ಬೆಂಗಳೂರಿನ ರಸ್ತೆಗಳು ಸುರಕ್ಷಿತವಲ್ಲ, ಆತಂಕ ವ್ಯಕ್ತಪಡಿಸಿದ ಟೆಕ್ಕಿ?
ಬೆಂಗಳೂರು, ನವೆಂಬರ್ 16: ನಗರದ ಹೊರವಲಯದಲ್ಲಿ ಕಾರಿನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಅಪರಿಚಿತ ವ್ಯಕ್ತಿಗಳು ಹಿಂಬಾಲಿಸಿದ್ದಾರೆ ಎನ್ನಲಾಗಿದೆ. ನವೆಂಬರ್ 8 ರಂದು ಸರ್ಜಾಪುರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಸಂಬಂಧ ಸೃಜನ್ ಆರ್ ಶೆಟ್ಟಿ ಎಂಬುವವರು ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

"ನವೆಂಬರ್ 8 ರಂದು ಸರ್ಜಾಪುರದಿಂದ ಕ್ಯಾಬ್ ಪಡೆಯುವುದು ಕಷ್ಟಕರವೆಂದು ಪರಿಗಣಿಸಿ ನನ್ನ ಹೆಂಡತಿ ಇತರ ಕೆಲವು ಸಹೋದ್ಯೋಗಿಗಳನ್ನು (2 ಮಹಿಳೆಯರು, ಒಬ್ಬ ಪುರುಷ) ಡ್ರಾಪ್ ಮಾಡಲು ಮುಂದಾದರು. ಅವರ ಕಾರನ್ನು ಪುರುಷರ ಗುಂಪು ಕೆಲವು ಕಿಲೋಮೀಟರ್ ಹಿಂಬಾಲಿಸಿಕೊಂಡು ಬರುತ್ತಿತ್ತು. ಮುಖ್ಯ ರಸ್ತೆಯಲ್ಲಿ ಮಾತ್ರ ನಿಲ್ಲಿಸಲು ಮತ್ತು ಸಾಧ್ಯವಾದಷ್ಟು ಬೇಗ ಪೊಲೀಸರಿಗೆ ಕರೆ ಮಾಡಲು ಆಕೆ ಮುಂದಾಗಿದ್ದಳು" ಎಂದು ಅವರು ಬರೆದಿದ್ದಾರೆ.
I've never felt unsafe in Bangalore - I know my privilege of being a Kannada speaking male - but last Thursday night I felt how unsafe certain parts of the city are post 10pm.
— Srijan R Shetty (@srijanshetty) November 14, 2023
I've seen those horrific videos of fake accidents in Sarjapur where hooligans have tried to blackmail… pic.twitter.com/lwHK8dymZM
"ಚೇಸ್ ಮಾಡುವಾಗ ಉಂಟಾದ ಹಾನಿಗಾಗಿ ಆಘಂತುಕರು ಕಾರಿನಲ್ಲಿರುವವರನ್ನು ಹೊರಗೆ ಹೋಗುವಂತೆ ಹೇಳಿದರು ಎಂದು ಶೆಟ್ಟಿ ಆರೋಪಿಸಿದರು. "ಕೆಲವು ಟೆಂಪೋ ಡ್ರೈವರ್‌ಗಳು ಅವಳ ಕಾರನ್ನು ಹಿಂಬದಿಯಿಂದ ಗುದ್ದಿಸಿದರು. ಕನ್ನಡ ಮಾತನಾಡಲು ಬಾರದ ಜನರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವ ಹಸಿರು ಶರ್ಟ್‌ನ ವ್ಯಕ್ತಿಯೊಂದಿಗೆ ಸೇರಿಕೊಂಡರು. ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ವ್ಯಕ್ತಿಗೆ ಯಾರೊಬ್ಬರೂ ಸಹಾಯ ಮಾಡಲಿಲ್ಲ" ಎಂದು ಆತಂಕ ವ್ಯಕ್ತಪಡಿಸಿದರು.
"ಪೊಲೀಸರನ್ನು ಕರೆದು ನಮಗೆ ಮತ್ತು ಅವಳ 10 ಸ್ನೇಹಿತರನ್ನು ತಕ್ಷಣವೇ ಅವಳ ಸ್ಥಳಕ್ಕೆ ಕರೆಸಿಕೊಳ್ಳುವ ಅವಳ ಬುದ್ಧಿವಂತಿಕೆ ಇರದಿದ್ದರೆ, ಘಟನೆಯು ವಿಭಿನ್ನ ತಿರುವನ್ನು ತೆಗೆದುಕೊಳ್ಳಬಹುದಿತ್ತು. ಈ ನಗರವು ಇದಕ್ಕಿಂತ ಉತ್ತಮವಾಗಿದೆ. ನಮಗೆ ಭದ್ರತೆ ಬೇಕು. ಸರ್ಜಾಪುರವು ಈ ಘಟನೆಗಳಿಗೆ ಹಾಟ್‌ಸ್ಪಾಟ್ ಆಗಿದೆ. ಈ ಜನರ ಬೆದರಿಕೆಯನ್ನು ತಡೆಯಲು ನಾವು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ" ಎಂದು ಅವರು ಬರೆದಿದ್ದಾರೆ.
ನಂತರದ ಪೋಸ್ಟ್‌ನಲ್ಲಿ ಶೆಟ್ಟಿ ಅವರು, 112 ಮೂಲಕ ಸಂಪರ್ಕಿಸಿದ ನಂತರ ಪೊಲೀಸರು ಆಗಮಿಸಿದರು. ತಮ್ಮ ಕೆಲಸ ಮಾಡಿದರು. ಆದರೆ ಈ ಸಮಸ್ಯೆಗಳನ್ನು ಮೊದಲೇ ತಪ್ಪಿಸುವುದು ಹೇಗೆ ಎಂದು ನಾವು ಲೆಕ್ಕಾಚಾರ ಮಾಡಬೇಕು ಎಂದು ಹೇಳಿದರು. ಬೆಂಗಳೂರು ಪೊಲೀಸರು ಟ್ವೀಟ್‌ಗೆ ಪ್ರತಿಕ್ರಿಯಿಸಿ ಘಟನೆಯ ನಿಖರವಾದ ಸ್ಥಳ ಮತ್ತು ಅವರ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಸೂಚಿಸಿದ್ದಾರೆ.












Click it and Unblock the Notifications