಇಷ್ಟಪಡುತ್ತೇನೆ, "ಎಂದು ಅವರು ಹೇಳಿದರು.












Click it and Unblock the Notifications