Get Updates
Get notified of breaking news, exclusive insights, and must-see stories!

ನಕಲಿ ಪಾಸ್‌ಪೋರ್ಟ್, ವೀಸಾ ತಯಾರಿಸುತ್ತಿದ್ದ ಬಾಂಗ್ಲಾದೇಶಿ ಗ್ಯಾಂಗ್ ಅರೆಸ್ಟ್..!

ಬೆಂಗಳೂರು, ಜೂನ್ 11: ಎಟಿಎಂ ದರೋಡೆ ಮಾಡಿದ್ದ ಕೇಸನ್ನು ಬೆನ್ನು ಬಿದ್ದಿ ಬೆಂಗಳೂರು ಗ್ರಾಮಾಂತರ ಪೊಲೀಸರಿಗೆ ದೇಶಕ್ಕೆ ಆಪತ್ತು ತಂದಿಡುತ್ತಿದ್ದ ಭಯಾನಕ ಗ್ಯಾಂಗ್ ಸಿಕ್ಕಿಬಿದ್ದಿದೆ. ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಐಡಿಯನ್ನು ತಯಾರು ಮಾಡುತ್ತಿದ್ದ ಬಾಂಗ್ಲಾ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಮ್ಮ ದೇಶದಿಂದ ಮತ್ತೊಂದು ದೇಶಕ್ಕೆ ಹೋಗಬೇಕೆಂದರೆ ಪಾಸ್‌ಪೋರ್ಟ್ ಮತ್ತು ವೀಸಾ ಬೇಕು. ಆದರೆ, ವೀಸಾ ಪಾಸ್‌ಪೋರ್ಟ್‌ಗಳಿಲ್ಲದೇ ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದರೆ ಅದು ದೇಶದ್ರೋಹ, ಭದ್ರತೆಗೂ ಕುತ್ತು ಉಂಟಾಗಲಿದೆ.

ಅಕ್ರಮವಾಗಿ ಬಾಂಗ್ಲದಿಂದ ಬರುತ್ತಿದ್ದವರಿಗೆ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಕಾರ್ಡ್‌ಗಳನ್ನು ಮಾಡಿಕೊಡುವ ಮೂಲಕ ಬಾಂಗ್ಲಾದೇಶಿಯರಿಗೆ ಕೆಲವು ಆರೋಪಿಗಳು ನೆರವಾಗುತ್ತಿದ್ದರು. ಆಧಾರ್ ಕಾರ್ಡ್‌ಗಳು, ಪಾನ್ ಕಾರ್ಡ್, ಡಿಎಲ್, ಆಯುಷ್ ಕಾರ್ಡ್, ಈ-ಶ್ರಮ ಕಾರ್ಡ್, ಪಾಸ್ ಪೋರ್ಟ್, ವೋಟರ್ ಐಡಿ, ಇಷ್ಟೆಲ್ಲಾ ಐಡಿಗಳು ಇದ್ದರೇ ಅದನ್ನು ನೋಡಿದ ತಕ್ಷಣ ಈತ ಭಾರತೀಯ ಅಂತ ದೃಡಿಕರಿಸುತ್ತೇವೆ. ಜೊತೆಗೆ ಇದೆಲ್ಲಾ ಭಾರತದ ಪ್ರಜೆಗಳ ಹಕ್ಕು ಹಾಗು ಗುರುತು, ಇಷ್ಟು ಹಕ್ಕು ಹಾಗು ಗುರುತುಗಳು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ನೆಲಸಿರೊ ಜನಗಳಿಗೆ ಸಿಕ್ಕರೇ ಏನೆಲ್ಲಾ ಆಗಬಹುದು. ಇಂಥಾ ಮಾಯಾಜಾಲವನ್ನು ಮಾದನಾಯಕನಹಳ್ಳಿ ಪೊಲೀಸರು ಬೇಧಿಸಿದ್ದಾರೆ.

ಎಟಿಎಂ ಕಳ್ಳತನ ಕೇಸ್ ಬೆನ್ನುಹತ್ತಿದಾಗ ಮಹಾಜಾಲ ಬಯಲಿಗೆ..!

ಎಟಿಎಂ ಕಳ್ಳತನ ಕೇಸ್ ಬೆನ್ನುಹತ್ತಿದಾಗ ಮಹಾಜಾಲ ಬಯಲಿಗೆ..!

ಭಾರತದಲ್ಲಿ ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ಬಂದಿದ್ದಾರೆ ಅನ್ನೊದು ಗೊತ್ತಿರೊ ವಿಚಾರವೇ. ಈ ಗ್ಯಾಂಗ್ ಮಾಡಿರೊ ಕೃತ್ಯ ಹಾಗು ಈ ಗ್ಯಾಂಗ್ ಕಾರ್ಯ ನಿರ್ವಹಿಸುತಿದ್ದ ರೀತಿ ನೋಡಿದರೇ ನಿಜಕ್ಕೂ ಅಚ್ಚರಿಯಾಗುತ್ತದೆ. ಕಳೆದ ಎಪ್ರಿಲ್ ನಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಎಟಿಎಂ ಕಳ್ಳತನ ಆಗಿತ್ತು. ಆಗ ಕೇಸ್ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭ ಮಾಡಿ ಕಳ್ಳತನ ಮಾಡಿದ್ದ ಇಸ್ಮಾಯಿಲ್ ಎಂಬ ಅರೋಪಿಯನ್ನು ಬಂಧಿಸಿದ್ದರು. ಆರೋಪಿಯನ್ನು ಅರೋಪಿ ಎಟಿಎಂನಲ್ಲಿ ಕದ್ದಿದ್ದ ಹದಿನೆಂಟು ಲಕ್ಷ ಹಣ ಎಲ್ಲಿ ಅಂದಾಗ ಶಾಕ್ ಅಗುವಂತಹ ಉತ್ತರ ಹೊರಬಂದಿದೆ, ಅದೇನು ಅಂದರೇ ಕದ್ದ ಹಣ ಕೆಲವೇ ದಿನದಲ್ಲಿ ಬಾಂಗ್ಲಾದೇಶ ತಲುಪಿತ್ತು. ಯಾಕೆ ಆಂತ ವಿಚಾರಿಸಿದಾಗ ಬಹುದೊಡ್ಡ ರಾಕೇಟ್ ಒಂದು ಹೊರಗೆ ಬಂದಿದೆ , ಗ್ಯಾಂಗ್ ನಲ್ಲಿ ಇದ್ದ ಸುಮಾರು ಒಂಬತ್ತು ಜನರಾದ ಸೈದುಲ್ ಅನಕೂನ್. ಶಾಹಿದ್ ಮಹಮದ್, ಅಬ್ದೂಲ್, ಆಯೀಶಾ, ಸೈಯದ್ ಮನ್ಸೂರ್, ಅಮೀನ್ ಸೇಠ್, ಇಸ್ತಾಕ್ ಪಾಷಾ, ಮಹಮದ್ ಇದಾಯತ್, ಸುಹೇಲ್ ಮನ್ಸೂರ್ ಮತ್ತು ಅಬ್ದುಲ್ ಅಲೀಮ್‌ನನ್ನು ಹಂತ ಹಂತವಾಗಿ ಬಂಧಿಸಲಾಗಿದೆ.

ಬಿಬಿಎಂಪಿಯ ವೈದ್ಯಾಧಿಕಾರಿ ಸೇರಿದಂತೆ ನಕಲು ಸೀಲು ಬಳಕೆ

ಬಿಬಿಎಂಪಿಯ ವೈದ್ಯಾಧಿಕಾರಿ ಸೇರಿದಂತೆ ನಕಲು ಸೀಲು ಬಳಕೆ

ತ್ರಿಪುರಾ ಗಡಿಯಿಂದ ಅಕ್ರಮವಾಗಿ ನುಸುಳಿ ಭಾರತಕ್ಕೆ ಬರ್ತಿದ್ದ ಅರೋಪಿಗಳಿಗೆ ಶಾಹಿದ್ ಮತ್ತು ಅಮೀನ್ ಸೇಠ್ ನಕಲಿ ದಾಖಲೆಗಳನ್ನು ತಯಾರು ಮಾಡುತ್ತಿದ್ದರು. ನಕಲಿ ದಾಖಲೆಗಳನ್ನು ಬಳಸಿ ಅಸಲಿ ಆಧಾರ್ ಕಾರ್ಡ್ ಪಡೆಯುತ್ತಿದ್ದರು. ಎಷ್ಟರ ಮಟ್ಟಗೆ ಅಂದ್ರೆ ದಾಖಲಾತಿಗಳನ್ನು ಸೃಷ್ಠಿ ಮಾಡಲು . ಬಿಬಿಎಂಪಿ ವೈದ್ಯಾಧಿಕಾರಿಯ ಸೀಲ್ ಮಾಡಿಸಿದ್ದರು. ನಕಲಿ ಸೀಲು ಬಳಿಸಿ ಆಧಾರ್‌ಗೆ ಗೆಜೆಟೆಡ್ ಅಧಿಕಾರಿ ಎಂದು ಸಹಿ ಹಾಕುತ್ತಿದ್ದರು. ಬೌರಿಂಗ್, ವಾಣಿವಿಲಾಸ ಆಸ್ಪತ್ರೆ ಹಾಗು ಬಿಬಿಎಂಪಿ ಅರೋಗ್ಯ ಕೇಂದ್ರದ ಸೀಲ್‌ಗಳು ಈಗ ಸೀಜ್ ಆಗಿವೆ.

122 ಜನರು ಬಾಂಗ್ಲಾದೇಶದಿಂದ ಭಾರತಕ್ಕೆ

122 ಜನರು ಬಾಂಗ್ಲಾದೇಶದಿಂದ ಭಾರತಕ್ಕೆ

ಈ ರಾಕೆಟ್ ನ ಪ್ರಮುಖ ಆರೋಪಿ ಆತನ ಬ್ಯಾಂಕ್ ಖಾತೆ ಹಾಗೂ ಹವಾಲ ಮೂಲಕ ಕಳೆದ ಒಂದು ವರ್ಷದಲ್ಲಿ 5 ಕೋಟಿ ಹಣದ ವಹಿವಾಟು ನಡೆಸಿರೊ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತ ಭಾರತೀಯ ರೂಪಾಯಿಯನ್ನು ವಿವಿಧ ರೀತಿಯಲ್ಲಿ ಚೆನ್ನೈ, ಕೊಲ್ಕತ್ತಾ, ಪಂಜಾಬ್ ಹಾಗು ದೇಶದ ವಿವಿಧ ಬ್ಯಾಂಕ್‌ಗಳ ಮೂಲಕ ಹಣವನ್ನು ಬಾಂಗ್ಲಾದೇಶಕ್ಕೆ ಕಳಿಸುತಿದ್ದ, ಸದ್ಯ ಹದಿಮೂರು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ. ತನಿಖೆ ವೇಳೆ ಒಟ್ಟು 122 ಜನರು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರೋದು ಪತ್ತೆಯಾಗಿದೆ.

ಪಾಸ್‌ಪೋರ್ಟ್ ಅನ್ನು ಮಾಡಿಸುತ್ತಿದ್ದ ಗ್ಯಾಂಗ್

ಪಾಸ್‌ಪೋರ್ಟ್ ಅನ್ನು ಮಾಡಿಸುತ್ತಿದ್ದ ಗ್ಯಾಂಗ್

""ಬಾಂಗ್ಲಾದಿಂದ ಬರುವವರ ಮಾಹಿತಿ ಮೊದಲೇ ತಿಳಿಯುತ್ತಿದ್ದ ಗ್ಯಾಂಗ್, ಅವರಿಂದ ಹಣ ಪಡೆದು ನಕಲಿ ದಾಖಲೆ ಸೃಷ್ಟಿ ಮಾಡ್ತಾ ಇದ್ದರು ನಂತರ ಆಧಾರ್ ಕಾರ್ಡ್ ತಯಾರಾದ ಬಳಿಕ ಅವರನ್ನ ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ವರ್ಷಕ್ಕೆ 5-6 ಕೋಟಿ ಹಣ ಬಾಂಗ್ಲಾದೇಶಕ್ಕೆ ವರ್ಗಾವಣೆ ಮಾಡ್ತಾ ಇದ್ದ ಗ್ಯಾಂಗ್ ಹಲವು ಗೆಜೆಟೆಡ್ ಸೀಲ್ ಗಳನ್ನು ತಯಾರು ಮಾಡಿಕೊಂಡಿದ್ದರು. ಬಿಬಿಎಂಪಿ ಡಾಕ್ಟರ್ ಹೆಸರಿನಲ್ಲಿ ಹಲವು ಫೇಕ್ ಸೀಲ್ ಗಳು ತಯಾರು ಮಾಡಿದ್ದರು. ಈಗಾಗಲೇ13 ಬ್ಯಾಂಕ್ ಅಕೌಂಟ್ ಗಳನ್ನು ಸೀಜ್ ಮಾಡಲಾಗಿದೆ. ಹಲವು ವರ್ಷಗಳಿಂದ ಇದೇ ರೀತಿ ಕೃತ್ಯ ನಡೆಸ್ತಾ ಇರೋ ಶಂಕೆಯಿದ್ದು ನಕಲಿ ಆಧಾರ್ ಇಟ್ಟುಕೊಂಡು ಪಾಸ್ ಪೋರ್ಟ್ ಸಹ ಮಾಡಿಸ್ತಿದ್ದದ್ದು ಬೆಳಕಿಗೆ ಬಂದಿದೆ. 26 ನಕಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೆಸರಿನ ಲೆಟರ್ ಹೆಡ್‌ಗಳು ಪತ್ತೆ, 92 Enrollment ಫಾರ್ಮ್ ಗಳು ಸಹ ಪತ್ತೆಯಾಗಿದೆ. 123 ಜನ ಆಧಾರ್ ಕಾರ್ಡ್ ಗಳು ಪತ್ತೆಯಾಗಿದೆ'' ಎಂದು ತಿಳಿಸಿದ್ದಾರೆ.

ಮತ್ತಷ್ಟು ಅಕ್ರಮ ವಲಸಿಗರ ಪತ್ತೆಗೆ ಕ್ರಮ

ಮತ್ತಷ್ಟು ಅಕ್ರಮ ವಲಸಿಗರ ಪತ್ತೆಗೆ ಕ್ರಮ

""ಅಕ್ರಮ ವಲಸಿಗರು ಹಾಗೂ ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಹಾಗೂ ಸಹಾಯ ಒದಗಿಸುತ್ತಿದ್ದವರ ವಿರುದ್ಧ ತೀವ್ರ ನಿಗಾ ವಹಿಸಬೇಕು ಮತ್ತು ಅಕ್ರಮ ಚಟುವಟಿಕೆ ಗಳಿಗೆ ನಿಯಂತ್ರಣ ಹೇರಬೇಕು ಎಂದು ನಿರ್ದೇಶನ ನೀಡಿದ್ದೆ. ಅಕ್ರಮ ವಲಸೆ ಸಮಸ್ಯೆಯನ್ನು ನಮ್ಮ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಅಕ್ರಮ ನೆಲಸಿಗರು ಮತ್ತು ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವ ವರ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲು ಈಗಾಗಲೆ ನಿರ್ದೇಶನ ನೀಡಲಾಗಿದೆ'' ಎಂದೂ ಸಚಿವರು ತಿಳಿಸಿದ ಗೃಹ ಸಚಿವರು ಗ್ರಾಮಾಂತರ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಬಾಂಗ್ಲಾದೇಶದಿಂದ ಬಂದು ನಕಲಿ ದಾಖಲೆಯನ್ನು ಸೃಸ್ಟಿಸಿಕೊಳ್ಳುತ್ತಿದ್ದ ಗ್ಯಾಂಗ್ ಆರೋಪಿಗಳಿಂದ 26 ನಕಲಿ ಅಧಾರ್ ಲೆಟರ್ ಹೆಡ್, ಐದು ಸೀಲು, 31 ಅಧಾರ್ ಕಾರ್ಡ್, 13 ಪಾನ್ ಕಾರ್ಡ್,28 ವೋಟರ್ ಐಡಿ, ಹದಿನಾರು ಮೊಬೈಲ್, ಐದು ಡಿಎಲ್, ಮೂರು ಆಯುಷ್ಮಾನ್ ಕಾರ್ಡ್ ಮೆಡಿಕಲ್ ಆಗಿರುವ 92 ನಕಲಿ ಸರ್ಟಿಫಿಕೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಮಾದನಾಯಕನಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+