ಬೆಂಗಳೂರು ದಕ್ಷಿಣ ಯಾರಿಗೂ ಬೇಡ: ತಲೆಮೇಲೆ 'ಕೈ'ಹೊತ್ತು ಕೂತ ಕಾಂಗ್ರೆಸ್?

ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಯಾರು? ಈಗ ಬಂದು ಹೋಗಿರುವ ಯಾವ ಹೆಸರುಗಳೂ, ಚುನಾವಣೆಯ ಸಹವಾಸವೇ ಬೇಡ ಎನ್ನುತ್ತಿದ್ದಾರಾ?

ಮೂಲಗಳ ಪ್ರಕಾರ ಹೌದು. ಸಂಭಾವ್ಯ ಅಭ್ಯರ್ಥಿಗಳು ಎಂದು ಕೇಳಿಬರುತ್ತಿದ್ದ ಯಾರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ರಾಜ್ಯ ಘಟಕ, ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಿ, ಯಡಿಯೂರಪ್ಪನರಿಗೆ ಕಳುಹಿಸಿದ್ದರೂ, ಕೆಪಿಸಿಸಿ, ಮಾತ್ರ ಇನ್ನೂ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಬಿಜೆಪಿಗೆ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳ ಕೊರತ ಕಾಂಗ್ರೆಸ್ಸಿಗೆ ಬೆಂಗಳೂರು ದಕ್ಷಿಣದಲ್ಲಿ ಕಾಡುತ್ತಿದೆ.

ಬೆಂಗಳೂರು ದಕ್ಷಿಣಕ್ಕೆ ಮೂರ್ನಾಲ್ಕು ಹೆಸರುಗಳು ಬಂದು ಹೋಗಿದ್ದರೂ, ದೆಹಲಿ ರಾಜಕೀಯದಲ್ಲಿ ಇವರೆಲ್ಲಾ ಒಲವು ತೋರುತ್ತಿಲ್ಲ ಎನ್ನುವ ಸುದ್ದಿಯಿದೆ. ಈ ನಡುವೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೊಬ್ಬರ ಹೆಸರು ಈಗ ಕೇಳಿಬರುತ್ತಿದೆ. ಬಹುತೇಕ, ಅವರ ಹೆಸರೇ ಅಂತಿಮವಾಗುವ ಸಾಧ್ಯತೆಯಿದೆ.

ಕೆಪಿಸಿಸಿಗೆ ಇದು ದೊಡ್ಡ ತಲೆನೋವಾಗಿ ಕೂತಿರುವ ಬೆಂ.ದಕ್ಷಿಣ

ಕೆಪಿಸಿಸಿಗೆ ಇದು ದೊಡ್ಡ ತಲೆನೋವಾಗಿ ಕೂತಿರುವ ಬೆಂ.ದಕ್ಷಿಣ

ಬೆಂಗಳೂರು ದಕ್ಷಿಣಕ್ಕೆ ಹಲವು ಹೆಸರುಗಳು ಈವರೆಗೆ ಕೇಳಿಬಂದಿದ್ದವು. ಆದರೆ, ಯಾವ ಮುಖಂಡರೂ ಆಸಕ್ತಿ ತೋರದೇ ಇರುವುದರಿಂದ, ಕೆಪಿಸಿಸಿಗೆ ಇದು ದೊಡ್ಡ ತಲೆನೋವಾಗಿ ಕೂತಿದೆ. ಅಸೆಂಬ್ಲಿ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ ಎಂದು ಇಬ್ಬರು ಮುಖಂಡರು ಸ್ಪರ್ಧಿಸಲು ಸ್ಪಷ್ಟ ಹಿಂದೇಟು ಹಾಕಿದ್ದಾರೆ ಎನ್ನುವ ಮಾಹಿತಿಯಿದೆ.

ಪ್ರಿಯಕೃಷ್ಣ ಅವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು

ಪ್ರಿಯಕೃಷ್ಣ ಅವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೋವಿಂದರಾಜ ನಗರದಿಂದ ಸ್ಪರ್ಧಿಸಿ ಸೋತಿದ್ದ ಪ್ರಿಯಕೃಷ್ಣ ಅವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಪ್ರಿಯಕೃಷ್ಣ ತಂದೆ, ಶಾಸಕ ಎಂ ಕೃಷ್ಣಪ್ಪ ಭೇಟಿಯೂ ಆಗಿದ್ದರು. ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎನ್ನುವ ಮಾತನ್ನು ಕೃಷ್ಣಪ್ಪ ಹೇಳಿದ್ದರು ಎಂದು ಸುದ್ದಿಯಾಗಿತ್ತು. ಇದನ್ನೆಲ್ಲವನ್ನೂ ಕೃಷ್ಣಪ್ಪ ತಳ್ಳಿಹಾಕಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರಪ್ಪ ನಾಯ್ಡು ಅವರ ಹೆಸರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರಪ್ಪ ನಾಯ್ಡು ಅವರ ಹೆಸರು

ಈಗ, ಬೆಂಗಳೂರು ದಕ್ಷಿಣಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರಪ್ಪ ನಾಯ್ಡು ಅವರ ಹೆಸರು ಕೇಳಿಬರುತ್ತಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪದ್ಮನಾಭನಗರದಿಂದ ಸ್ಪರ್ಧಿಸಲು ನಾಯ್ಡು ಸಿದ್ದವಾಗಿದ್ದರು. ಆದರೆ, ಅಂತಿಮ ಹಂತದಲ್ಲಿ ಕೆಪಿಸಿಸಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಗುರಪ್ಪ ನಾಯ್ಡು ಕೂಡಾ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ ಎನ್ನುವ ಮಾಹಿತಿಯಿದೆ.

ಗುರಪ್ಪ ನಾಯ್ಡು ಸ್ಪರ್ಧೆಗೆ ಎಲ್ಲರೂ ಓಕೆ, ಅವರ ಹೆಸರು ಅಂತಿಮವಾಗುವ ಸಾಧ್ಯತೆ

ಗುರಪ್ಪ ನಾಯ್ಡು ಸ್ಪರ್ಧೆಗೆ ಎಲ್ಲರೂ ಓಕೆ, ಅವರ ಹೆಸರು ಅಂತಿಮವಾಗುವ ಸಾಧ್ಯತೆ

ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರು, ಚುನಾವಣಾ ಸಮಿತಿಯ ಸದಸ್ಯರ ಜೊತೆ ಗುರುವಾರ (ಮಾ 14) ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಬಿಟಿಎಂ ಲೇಔಟ್ ಶಾಸಕ ರಾಮಲಿಂಗ ರೆಡ್ಡಿಯವರೂ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಗುರಪ್ಪ ನಾಯ್ಡು ಸ್ಪರ್ಧೆಗೆ ಎಲ್ಲರೂ ಓಕೆ ಎಂದು ಹೇಳಿದ್ದು, ಅವರ ಹೆಸರು ಅಂತಿಮವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ನಿಷ್ಟಾವಂತ ರಾಮಲಿಂಗ ರೆಡ್ಡಿಯ ಹೆಸರು ಈಗ ಹರಿದಾಡಲಾರಂಭಿಸಿತ್ತು

ಕಾಂಗ್ರೆಸ್ ನಿಷ್ಟಾವಂತ ರಾಮಲಿಂಗ ರೆಡ್ಡಿಯ ಹೆಸರು ಈಗ ಹರಿದಾಡಲಾರಂಭಿಸಿತ್ತು

ಮೊದಲು ಪ್ರಿಯಕೃಷ್ಣ, ನಂತರ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ನಂದನ್ ನೀಲೇಕಣಿ ಅವರ ಪತ್ನಿ ರೋಹಿಣಿ ಹೆಸರು ಕೇಳಿ ಬರುತ್ತಿತ್ತು. ಇದಾದ ನಂತರ, ಬೆಂಗಳೂರು ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ, ಮಾಜಿ ಸಚಿವ, ಕಾಂಗ್ರೆಸ್ ನಿಷ್ಟಾವಂತ ರಾಮಲಿಂಗ ರೆಡ್ಡಿಯ ಹೆಸರು ಹರಿದಾಡಲಾರಂಭಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+