Get Updates
Get notified of breaking news, exclusive insights, and must-see stories!

ಬೆಂಗಳೂರಿಗರೇ ಈ 6 ತುರ್ತು ಸಹಾಯವಾಣಿ ಸಂಖ್ಯೆ ನೆನಪಿರಲಿ: ಬೆಂಗಳೂರು ಪೊಲೀಸರ ಅಪ್ಡೇಟ್ಸ್‌

ಬೆಂಗಳೂರು ಪೊಲೀಸರು ಬೆಂಗಳೂರಿನ ಜನರ ರಕ್ಷಣೆಗೆ ಸಂಬಂಧಿಸಿದಂತೆ ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರು ನಗರ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಮಹಿಳೆಯರ ಸುರಕ್ಷತೆ, ಮಾದಕ ವ್ಯಸನದ ನಿಯಂತ್ರಣ, ಸೈಬರ್ ಅಪರಾಧಗಳ ತಡೆ ಮತ್ತು ಸಂಚಾರ ನಿರ್ವಹಣೆ ಕುರಿತು ಅರಿವು ಮೂಡಿಸಲು ಶಾಲಾ- ಕಾಲೇಜುಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಬೆಂಗಳೂರು ನಗರ ಪೊಲೀಸರು, ಬೆಂಗಳೂರು ನಗರದ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯ ಭಾಗವಾಗಿ ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳು ಮತ್ತು ಸೈಬರ್ ಅಪರಾಧಗಳ ನಿಯಂತ್ರಣ, ಟ್ರಾಫಿಕ್ ರೂಲ್ಸ್‌ ಪಾಲನೆ ಮತ್ತು ನಿಯಂತ್ರಣಗಳ ಕುರಿತು ಸಾರ್ವಜನಿಕರಿಂದ ದೂರು, ಸಲಹೆಗಳನ್ನು ಪಡೆದುಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇದೇ ಡಿಸೆಂಬರ್ 1 ರಂದು ಬೆಂಗಳೂರು ನಗರದ ಸುಮಾರು 750 ಪಿ.ಎಸ್.ಐ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು 1,250 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಅಂದಾಜು ಸುಮಾರು 2.5 ಲಕ್ಷ ವಿದ್ಯಾರ್ಥಿಗಳಿಗೆ ಕ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

Bengaluru residents remember these 6 emergency helpline numbers Updates from Bengaluru Police

1. ಮಹಿಳಾ ಸುರಕ್ಷತೆಯ ಕ್ರಮಗಳು: ಮಹಿಳಾ ಸಹಾಯವಾಣಿ - 1090, ವ್ಯವಸ್ಥಿತ ನಿಗಾವಣೆ, ಹೊಯ್ಸಳ ವಾಹನಗಳ ಗಸ್ತು ವ್ಯವಸ್ಥೆ, ಸೇಫ್ಟಿ ಐಲ್ಯಾಂಡ್‌ಗಳು ಮತ್ತು KSP ಆ್ಯಪ್ ಮತ್ತು 112 ಸಹಾಯವಾಣಿ ಕರೆಗಳ ಮೂಲಕ ಸುರಕ್ಷತೆಯ ಸಂಪರ್ಕ ವ್ಯವಸ್ಥೆ, ನೆರವು ಕೇಂದ್ರ ಮತ್ತು ಚನ್ನಮ್ಮ ಪಡೆ.

2. ಮಾದಕವಸ್ತುಗಳ ನಿಯಂತ್ರಣ ಮತ್ತು ತಡೆಗಾಗಿ ಕ್ರಮಗಳು: ಬೆಂಗಳೂರು ನಗರ ಪೊಲೀಸ್ ವತಿಯಿಂದ ಮಾದಕವಸ್ತುಗಳ ವಿರುದ್ಧ ಸಮರವನ್ನು ಮುಂದುವರೆಸಿದ್ದು, ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯೋಜನಾಬದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ.

• Drug Free Karnataka ಆಪ್‌ನ ಮೂಲಕ ಸಾರ್ವಜನಿಕರು ಮಾದಕ ವಸ್ತುಗಳ ಕುರಿತು ದೂರು ನೀಡುವ ಬಗ್ಗೆ ಅರಿವು ಮೂಡಿಸುವುದು, ಟೋಲ್ ಫ್ರೀ ನಂಬರ್ 1933 ಮೂಲಕ ದೂರುಗಳನ್ನು ದಾಖಲಿಸುವುದು ಮತ್ತು ಕಾಲೇಜು ಮತ್ತು ಶಾಲೆಗಳಲ್ಲಿ ಮಾದಕವಸ್ತು ನಿಯಂತ್ರಣ ಸಮಿತಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

3. ಸಂಚಾರ ವ್ಯವಸ್ಥೆಯ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಕ್ರಮಗಳು: ನಗರದಲ್ಲಿ ಸುಗಮ ಸಂಚಾರ ವ್ಯಸವಸ್ಥೆಯ ನಿರ್ವಹಣೆ ಮತ್ತು ಅಪಘಾತಗಳ ಸಂಖ್ಯೆಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ರಸ್ತೆ ಸುರಕ್ಷತಾ ಸಲಹೆಗಳನ್ನು ಪಡೆಯುವುದು, ಅಪಘಾತ ತಡೆ ಕ್ರಮಗಳು, "ಗೋಲ್ಡನ್ ಅವರ್‌ನ" ಶಿಸ್ತುಪಾಲನೆ, Astram ಆ್ಯಪ್ ಮತ್ತು ಸಂಚಾರ ಪೊಲೀಸ್‌ನ ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆಗಳ ಕುರಿತು ಸಾರ್ವಜನಿಕರಿಂದ ದೂರು ಪಡೆಯುವುದು ಮತ್ತು ಕ್ರಮ ಕೈಗೊಳ್ಳುವುದು ಮಾಡಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

4. ಸೈಬರ್ ಅಪರಾಧಗಳ ನಿಯಂತ್ರಣ ಕ್ರಮಗಳು: ಬೆಂಗಳೂರು ನಗರ ಸೈಬರ್ ಕ್ರೈಂ ಘಟಕವು ಆನ್‌ಲೈನ್ ವಂಚನೆ, ಹಣಕಾಸಿನ ಅವ್ಯವಹಾರ ಮತ್ತು ಇತರೆ ಡಿಜಿಟಲ್ ಅಪರಾಧಗಳಲ್ಲಿ ತೊಡಗಿರುವವರನ್ನು ಪತ್ತೆ ಮಾಡುತ್ತಿದ್ದು ಈ ರೀತಿ ಕೃತ್ಯದಲ್ಲಿ ತೊಡಗಿರುವವರನ್ನು ಬಂಧಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದೆ.

ಡಿಜಿಟಲ್ ಸುರಕ್ಷತೆ ಮತ್ತು ವಂಚನೆ ತಡೆಗೆ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು 1930 ಸೈಬರ್ ಸಹಾಯವಾಣಿ, ಆನ್‌ಲೈನ್ /ಸೋಷಿಯಲ್ ಮೀಡಿಯಾ ದೂರು ಪೋರ್ಟ್‌ಲ್‌ಗಳು, ಮಹಿಳೆ- ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಸೈಬರ್ ಸ್ಟಾಲ್ಕಿಂಗ್ ಮತ್ತು ಇತರೆ ಸೈಬರ್ ಅಪರಾಧಗಳ ಕುರಿತು ದೂರು ಸಲ್ಲಿಸಲು ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳ ಬಳಕೆ ಮಾಡಲಾಗುತ್ತಿದೆ.

5. ಎಲ್ಲಾ ರೂಪದ ಅಪರಾಧಗಳ ಕುರಿತು ದೂರು ಸಲ್ಲಿಸಲು ಅಧಿಕೃತ ವ್ಯವಸ್ಥೆಗಳು: ಸಾರ್ವಜನಿಕರು ಯಾವುದೇ ರೀತಿಯ ದೂರುಗಳನ್ನು ಸಲ್ಲಿಸಲು ಮತ್ತು ಪೊಲೀಸ್ ಸೇವೆಗಳನ್ನು ಬಳಸಿಕೊಳ್ಳಲು ಈ ಕೆಳಕಂಡ ಸಹಾಯವಾಣಿ ಅಥವಾ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.

ಬೆಂಗಳೂರಿಗರೇ ಈ ಸಹಾಯವಾಣಿ ಸಂಖ್ಯೆಗಳು ನೆನಪಿರಲಿ!

112: ತುರ್ತು ಸಹಾಯವಾಣಿ ಸಂಖ್ಯೆ

1930: ಸೈಬರ್ ವಂಚನೆ ಸಹಾಯವಾಣಿ

1933: ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ (MANAS)

1908: ಮಾದಕವಸ್ತು ನಿಯಂತ್ರಣ ಸಹಾಯವಾಣಿ

14490: ರಾಷ್ಟ್ರೀಯ ಮಹಿಳಾ ಸಹಾಯವಾಣಿ

1098: ಮಕ್ಕಳ ಸಹಾಯವಾಣಿ

ಸಾರ್ವಜನಿಕ ಸುರಕ್ಷತೆಗೆ ನಮ್ಮ ಬದ್ಧತೆ: ಬೆಂಗಳೂರು ನಗರ ಪೊಲೀಸರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ತಮ್ಮ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಲಾಗುತ್ತಿದೆ. ನಗರದ ಸಾರ್ವಜನಿಕರು ಈ ಆಧುನಿಕ ತಂತ್ರಜ್ಞಾನ ಆಧಾರಿತ ಸುರಕ್ಷತಾ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸುರಕ್ಷಿತ ಸಮಾಜ ನಿರ್ಮಾಣಕ್ಕಾಗಿ ಬೆಂಗಳೂರು
ನಗರ ಪೊಲೀಸರೊಂದಿಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+