ಬೆಂಗಳೂರಲ್ಲಿ ಒಂದು ದಶಕದಲ್ಲೇ ಅತ್ಯಧಿಕ ಚಳಿ ಸೋಮವಾರ ದಾಖಲು: IMD

ಬೆಂಗಳೂರು, ನವೆಂಬರ್ 22: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಚಳಿ ಹೆಚ್ಚಾಗುತ್ತಲೇ ಇದೆ. ಸೋಮವಾರ (ನ.21) 10 ವರ್ಷಗಳಲ್ಲೇ ನವೆಂಬರ್‌ ತಿಂಗಳಲ್ಲಿ ಅಧಿಕ ಚಳಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ನಗರದಲ್ಲಿ ಹಲವು ದಿವಸಗಳಿಂದ ತುಂತುರು ಮಳೆ, ಬೆಳಗ್ಗೆ ಚಳಿ ಮತ್ತು ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ. ಒಂದು ವಾರದ ಹಿಂದಷ್ಟೇ ಬೆಂಗಳೂರ ನಗರ ವ್ಯಾಪ್ತಿಯಲ್ಲಿ ಕನಿಷ್ಠ ತಾಪಮಾನ ಅತ್ಯಧಿಕ 15 ಡಿಗ್ರಿ ಸೆಲ್ಸಿಯಸ್‌ ನಷ್ಟು ಇಳಿಕೆಯಾಗಿತ್ತು. ಆದರೆ ಸೋಮವಾರ ನವೆಂಬರ್‌ ತಿಂಗಳಲ್ಲೇ ಹೆಚ್ಚು ಚಳಿಯ ವಾತಾವರಣ ಕಂಡು ಬಂದಿದೆ.

ಸೋಮವಾರ ನವೆಂಬರ್ 21ರಂದು ನಗರದಲ್ಲಿ 13.9ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇಷ್ಟು ಕಡಿಮೆ ಪ್ರಮಾಣದ ಉಷ್ಣಾಂಶ ಹತ್ತು ವರ್ಷಗಳ ಹಿಂದೆ ನವೆಂಬರ್‌ ತಿಂಗಳಲ್ಲಿ ದಾಖಲಾಗಿತ್ತು. 2012 ರ ನವೆಂಬರ್ 19ರಂದು 13.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಅತ್ಯಧಿಕ ಚಳಿ ಅಂದು ಸೃಷ್ಟಿಯಾಗಿತ್ತು. ಇದಾದ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಕನಿಷ್ಠ ತಾಪಮಾನದ ಪ್ರಮಾಣ ಇಳಿಕೆ ಕಂಡಿರಲಿಲ್ಲ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವರದಿ ಮಾಹಿತಿ ನೀಡಿದೆ.

Bengaluru recorded coldest temperature in a decade on Nov 21

ನವೆಂಬರ್ 24ರವರೆಗೆ ಮಳೆ ಬಳಿಕ ಚಳಿ

ಬೆಂಗಳೂರು ನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮುಂದಿನ ಮೂರು ಮೋಡ ಕವಿದ ಹಾಗೂ ತಂಪು ವಾತಾವರಣ ಕಂಡು ಬರಲಿದೆ. ಈ ವೇಳೆ ಕೆಲವು ಕಡೆಗಳಲ್ಲಿ ಹಗುರವಾಗಿ ಮಳೆ ಬರುವ ಸಾಧ್ಯತೆ ಇದೆ. ನಂತರ ಮಳೆ ಕಡಿಮೆಯಾಗಿ ಮಧ್ಯಾಹ್ನ ಬಿಸಿಲು ಹಾಗೂ ಬೆಳಗ್ಗೆ-ರಾತ್ರಿ ಚಳಿ ಹೆಚ್ಚಾಗಲಿದೆ. ನವೆಂಬರ್‌ 24ರ ನಂತರ ಕನಿಷ್ಠ ತಾಪಮಾನದಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರದಲ್ಲಿ ಮಂಗಳವಾರ ಬೆಳಗ್ಗೆ ಕೆಲವೆಡೆ ತುಂತುರು ಮಳೆ ಸುರಿಯಿತು. ಸಂಜೆಯಾದರೂ ಒಮ್ಮೆಯೂ ಸೂರ್ಯನ ದರ್ಶನವಾಗಿಲ್ಲ. ಎಲ್ಲೆಡೆ ತಂಪು ಗಾಳಿ ಕಂಡು ಬಂದಿದೆ. ಬೆಂಗಳೂರು ಅಂತಾರಾಷ್ಟ್ರೀ ವಿಮಾನ ನಿಲ್ದಾಣದಲ್ಲಿ ಗರಿಷ್ಠ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17.4ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂತು. ಅದೇ ರೀತಿ ಎಚ್‌ಎಎಲ್‌ ವಿಮಾಣ ನಿಲ್ದಾಣದಲ್ಲಿ ಗರಿಷ್ಠ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 17.2ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗರಿಷ್ಠ 27.2ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17.2ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+