Viral Video: ಬೆಂಗಳೂರಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: ವ್ಯಕ್ತಿ ಮೇಲೆ ಹಲ್ಲೆ, ದರೋಡೆ ಮಾಡಿ ಪರಾರಿ
Bengaluru Viral Video: ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಹಗಲು ರಾತ್ರಿ ಎನ್ನದೇ ದರೋಡೆ ಮಾಡುತ್ತಾರೆ. ಅಮಾಯಕರನ್ನು ಹೆದರಿಸಿ ಹಣ ಕೀಳುವ ಗುಂಪಿನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯ ಜನರಿಗೆ ಆಘಾತ ನೀಡಿದೆ. ದುಷ್ಕರ್ಮಿಗಳಿಗೆ ಕಾನೂನು, ಪೊಲೀಸರ ಭಯ ಇಲ್ಲದಂತೆ ವರ್ತಿಸಿದ್ದು ಕಾಣಿಸುತ್ತದೆ. ದರೋಡೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂಸದ ಪಿಸಿ ಮೋಹನ್ ಅವರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ದರೋಡೆ ಪ್ರಕರಣಗಳು ಸಾಮಾನ್ಯ ಎಂಬತಾಗಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಆಗಾಗ ಇಂತ ಪ್ರಕರಣಗಳು ನಿದರ್ಶನವಾಗುತ್ತಿವೆ. ಬೆಂಗಳೂರಿನ ಶಾಂತಿನಗರ ಗೂಂಡಾಗಳು ಅಟ್ಟಹಾಸ ಮೆರೆದಿದ್ದಾರೆ. ನಡುರಸ್ತೆಯಲ್ಲಿ ದರೋಡೆ ಮಾಡಿದ ಘಟನೆ ನಡೆದಿದೆ. ಶಾಂತಿ ನಗರದ ರಸ್ತೆ ಶಾಂತವಾಗಿದ್ದ ಸಮಯದಲ್ಲಿ ಅಮಾಯಕ ದರೋಡೆ ನಡೆದಿದೆ. ಬೆಳಗ್ಗೆ 4:30 ರ ಹೊತ್ತಿಗೆ ಬೈಕ್‌ನಲ್ಲಿ ಬಂದ್ ಮೂವರು ದರೋಡೆಕೋರರ ಗುಂಪು ಬೆದರಿಸಿ ನಗದು ಇತರ ವಸ್ತು ಕಸಿದು ಪರಾರಿಯಾಗಿದ್ದಾರೆ.

ಈ ವಿಡಿಯೋ ಅನ್ನು ಸಂಸದ ಪಿಸಿ ಮೋಹನ್ ಅವರು ಹಂಚಿಕೊಂಡಿದ್ದಾರೆ. ಸರ್ಕಾರದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಾಗರಿಕೊಬ್ಬರು ಬೆಳಗ್ಗೆ ಸ್ಕೂಟರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳ ಗುಂಪು, ಸ್ಕಟೂರ್ ಪಕ್ಕ ಬಂದು ಗಾಡಿ ಆಫ್ ಮಾಡಿ ಕೀಲಿಯನ್ನು ತೆಗೆದುಕೊಂಡಿದ್ದಾರೆ. ಹಠಾತ್ ಈ ಘಟನೆ ನಡೆಯುತ್ತಿದ್ದಂತೆ ಸ್ಕೂಟರ್ ನಿಲ್ಲಿಸಲು ಪರದಾಡಿದ್ದಾರೆ. ಕಷ್ಟಪಟ್ಟು ನಿಲ್ಲುತ್ತಲೇ ಬೈಕ್ ನಿಲ್ಲಿಸಿ ಬಂದ ಇಬ್ಬರು ನಾಗರಿಕನ ಮೇಲೆ ಹಲ್ಲೆ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಹಣ ನಗದು, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
Requesting immediate action from @BlrCityPolice in Shantinagar.pic.twitter.com/d3b9R6x5vI
— P C Mohan (@PCMohanMP) November 17, 2025
ಬೆಂಗಳೂರಲ್ಲಿ ಭಯದ ವಾತವರಣ ಸೃಷ್ಟಿ
ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಹಿತ ಅವರು ಸ್ಕೂಟರ್ ಸವಾರರ ಕಥೆ ಮುಗಿಯುತ್ತಿತ್ತು. ಇದೊಂದು ಸಂಘಟಿತ ದರೋಡೆ ಆಗಿದೆ. ಬಲಿಪಶು ವ್ಯಕ್ತಿ ಆಘಾತಗೊಂಡಿದ್ದಾರೆ. ಮೊಬೈಲ್ , ಹಣ ಕಳೆದುಕೊಂಡು ಪರಿತಪಿಸಿದ್ದಾರೆ. ಬೆಂಗಳೂರು ಗೂಂಡಾಗಳಿಗೆ ಪ್ರಾಮಾಣಿಕ ಜೀವನ ಸಾಗಿಸುವ ಧೈರ್ಯ ಇಲ್ಲ. ಅಡ್ಡ ದಾರಿಯಲ್ಲಿ, ಜನರ ಹಣ ಲೂಟಿ ಮಾಡಿ ಬದುಕುವವರಿಗೆ ಸಾಮಾಜ, ಪೊಲೀಸ್, ಕಾನೂನಿನ ಭಯ ಇಲ್ಲದಾಗಿದೆ. ಇಂತಹ ಪ್ರಕರಣ ಹೆಚ್ಚಾಗುತ್ತಿದ್ದಂತೆ ಮಕ್ಕಳು, ಮಹಿಳೆಯರು ನಾಗರಿಕರು ರಾತ್ರಿಯಾದರೆ ಮನೆಯಿಂದ ಹೊರ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಜನರಿಗೆ ಪೊಲೀಸರ ಮೇಲೆ ಆತ್ಮವಿಶ್ವಾಸ ದಿನದಿಂದ ದಿನಕ್ಕೆ ಕಡಿಮೆ ಆಗುವಂತೆ ಇಂತಹ ಘಟನೆಗಳು ಮಾಡುತ್ತಿವೆ.
ಬೆಂಗಳೂರಿನ ನಿವಾಸಿಗಳಿಗೆ ಧೈರ್ಯ ನೀಡುವ ನಿಟ್ಟಿನಲ್ಲಿ ಬೆಳಗಿನ ಜಾವ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸಾಮಾನ್ಯ ಜನರು ಯಾವುದೇ ಭಯ, ಅಂಜಿಕೆ ಇಲ್ಲದೇ ಓಡಾಡುವ ಸ್ಥಿತಿ ನಿರ್ಮಿಸಬೇಕೆಂಬ ಆಗ್ರಹ ಜೋರಾಗಿದೆ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್












Click it and Unblock the Notifications