Road Rage: ಸಿಲ್ಕ್‌ಬೋರ್ಡ್ ಮೇಲ್ಸೇತುವೆ ಮೇಲೆ ಅಟ್ಟಹಾಸ ಮೇರೆದಿದ್ದ ಪುಂಡರ ಬಂಧನ: ವಿಡಿಯೋ

ಬೆಂಗಳೂರು, ಜುಲೈ 29: ಬೆಂಗಳೂರಿನಲ್ಲಿ ಈ ಮೊದಲು ರಾತ್ರಿ ವೇಳೆ ಕಾರಿಗೆ ಅಡ್ಡ ಹಾಕುವುದು, ದಾರಿ ಹೋಕರ ಮೇಲೆ ದೌರ್ಜನ್ಯ ನಡೆಸುವುದು, ಮತ್ತೊಂದು ವಾಹನದಿಂದ ಅಡ್ಡಗಟ್ಟಿ ಬೆದರಿಸಿ ಕ್ರೌರ್ಯ ಮೆರೆಯುವುದು ಸಾಮಾನ್ಯ ಎಂಬಂತಾಗಿದೆ. ಇದೀಗ ನಗರದಲ್ಲಿನ ಭಾರತದ ಮೊದಲ 'ಡಬಲ್ ಡೆಕ್ಕರ್ ಮೇಲ್ಸೇತುವೆ'ಯಲ್ಲಿ ಹಗಲು ಹೊತ್ತಿನಲ್ಲಿ ಬೈಕ್ ನಲ್ಲಿ ಬಂದ ಪುಂಡರು ಅಟ್ಟಹಾಸ ಮೆರಿದಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಅವರೆಲ್ಲ ಖಾಕಿ ವಶದಲ್ಲಿದ್ದಾರೆ.

ಸಾಮಾಜಿಕ ಜಾಲತಾಣ 'X' ನಲ್ಲಿ ವಿಡಿಯೋ ವೈರಲ್ ಆಗಿತ್ತು. ಸಿಲ್ಕ್ ಬೋರ್ಡ್ 'ಡಬಲ್ ಡೆಕ್ಕರ್ ಮೇಲ್ಸೇತುವೆ' ಮೇಲೆ ಐಟೆನ್ ಕಾರೊಂದು ಚಲಿಸುವ ವೇಳೆ, ಬೈಕ್‌ನಲ್ಲಿ ಇಬ್ಬರು ಕಾರಿನ ಪಕ್ಕವೇ ಬಂದು ಕಾಲಿನಿಂದ ಕಾರಿಗೆ ಒದೆಯುವುದು. ಪಕ್ಕಕ್ಕೆ ಹೋಗಿ ತೊಂದರೆ ಕೊಡುವುದು ಮಾಡಿದ್ದರು. ಒಟ್ಟು ಸುಮಾರು ಐದಕ್ಕೂ ಹೆಚ್ಚು ಮಂದಿ ಎರಡು ಬೈಕ್‌ಗಳಲ್ಲಿ ಹೋಗುವಾಗ ಆಕ್ರಮಣಕಾರಿ ವರ್ತನೆ ಪ್ರದರ್ಶಿಸಿದ್ದರು.

Bengaluru Road Rage on Silk Board Flyover Video Viral SG Palya Police Arrested 3 Bikers

ರಸ್ತೆ ಸಂಚಾರದ ವೇಳೆ ಪುಂಡರ ಈ ನಡೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಬ್ಬ ಬೈಕರ್ ಬಲವಂತವಾಗಿ ಕಾರಿನ ಬಾಗಿಲನ್ನು ಒದೆಯುತ್ತಾರೆ. ಮತ್ತೊಬ್ಬ ವಾಹನಗಳು ಬರುತ್ತಿದ್ದರು ವ್ಹೀಲಿಂಗ್ ಮಾಡಿರುವುದು ಕಂಡು ಬಂದಿದೆ.

ರಾಜಧಾನಿಯಲ್ಲಿ ಹಗಲು ಹೊತ್ತಿನಲ್ಲೇ ವಾಹನ ಸವಾರರಿಗೆ ಸುರಕ್ಷತೆ ಇಲ್ಲದಂತಾಗಿದೆ. ಜುಲೈ 25 ರಂದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ 'ರೋಡ್ ರೇಜ್' ಪುಂಡರನ್ನು ಸದ್ದುಗುಂಟೆ ಪಾಳ್ಯ ಪೊಲೀಸರು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ನೆಟ್ಟಿಗರಿಂದಲೂ ಆಕ್ರೋಶ ವ್ಯಕ್ತ, ಏನಂದ್ರು?

ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ಯಾರೇ ಆಗಲಿದೆ, ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳಿಂದ ಕೆಳಗೆ ಬೀಳಬೇಕು ಎಂದು ಬಯಸುವುದಿಲ್ಲ. ಆದರೆ ಈ ಪುಂಡರ ಅಟ್ಟಹಾಸ ನೋಡಿದರೆ, ಇವರೆಲ್ಲ ನೆಲ್ಲಕೆ ಉರುಳಬೇಕು. ಸ್ಕೂಟರ್‌ನಿಂದ ಬೀಳಬೇಕು, ಮನುಷ್ಯ. ಮುಗ್ಧ ಆತ್ಮಗಳು ಅಪಘಾತಗಳಲ್ಲಿ ಸಾಯುತ್ತವೆ, ಆದರೆ ಈ ಮೋಸಗಾರರಿಗೆ ಏನು ಆಗಿಲ್ಲ ಎಂದು ಬರೆದುಕೊಂಡಿದ್ದಾರೆ.

ರಸ್ತೆಗಳಲ್ಲಿ ಈ ರೀತಿ ಅಸಭ್ಯವಾಗಿ, ಅಟ್ಟಹಾಸದಿಂದ ಮೆರೆಯಲು ಯಾರಿಗೂ ಸ್ವಾತಂತ್ರ್ಯವಿಲ್ಲ, ಒಂದು ವೇಳೆ ನಿಯಮ ಉಲ್ಲಂಘಿಸಿ ಹೀಗೆ ಓಡಾಡುವವರ ಸ್ಥಾನ ಜೈಲಿನಲ್ಲಿರಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ನಾನಾಗಿದ್ದರೆ ಕಾರಿನಿಂದ ಸ್ಕೂಟರ್ ಅನ್ನು ತಳ್ಳಿ ಬಿಡುತ್ತಿದ್ದೆ ಎಂದು ಮತ್ತೊಬ್ಬರು ಕಿಡಿ ಕಾರಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಪೊಲೀಸರು ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ರಸ್ತೆಗಳಲ್ಲಿ ಇಂತಹ ದುವರ್ತನೆಗಳು ತಣ್ಣಗಾಗಬೇಕು. ಇಂತಹ ಸ್ಟಂಟ್ ಸಿನಿಮಾಗಳಲ್ಲಿ ಮಾತ್ರ, ರಿಯಲ್ ಜೀವನದಲ್ಲಿ ಅಲ್ಲ ಎಂದು ಖಾರತವಾಗಿ ತಿಳಿಸಿದ್ದಾರೆ.

ರೋಡ್ ರೇಜ್ ಮೂವರ ಬಂಧನ, ಬೈಕ್‌ಗಳು ವಶಕ್ಕೆ

ಅದರ ಮುಂದುವರಿದ ಭಾಗವಾಗಿ ಪೊಲೀಸರು ಬೈಕ್ ಸವಾರರನ್ನು ಬಂಧಿಸಿದ್ದಾರೆ. ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರು ಪುಂಡರ ಬಂಧನ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಲ್ಕ ಬೋರ್ಡ್ ಜಂಕ್ಷನ್‌ನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುವ ವ್ಯಕ್ತಿಗಳ ವಿರುದ್ಧ ಎಸ್‌ಜಿ ಪಾಳ್ಯ ಪೊಲೀಸ್ ಠಾಣೆ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ. ಪೊಲೀಸರು ಬೈಕ್ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೂರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+