ಬೆಂಗಳೂರಿನ ಮೊದಲ ರೋ ರೋ ಸೇವೆಗೆ ಚಾಲನೆ
ಬೆಂಗಳೂರು, ಆಗಸ್ಟ್ 30: ಬೆಂಗಳೂರು ನಗರದಿಂದ ಮೊದಲ ರೋ ರೋ ಸೇವೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಮತ್ತು ಸೊಲ್ಹಾಪುರ ಸಮೀಪದ ಬೇಲ್ ನಡುವೆ ಈ ಸೇವೆ ಇದಾಗಿದೆ.
Recommended Video
ರೈಲ್ವೆ ಸಚಿವಾಲಯ ಏಪ್ರಿಲ್‌ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ರೋ ರೋ ಸೇವೆಯನ್ನು ಆರಂಭಿಸಲು ಒಪ್ಪಿಗೆ ನೀಡಿತ್ತು. ಬಿ. ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸೇವೆಗೆ ಚಾಲನೆ ನೀಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೇರಿದಂತೆ ಹಲವು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೈಋತ್ಯ ರೈಲ್ವೆಯು ಆರಂಭಿಸಿರುವ ಮೊದಲ ರೋ ರೋ ಸೇವೆ ಇದಾಗಿದೆ.
ಸರಕುಗಳನ್ನು ಹೊತ್ತ ಲಾರಿಯನ್ನು ತುಂಬಿಕೊಂಡ ರೈಲು ನೆಲಮಂಗಲದಿಂದ ಹೊರಟು ಮಹಾರಾಷ್ಟ್ರದ ಸೊಲ್ಹಾಪುರ ಸಮೀಪದ ಬೇಲ್ ತಲುಪಲಿದೆ. ಮೊದಲ ರೈಲು 1260 ಟನ್ ಕೃಷಿ, ರಾಸಾಯನಿಕ, ಕಾರ್ಖನೆಗೆ ಅಗತ್ಯವಿರುವ ವಸ್ತುಗಳನ್ನು ಹೊತ್ತು ಸಂಚರಿಸಲಿದೆ.
ಬೆಂಗಳೂರಿನ ನೆಲಮಂಗಲ ರೈಲ್ವೆ ನಿಲ್ದಾಣದಿಂದ ಸೋಲಾಪುರದ ಬಾಲೆ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ರೋಲ್ಆನ್-ರೋಲ್ಆಫ್ ರೈಲು ಸೇವೆಗೆ ಮುಖ್ಯಮಂತ್ರಿ ಶ್ರೀ @BSYBJP ರವರು ಹಸಿರು ನಿಶಾನೆ ತೋರುವ ಮೂಲಕ ಇಂದು ಚಾಲನೆ ನೀಡಿದರು. (1/2)@PMOIndia @PiyushGoyal pic.twitter.com/Epwm7a5uqW
— CM of Karnataka (@CMofKarnataka) August 30, 2020
ರೋ ರೋ ಸೇವೆಯಲ್ಲಿ 43 ಓಪನ್ ವ್ಯಾಗನ್‌ಗಳು ಇರಲಿವೆ. 682 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದೆ. ಒಂದು ಬಾರಿ ರೈಲು ಸಂಚಾರ ನಡೆಸಲು 7 ದಿನ ಬೇಕಿದೆ. ಲಾರಿಗಳ ಗಾತ್ರದ ಆಧಾರದ ಮೇಲೆ 43ಕ್ಕೂ ಅಧಿಕ ಲಾರಿಗಳನ್ನು ರೈಲು ವ್ಯಾಗನ್‌ನಲ್ಲಿ ಸಾಗಿಸಬಹುದಾಗಿದೆ.












Click it and Unblock the Notifications