Video Viral: ವಿದ್ಯಾರ್ಥಿಗಳಿಗೆ ಬೆಂಗಳೂರು ರಸ್ತೆಗುಂಡಿ ಸಮಸ್ಯೆ! ವಿಡಿಯೋದಲ್ಲಿ ವಿದ್ಯಾರ್ಥಿನಿಯರ ಮನವಿ

ಬೆಂಗಳೂರು, ಸೆಪ್ಟೆಂಬರ್ 15: ರಾಜಧಾನಿ ಬೆಂಗಳೂರು ಟ್ರಾಫಿಕ್‌ಗೆ ಮಾತ್ರವಲ್ಲದೇ ಹದಗೆಟ್ಟ ರಸ್ತೆಗಳು, ರಸ್ತೆಗುಂಡಿಗಳಿಂದಲೂ ಹೆಸರವಾಸಿ ಎಂಬುದನ್ನು ಮರೆಯುವಂತಿಲ್ಲ. ಇದೀಗ ನಗರದ ಕಳೆದ ರಸ್ತೆ ಮೂಲಸೌಕರ್ಯ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಮೂವರು ಶಾಲಾ ಬಾಲಕಿಯರು ತಮ್ಮ ಶಾಲಾ ಬಸ್‌ನಲ್ಲಿ ಮನೆಗೆ ಹಿಂತಿರುಗುವಾಗ ಚಿತ್ರೀಕರಿಸಿದ ವೀಡಿಯೊದಲ್ಲಿ ಬೆಂಗಳೂರಿನ ರಸ್ತೆಯ ದುಸ್ಥಿತಿ ಬಹಿರಂಗವಾಗಿದೆ. ಕೇವಲ ಒಂದು ನಿಮಿಷದ ವೀಡಿಯೊದಲ್ಲಿ ಹೊಂಡಗಳಿಂದ ತುಂಬಿರುವ ರಸ್ತೆಗಳು ಮತ್ತು ಅದರಿಂದಾಗುವ ಟ್ರಾಫಿಕ್ ತೊಂದರೆಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಾರೆ ಎಂಬುದನ್ನು ಅವರು ವಿವರಿಸಿದ್ದಾರೆ.

ಶಾಲಾ ಬಸ್‌ನ ಹಿಂಬದಿಯ ಸೀಟಿನಲ್ಲಿ ಕುಳಿತ ಮೂವರು ವಿದ್ಯಾರ್ಥಿನಿಯರು ವೀಡಿಯೊ ಚಿತ್ರೀಕರಿಸಿದ್ದಾರೆ. ರಸ್ತೆಯಗಳ ಈ ದುಸ್ಥಿತಿಯಿಂದಾಗಿ ರಸ್ತೆಗಳಲ್ಲಿ ಗಂಟೆ ಗಟ್ಟಲೇ ಕಳೆಯುವಂತಾಗಿದೆ. ಟ್ರಾಪಿಕ್‌ನಲ್ಲಿ ಸಿಲುಕಿಕೊಳ್ಳುತ್ತಿದ್ದೇವೆ. ಇದು ನಮ್ಮ ಅಧ್ಯಯನದ ಮೇಲೂ ಪರಿಣಾಮ ಬೀರುತ್ತಿದೆ. ಮನೆಯಿಂದ ಶಾಲೆಗೆ ತೆರಳಲು 14 ಕಿಲೋಮೀಟರ್ ದೂರ ಕ್ರಮಿಸಬೇಕು. ನಿತ್ಯ ನಾವು ಬೆಳಗ್ಗೆ ಶಾಲೆ ತಲುಪಲು 20 ನಿಮಿಷಗಳು ಹಿಡಿಯುತ್ತದೆ. ಅದೇ ಶಾಲೆ ಬಿಟ್ಟ ನಂತರ ಮನೆ ಸೇರಲು ಒಂದು ಗಂಟೆಯಿಂದ ಎರಡು ಗಂಟೆ ಬೇಕಾಗುತ್ತದೆ. ಇದರಿಂದ ಕಿರಿ ಕಿರಿ ಉಂಟಾಗುತ್ತದೆ ಎಂದು ಬಾಲಕಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Bengaluru Schoolgirls Highlight Poor Roads School Bus Overturns After Hitting Pothole

'ಈ ರಸ್ತೆಗುಂಡಿಯಿಂದ ಕೇವಲ ಸಂಚಾರಕ್ಕೆ ಮಾತ್ರ ತೊಂದರೆ ಅಲ್ಲ. ಇದು ದೈಹಿಕ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಿದೆ. ಹೊಂಡಗಳಲ್ಲಿ ಬಸ್ ತೂಗುವ ವೇಳೆ ಕೆಲವೊಮ್ಮೆ ಗಾಯಗಳು ಆಗುವಂತಹ ಸಾಧ್ಯತೆ ಇದೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಆಗಬೇಕು. ಬದಲಾವಣೆ ಆಗಬೇಕು, ದಯವಿಟ್ಟು ನಮಗೆ ಸಹಾಯ ಮಾಡಿ. ಇದು ಸಾಮಾನ್ಯ ಪರಿಸ್ಥಿತಿ ಅಲ್ಲ' ಆ ವಿದ್ಯಾರ್ಥಿನಿಯರು ಮನವಿ ಮಾಡಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.

ಗುಂಡಿಗೆ ಇಳಿದು ಶಾಲಾ ಬಸ್ ಪಲ್ಟಿ...

ಎರಡು ದಿನಗಳ ಹಿಂದೆ ಸೆಪ್ಟೆಂಬರ್ 12ರಂದು ನಗರದ ಪಣತ್ತೂರು ಮುಖ್ಯರಸ್ತೆಯಲ್ಲಿ 20 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ಗಾಳಿ ದೊಡ್ಡ ಹೊಂಡದಂತಿದ್ದ ಗುಂಡಿಗೆ ಇಳಿಯುತ್ತಿದ್ದಂತೆ ಬಸ್ ಉರುಳಿಬಿದ್ದಿದೆ. ಬಸ್‌ನ ಹಿಂಬಾಗಿಲಿನ ಮೂಲಕ ವಿದ್ಯಾರ್ಥಿಗಳನ್ನು ರಕ್ಷಿಸಿದದ್ದರಿಂದ ಜೀವಕ್ಕೆ ಹಾನಿಯಾಗಿಲ್ಲ ಎಂದು ವರದಿ ಆಗಿದೆ. ಇದೆಲ್ಲ ಘಟನೆಯು ಬಸ್ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮರಾದಲ್ಲಿ ದಾಖಲಾಗಿದೆ. ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ ವಾಹನವನ್ನು ಹಿಂದಿಕ್ಕುವ ವೇಳೆ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ ಎಂದು ವಿಡಿಯೋದಲ್ಲಿ ಕಾಣುತ್ತದೆ.

ನಗರದ ಅನೇಕ ಕಡೆಗಳಲ್ಲಿ ರಸ್ತೆಗುಂಡಿ ಸಮಸ್ಯೆ

ಇದು ಕೇವಲ ಎರಡು ರಸ್ತೆಗಳ ಸಮಸ್ಯೆಯಲ್ಲ ನಗರದ ಅನೇಕ ಮುಖ್ಯ ರಸ್ತೆಗಳ ಪರಿಸ್ಥಿತಿ ಇದೇ ರೀತಿ ಇದೆ. ಕೆಂಗೇರಿ, ಜ್ಞಾನಭಾರತಿ ಸಂಪರ್ಕಿಸುವ ಮುಖ್ಯದಾರಿ, ಈಜಿಪುರ ಮೇಲ್ಸೇತುವೆ ಬಳಿ ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ರಿಚ್ಮಂಡ್ ವೃತ್ತದ ಸಮೀಪ, ಜಿಬಿಎನಿಂದ ಶಾಂತಿನಗರ ಬರುವ ರಸ್ತೆ, ಶೇಷಾದ್ರಿಪುರಂ, ರಾಜಾಜಿನಗರ, ಬೆಳ್ಳಂದೂರು ರಸ್ತೆಯ ಕೆಲವೆಡೆ ಸೇರಿದಂತೆ ನಗರದಲ್ಲಿ ಅನೇಕ ರಸ್ತೆಗಳಲ್ಲಿ ಇಂಥದ್ದೆ ಸ್ಥಿತಿ ಇದೆ. ಪಾಲಿಕೆ ಪ್ರತಿ ವರ್ಷ ರಸ್ತೆ ಗುಂಡಿ ಮುಚ್ಚಲು ಹಣ ನೀಡುತ್ತದೆ. ಅಧಿಕಾರಿಗಳು ಬಂದು ಪರಿಶೀಲಿಸುತ್ತಾರೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರುತ್ತಿದ್ದಾರೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+