ಬೆಂಗಳೂರು ಐಟಿ ವಿಶ್ವದಲ್ಲೇ ಹೊಸ ದಾಖಲೆ: ಈ ಕಾರಣಕ್ಕೆ ಭೂಮಿ ಬೆಲೆ ಹೆಚ್ಚಳ ಸಾಧ್ಯತೆ
ಬೆಂಗಳೂರು ಐಟಿಯು ವಿಶ್ವದಲ್ಲೇ ಹೊಸ ದಾಖಲೆಯನ್ನು ಬರೆದಿದ್ದು. ಇದರಿಂದ ಬೆಂಗಳೂರಿನಲ್ಲಿ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಹೌದು ಬೆಂಗಳೂರಿನಲ್ಲಿ ಈಗಾಗಲೇ ಭೂಮಿಗೆ ಬಂಗಾರದ ಬೆಲೆ ಇದೆ ನಿಜ. ಆದರೆ ಬೆಂಗಳೂರಿನಲ್ಲಿ ಐಟಿ ವಲಯವೂ ಎಐ ಬಂದ ಮೇಲೆ ಸವಾಲುಗಳನ್ನು ಎದುರಿಸಲಿದೆ. ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವ ಆತಂಕದ ನಡುವೆಯೇ ಹೊಸ ಬೆಳವಣಿಗೆ ನಡೆದಿದೆ. ಇದು ರಿಯಲ್ ಎಸ್ಟೇಟ್‌ಗೆ ಹೊಸ ಬೂಸ್ಟ್ ನೀಡುವ ನಿರೀಕ್ಷೆ ಇದೆ.
ವಿಶ್ವದ ಟಾಪ್ 10 ತಂತ್ರಜ್ಞಾನ ಕ್ಷೇತ್ರದಲ್ಲಿ (Tech Markets) ಬೆಂಗಳೂರು 6 ನೇ ಸ್ಥಾನದಲ್ಲಿದೆ. ಈ ಮೂಲಕ ಭಾರತದಲ್ಲೇ ಐಟಿ ಕ್ಷೇತ್ರದಲ್ಲಿ ಬೆಂಗಳೂರು ಹೊಸ ದಾಖಲೆಯನ್ನು ಬರೆದಿದೆ. ಇದರಿಂದ ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.

ವಿಶ್ವದ ಟಾಪ್ 10 ತಂತ್ರಜ್ಞಾನ ಕ್ಷೇತ್ರದಲ್ಲಿ (Tech Markets) ಬೆಂಗಳೂರು 6 ನೇ ಸ್ಥಾನದಲ್ಲಿದೆ. - ಪ್ಯಾರಿಸ್, ಟೋಕಿಯೊ ಮತ್ತು ಬೋಸ್ಟನ್ ನಂತಹ ಜಾಗತಿಕ ನಗರಗಳಿಗಿಂತ ಮುಂದಿದೆ. ಈ ಮಾನ್ಯತೆ ಕರ್ನಾಟಕದ ಆವಿಷ್ಕಾರ, ಪ್ರತಿಭಾನ್ವಿತರಿಗೆ ಅವಕಾಶ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಯ ಮೇಲಿನ ಸ್ಥಿರ ಗಮನವನ್ನು ಪ್ರತಿಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರು ಐಟಿ ವಲಯದಲ್ಲಿ ಭಾರತವನ್ನು ಮುನ್ನಡೆಸುತ್ತಿದೆ. ಬೆಂಗಳೂರಿನ ಪ್ರತಿಭಾನ್ವಿತ ಪ್ರತಿಭೆಗಳ ಸಮೂಹ, ಹೊಸತನ್ನು ಕಂಡುಹಿಡಿಯುವ ಮನೋಭಾವ ಮತ್ತು ಅವಿನಾಭಾವ ಶಕ್ತಿಯೇ ಇದಕ್ಕೆ ಕಾರಣ. ಈ ಮೂಲಕ ವಿಶ್ವದ ಪ್ರಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಬೆಂಗಳೂರನ್ನು ಒಂದನ್ನಾಗಿ ಮಾಡಿದೆ. ನಮ್ಮ ನಗರವು ಪ್ರತಿದಿನ ಪ್ರಗತಿಗೆ ಕಾರಣವಾಗುವ ನಮ್ಮ ಜನರ ದೃಢನಿಶ್ಚಯ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತದೆ.
ಬೆಂಗಳೂರು ಬೆಳವಣಿಗೆ ಮತ್ತು ಹೊಸತನ್ನು ಪ್ರೋತ್ಸಾಹಿಸುವ ವಾತಾವರಣದೊಂದಿಗೆ, ನಾವು ಭವಿಷ್ಯಕ್ಕಾಗಿ ಅವಕಾಶಗಳನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ. ಎಲ್ಲ ರೀತಿಯಲ್ಲೂ, ಬೆಂಗಳೂರು ಭಾರತದ ಕನಸನ್ನು ಮುಂದಕ್ಕೆ ಸಾಗಿಸುತ್ತಾ ಎತ್ತರವಾಗಿ ನಿಂತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರು ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ: ಇನ್ನು ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ. ಬೆಂಗಳೂರಿನಲ್ಲಿ ವಿವಿಧ ಯೋಜನೆಗಳ ಕಾರಣಕ್ಕೆ ಈಗಾಗಲೇ ಭೂಮಿ ಬೆಲೆ ದುಬಾರಿಯಾಗಿದೆ. ಅಲ್ಲದೇ ಮೆಟ್ರೋ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರಣಕ್ಕೆ ಬೆಂಗಳೂರು ಮಾತ್ರವಲ್ಲ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇದರ ನಡುವೆ ಐಟಿ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಮುನ್ನಡೆ ಸಾಧಿಸಿರುವುದು ರಿಯಲ್ ಎಸ್ಟೇಟ್‌ಗೆ ಹೊಸ ಬೂಸ್ಟ್ ನೀಡುವ ನಿರೀಕ್ಷೆ ಇದೆ.












Click it and Unblock the Notifications