ಬೆಂಗಳೂರು: 44 ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳಿಂದ ಹಣ ವಸೂಲಿ

ಬೆಂಗಳೂರು, ಅಕ್ಟೋಬರ್ 20: ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳರಲಿ, ಖಾಸಗಿ ಆಸ್ಪತ್ರೆಗಳಿರಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಒಂದೇ ಮಾದರಿಯ ದರವನ್ನು ನಿಗದಿ ಮಾಡಿದೆ.
ಆದರೂ ಕೂಡ ಹಲವು ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿವೆ.

ಆಫೀಸ್ ಬಾಯ್ ಆಗಿ 46 ವರ್ಷದ ವ್ಯಕ್ತಿಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿತ್ತು. ಉಸಿರಾಟದ ತೊಂದರೆಯೂ ಇದ್ದ ಕಾರಣ ಶಿವಾಜಿನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎಂದು ಹೇಳಿದ್ದರು. ನಿತ್ಯ ಆಕ್ಸಿಜನ್, ಹಾಸಿಗೆ ಎಲ್ಲವೂ ಸೇರಿ 30 ಸಾವಿರ ವೆಚ್ಚವಾಗುತ್ತದೆ ಎಂದು ತಿಳಿಸಿದ್ದರು.

ಜೂನ್ 23 ರಂದು ಎಲ್ಲಾ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳಿಗೆ ಒಂದೇ ದರವನ್ನು ತೆಗೆದುಕೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಖಾಸಗಿ ಆಸ್ಪತ್ರಗಳಲ್ಲಿ ಜನರಲ್ ಬೆಡ್‌ಗೆ 5200, ಎಚ್‌ಡಿಯುಗೆ 7000, ಐಸಿಯುಗೆ 8500 ವೆಂಟಿಲಟರ್ ಬೆಡ್‌ಗೆ 10 ಸಾವಿರ ದಿನಕ್ಕೆ ತೆಗೆದುಕೊಳ್ಳಬಹುದು ಎಂದು ಹೇಳಲಾಗಿತ್ತು.

engaluru’s COVID-19 Patients Are Being Overcharged By Private Hospitals

ಆದರೆ ಖಾಸಗಿ ಆಸ್ಪತ್ರೆಗಳು ಜನರಲ್ ವಾರ್ಡ್‌ಗೆ 10 ಸಾವಿರ ರೂ. ಎಚ್‌ಡಿಯುಗೆ 12 ಸಾವಿರ, ಐಸಿಯುಗೆ 15 ಸಾವಿರ, ವೆಂಟಿಲೇಟರ್‌ಗೆ 25 ಸಾವಿರ ರೂ ತೆಗೆದುಕೊಳ್ಳುತ್ತಿದೆ. ಈ ಪ್ಯಾಕೇಜ್‌ಗಳು ಆಹಾರ ಮತ್ತು ಪಿಪಿಇಯನ್ನು ಒಳಗೊಂಡಿರುತ್ತೆ. ರೋಗಿಗೆ ಬೇರೆ ದಾರಿಯೇ ಇರಲಿಲ್ಲ. ಅವರ ಪತ್ನಿ ಚಿನ್ನವನ್ನು ಮಾರಾಟ ಮಾಡಿ ಆಸ್ಪತ್ರೆ ಬಿಲ್ ಪಾವತಿಸಿದ್ದರು. ಎಂಟು ದಿನಕ್ಕೆ 2.4 ಲಕ್ಷ ಬಿಲ್ ಮಾಡಿದ್ದರು.

ಈ ಕುರಿತು 'ದಿ ನ್ಯೂಸ್ ಮಿನಿಟ್' ವರದಿ ಮಾಡಿದೆ. ಇದೀಗ ಸಾಲವನ್ನು ಹೇಗೆ ತೀರಿಸುವುದು ಎಂಬುದೇ ರೋಗಿಯ ದೊಡ್ಡ ಪ್ರಶ್ನೆಯಾಗಿದೆ. ಸರ್ಕಾರವು ಖಾಸಗಿ ಆಸ್ಪತ್ರೆಗೆ ಸಹಾಯ ಮಾಡುತ್ತಿದೆ ಆದರೆ ಬಡವರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ಬೆಂಗಳೂರಿನಲ್ಲಿ 44 ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ಜನಾರೋಗ್ಯ ಚಳವಳಿಯ ಸದಸ್ಯ ಅಖಿಲಾ ವಾಸನ್ ಮಾತನಾಡಿ, ಸರ್ಕಾರವು ಖಾಸಗಿ ಆಸ್ಪತ್ರೆಗಳ ಮೇಲೆ ಮೃದು ಧೋರಣೆಯನ್ನು ಹೊಂದಿದೆ. ಖಾಸಗಿ ಆಸ್ಪತ್ರೆಗಳು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಿಲ್ಲ.

ಕೊರೊನಾದಿಂದಾಗಿ ಈಗಾಗಲೇ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಭರಿಸುವಷ್ಟು ಶಕ್ತಿ ಅವರಲ್ಲಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+