Watch: ಸಿಗರೇಟಿನ ದುಡ್ಡು ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಪುಂಡರ ದಾಳಿ, ಬೆಂಗಳೂರಿನಲ್ಲಿ ಘಟನೆ

ಬೆಂಗಳೂರು, ಡಿಸೆಂಬರ್‌ 10: ಸಿಗರೇಟಿನ ದುಡ್ಡ ಕೇಳದ್ದಕ್ಕೆ ಅಂಗಡಿಯವರ ಮೇಲೆ ಐವರು ಪುಂಡ ಯುವಕರು ಮಾರಣಾಂತಿವಾಗಿ ಹಲ್ಲೆ ಮಾಡಿದ್ದಾರೆ.

ಈ ಘಟನೆ ಬೆಂಗಳೂರಿನ ಕುಂದನಹಳ್ಳಿಯಲ್ಲಿ ನಡೆದಿದೆ.

ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳ ಸೆರೆಯಾಗಿವೆ. ರೆಕಾರ್ಡ್ ಮಾಡಿದ ಆಘಾತಕಾರಿ ದೃಶ್ಯಗಳನ್ನು ಸಂತ್ರಸ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಕುಂದಲಹಳ್ಳಿಯ ಇಬ್ಬರು ಅಂಗಡಿಯವರನ್ನು ಯುವಕರು ಹೊಡೆಯುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ರೌಡಿಗಳ ರೀತಿಯಲ್ಲಿ ವರ್ತಿಸುತ್ತಿರುವ ಯುವಕರು ಅಂಗಡಿಯವರ ಮೇಲೆ ಹೊಡೆತಗಳ ಮಳೆಗರೆಯುವುದನ್ನು ಕಾಣಬಹುದು. ಅವರ ರಕ್ಷಣೆಗೆ ಬರುವ ವ್ಯಕ್ತಿಯನ್ನು ಯುವಕರು ಥಳಿಸಿದ್ದಾರೆ.

Bengaluru Shopkeepers Beaten Up In Vicious Attack Caught On Camera

ಅಂಗಡಿಯವರನ್ನು ಥಳಿಸಿದ್ದಲ್ಲದೇ ಬೇಕರಿ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ. ಮೃಗಗಳ ರೀತಿಯಲ್ಲಿ ದಾಳಿ ಮಾಡಿರುವ ಯುವಕರು ಪ್ಲಾಸ್ಟಿಕ್ ಟ್ರೇ ಮತ್ತು ಹೆಲ್ಮೆಟ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅಂಗಡಿಯವರ ತಲೆಯ ಮೇಲೆ ಹೊಡೆಯುವ ದೃಶ್ಯಗಳು ಬಯಲಾಗಿವೆ.

ವಿಡಿಯೊದಲ್ಲಿ ಕನಿಷ್ಠ ಐವರು ಪುಂಡರನ್ನು ಕಾಣಬಹುದು. ಅಂಗಡಿಯವರ ಅವಹೇಳನಕಾರಿ ಪದಗಳನ್ನು ಯುವಕರು ಬಳಸಿದ್ದು, ಹೆಲ್ಮೆಟ್‌ನಿಂದ ತಲೆಗೆ ಹೊಡೆದಿದ್ದಾರೆ. ಅಂಗಡಿ ಖಾಲಿ ಮಾಡಿ ಎಂದು ಯುವಕರು ಹೇಳಿದ್ದಾರೆ. 'ನಾವೇನು ತಪ್ಪು ಮಾಡಿದ್ದೇವೆ ಅಣ್ಣಾ, ನಮ್ಮನ್ನು ಬಿಟ್ಟು ಬಿಡಿ' ಎಂದು ಪರಿಪರಿಯಾಗಿ ಕೇಳಿಕೊಂಡರೂ ಅಂಗಡಿಯವರನ್ನು ಯುವಕರು ಹೊಡೆದಿದ್ದಾರೆ. ಇದೆಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ನಂತರ ಪೊಲೀಸರು ಗಂಭೀರವಾಗಿ ಈ ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

Bengaluru Shopkeepers Beaten Up In Vicious Attack Caught On Camera

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಇದುವರೆಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ದಿನೇದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಬೆಂಗಳೂರು ಪೊಲೀಸರು ಇಂತವರ ಮಟ್ಟ ಹಾಕಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+