ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಮಾಗಡಿಗೆ ಮೂರು ಪ್ರಮುಖ ಯೋಜನೆಯ ಬಂಪರ್!
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಅವರ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಗುವಂತೆ ಕಾಣಿಸುತ್ತಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಶಾರ್ಟ್ ಲಿಸ್ಟ್ ಮಾಡಿತ್ತು. ಆದರೆ, ಇದೀಗ ಏಕಾಏಕಿ ಮಾಗಡಿ ಹೆಸರು ಇದರಲ್ಲಿ ಕೇಳಿ ಬಂದಿದೆ. ಇದರಿಂದ ಈ ಭಾಗದಲ್ಲಿ ಮೂರು ಭರ್ಜರಿ ಯೋಜನೆಗಳು ಬಂದತೆ ಆಗಿದ್ದು, ಈ ಭಾಗದಲ್ಲಿ ಭೂಮಿ ಇರುವವರು ಕೋಟ್ಯಾಧಿಪತಿಗಳಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸದ್ದಿಲ್ಲದೆ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಚಿಕ್ಕಸೋಲೂರು ಹಾಗೂ ಸಿಡಗದ ಹಳ್ಳಿ ಎರಡು ಪ್ರದೇಶಗಳನ್ನು ಪರಿಶೀಲನೆ ಮಾಡಿರುವುದು ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವಾಗಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಾಗಡಿ ಗ್ರಾಮಾಂತರ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಉಪ ಮುಖ್ಯಮಂತ್ರಿಯ ಮಾಸ್ಟರ್ ಪ್ಲ್ಯಾನ್‌ಗಳಲ್ಲಿ ಒಂದಾಗಿದೆ. ಆದರೆ, ಈ ಪ್ಲ್ಯಾನ್‌ನಿಂದ ಈ ಭಾಗದ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಕಾರಣವಾಗಿದೆ.

ಮಾಗಡಿ ಭಾಗದಲ್ಲಿ ಈಗಾಗಲೇ ಎರಡು ಪ್ರಮುಖ ಯೋಜನೆಗಳು ಇವೆ. ಇದರೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ನಿರ್ಮಾಣವಾದರೆ, ರಾಮನಗರದ ಈ ಭಾಗದಲ್ಲಿ ಭಾರೀ ಅದೃಷ್ಟವೇ ಖುಸಲಾಯಿಸಲಿದೆ ಎನ್ನುವ ನಿರೀಕ್ಷೆ ಜೋರಾಗಿದ್ದು. ರಿಯಲ್ ಎಸ್ಟೇಟ್‌ದಾರರು ನಿಧಾನವಾಗಿ ಈ ಕಡೆ ಬರುತ್ತಿದ್ದಾರೆ. ಇಲ್ಲಿಯ ವರೆಗೆ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೇಸ್‌ನಲ್ಲಿ ಕುಣಿಗಲ್ - ಕನಕಪುರ ಹಾಗೂ ನೆಲಮಂಗಲ ಶಾರ್ಟ್‌ಲಿಸ್ಟ್‌ನಲ್ಲಿದ್ದರೆ. ಬಿಡದಿ ಹಾಗೂ ಶಿರಾದ ಚರ್ಚೆ ಸಹ ಜೋರಾಗಿತ್ತು. ಇದೀಗ ಸದ್ದಿಲ್ಲದೆ ಮಾಗಡಿ ಸಹ ಸೇರ್ಪಡೆಯಾಗಿದ್ದು. ಈ ಭಾಗದ ಭೂಮಿಯ ಮೇಲೂ ರಿಯಲ್ ಎಸ್ಟೇಟ್‌ದಾರರು ಕಣ್ಣಿರಿಸಿದ್ದಾರೆ.
ಕೇಂದ್ರ ಸರ್ಕಾರದ ತಂಡವು (ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ - ಎಎಐ) ಪರಿಶೀಲನೆ ನಡೆಸಿದ ಬೆನ್ನಲ್ಲೇ ಇಲ್ಲಿ ಭೂಮಿಯನ್ನು ಹೊಂದಿರುವವರು ಹಾಗೂ ರಿಯಲ್ ಎಸ್ಟೇಟ್‌ದಾರರು ಅಲರ್ಟ್ ಆಗಿದ್ದಾರೆ. ಇಲ್ಲಿನ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಿಯಲ್ ಎಸ್ಟೇಟ್‌ದಾರರು ಚುರುಕಾಗಿದ್ದು. ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಈಗಾಗಲೇ ಈ ಭಾಗದಲ್ಲಿ ಮೂರು ಪ್ರಮುಖ ಯೋಜನೆಗಳು ಇವೆ. ಅದು ಏನು ಎನ್ನುವ ವಿವರ ನೋಡೋಣ.
ಈ ಭಾಗದಲ್ಲಿ ಮೂರು ಪ್ರಮುಖ ಯೋಜನೆ!
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ಭಾಗದಲ್ಲಿ ನಿರ್ಮಾಣವಾದರೆ, ಬಂಪರ್ ಎಂದೇ ಹೇಳಲಾಗುತ್ತಿದೆ. ಬೆಂಗಳೂರಿನ ಹೊರವಲಯದ ಸುತ್ತ ರಿಂಗ್ ರಸ್ತೆ ಅಭಿವೃದ್ಧಿ ಪ್ರಕ್ರಿಯೆ ಜೋರಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾ.ಮಂಜುನಾಥ್ ಅವರು ಈ ವಿಷಯವಾಗಿ ಕೇಂದ್ರ ಲೋಕೋಪಯೋಗಿ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿ, ಅನುಮೋದನೆ ಪಡೆದುಕೊಂಡಿದ್ದು, ಸರ್ವೆ ಪ್ರಕ್ರಿಯೆ ಜೋರಾಗಿದೆ.
ಇನ್ನು ಈ ಭಾಗದಲ್ಲಿ ಮೆಟ್ರೋ ರೈಲ್ವೆ ಅಭಿವೃದ್ಧಿಕಾರ್ಯ ಸಹ ಚುರುಕು ಪಡೆದುಕೊಳ್ಳುತ್ತಿದೆ. ಬೆಂಗಳೂರು ನಮ್ಮ ಮೆಟ್ರೋ ರೈಲ್ವೆ ಯೋಜನೆಗೆ ಪೂರಕವಾಗಿ 287 ಕಿ. ಮೀ ವ್ಯಾಪ್ತಿಯ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ರಿಂಗ್ ರೈಲ್ವೆ ಸಂಚಾರಕ್ಕೂ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಅಂತಿಮವಾದರೆ ಈ ಭಾಗದಲ್ಲಿ ಭೂಮಿಗೆ ಚಿನ್ನದ ರೇಟ್ ಫಿಕ್ಸ್ ಅಂತಲೇ ಹೇಳಲಾಗಿದೆ.












Click it and Unblock the Notifications