ಬೆಂಗಳೂರಿನಲ್ಲಿ ಆಟವಾಡುತ್ತಿದ್ದ ಮಗುವನ್ನು ಫುಟ್‌ಬಾಲ್‌ನಂತೆ ಒದ್ದ ವ್ಯಕ್ತಿ, ವಿಡಿಯೋ ವೈರಲ್

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಆಟವಾಡುತ್ತಿದ್ದ ಮಗುವಿನ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಮಗುವನ್ನು ತನ್ನ ಕಾಲಿನಿಂದ ಫುಟ್‌ಬಾಲ್‌ನಂತೆ ಒದ್ದಿದ್ದಾನೆ. ಇದರಿಂದ ಆ ಮಗು ಚೆಂಡಿನಂತೆ ಹಾರಿ ದೂರಕ್ಕೆ ಬಿದ್ದಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಈ ಘಟನೆ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವಿಕೃತನ ನಡೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಮನಕಲಕುವ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ವೈರಲ್‌ ವೀಡಿಯೊದಲ್ಲಿ, ಮಗುವೊಂದು ತನ್ನ ತಾಯಿಯೊಂದಿಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಓಡಿ ಬಂದು ಮಗುವನ್ನು ಒದ್ದಿದ್ದಾನೆ. ಇದರಿಂದ ಆ ಮಗು ಗಾಳಿಯಲ್ಲಿ ಚೆಂಡಿನಂತೆ ಹಾರಿ ಬಿದ್ದಿದ್ದಾನೆ. ಈ ವಿಡಿಯೋ ಅನ್ನು ನೆಟ್ಟಿಗರು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಮಾಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

Bengaluru Shocker Man Kicks Playing Child Like Football Arrested Video Viral

ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಎಫ್‌ಐಆರ್ ಪ್ರಕಾರ, ಶಂಕಿತ ರಂಜನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಕೆಲವು ಮಕ್ಕಳೊಂದಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ಐದು ವರ್ಷದ ಮಗುವನ್ನು ಕಾಲಿನಿಂದ ಒದ್ದಿದ್ದಾನೆ. ಮಗುವಿನ ತಾಯಿ ಹಾಗೂ ರಂಜನ್ ನೆರೆಹೊರೆಯ ಮನೆಗಳಲ್ಲಿ ವಾಸವಿದ್ದರು. ಮಗುವಿನ ಮೇಲಿನ ಹಲ್ಲೆಯಿಂದಾಗಿ ಕಣ್ಣಿನ ಬಳಿ ಗಂಭೀರ ಗಾಯವಾಗಿದೆ. ದೂರುದಾರರು ಮೂಲತಃ ದೊಡ್ಡಮಾವಳ್ಳಿಯವರಾಗಿದ್ದು, ತ್ಯಾಗರಾಜನಗರದಲ್ಲಿನ ತನ್ನ ಸಹೋದರನನ್ನು ಭೇಟಿ ಮಾಡಲು ಬಂದಿದ್ದರು. ಈ ಘಟನೆಯು ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿ ಮಾನಸಿಕ ಅಸ್ವಸ್ಥ

ತ್ಯಾಗರಾಜನಗರದಲ್ಲಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನನ್ನು ಒದೆಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಹಿಡಿದ ನಂತರ ಬನಶಂಕರಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು 35 ವರ್ಷದ ರಂಜನ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಅವನ ಮಾನಸಿಕ ಸ್ಥಿತಿ ಸ್ಥಿರವಾಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೋಸ್ಟಲ್ ರಸ್ತೆಯಲ್ಲಿ ಮಗು ತನ್ನ ತಾಯಿ ಮತ್ತು ಸಂಬಂಧಿಕರೊಂದಿಗೆ ಅವರ ಮನೆಯ ಬಳಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಂಜನ್ ತನ್ನ ಮನೆಯ ಗೇಟ್‌ನಿಂದ ಹೊರಬಂದು ಇದ್ದಕ್ಕಿದ್ದಂತೆ ಹಿಂದಿನಿಂದ ಮಗುವಿಗೆ ಒದ್ದಿದ್ದರಿಂದ ದೂರಕ್ಕೆ ಹಾರಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನ ಮುಖ, ಕಾಲುಗಳು ಮತ್ತು ಕೈಗಳ ಮೇಲೆ ಗಾಯಗಳಾಗಿವೆ. ಪೋಷಕರಾದ ದೀಪಿಕಾ ಜೈನ್ ಈ ಘಟನೆ ಬಳಿಕ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಕ್ಕಳ ಮೇಲೆ ರಾಕ್ಷಸನಂತೆ ಹಲ್ಲೆ ಮಾಡುವ ಈ ಕಿರಾತಕ ಜೈಲಲ್ಲಿರಬೇಕು. ಮಗುವಿಗೆ ರಸ್ತೆಯಲ್ಲಿ ಜಾಡಿಸಿ ಒದ್ದವನ ವಿರುದ್ಧ ದೂರು ಕೊಟ್ಟರೆ, ಬೆಂಗಳೂರಿನ ಬನಶಂಕರಿ ಪೊಲೀಸರು ಕೆಲಸಕ್ಕೆ ಬಾರದ ಸೆಕ್ಷನ್ ಹಾಕಿ ಬಿಟ್ಟುಕಳಿಸಿದ್ದಾರೆ. ಇವನು ಯಾರನ್ನಾದರೂ ಬಲಿ ತೆಗೆದುಕೊಂಡ ಮೇಲೆ ಎಚ್ಚೆತ್ತುಕೊಳ್ತೀರಾ? ಎಂದು ಬೆಂಗಳೂರಿನ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+