ಬೆಂಗಳೂರಿನ ಈ 7 ಪ್ರದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪ್ರಾಪರ್ಟಿ: ಮುಂದೆ ಭೂಮಿಗೆ ಚಿನ್ನದ ಬೆಲೆ!
ಬೆಂಗಳೂರಿನಲ್ಲಿ ಮೊದಲಿನಿಂದಲೂ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಕಳೆದ ಕೆಲವು ದಿನಗಳಿಂದ ಪ್ರಮುಖ ಪ್ರದೇಶಗಳಲ್ಲಿ ಭೂಮಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಲ್ಲೇ ಇದೆ. ಅದರಲ್ಲಿ ಪ್ರಮುಖ 7 ಪ್ರದೇಶಗಳು ಸಹ ಸೇರಿವೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ (ಬೆಂಗಳೂರಿನ ಉಳಿದ ಪ್ರದೇಶಗಳಿಗಿಂತ) ಭೂಮಿ, ಪ್ರಾಪರ್ಟಿ ಸಿಗುವ 7 ಪ್ರದೇಶಗಳ ವಿವರ ನೋಡೋಣ.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಕಳೆದ ಮೂರು ದಶಕದ ಅವಧಿಯಲ್ಲಿ ಇಲ್ಲಿ ರಿಯಲ್ ಎಸ್ಟೇಟ್ ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಹೂಡಿಕೆ ಮಾಡುವ ಪ್ರಮಾಣವು ಹೆಚ್ಚಳವಾಗುತ್ತಲ್ಲೇ ಇದೆ. ಇನ್ನು ಬೆಂಗಳೂರಿನಲ್ಲಿ 1 ಕೋಟಿ ರೂಪಾಯಿ ಗಿಂತ ಕಡಿಮೆ ಬೆಲೆಯ ಆಸ್ತಿಗಳನ್ನು ಮಾಡಿಕೊಳ್ಳಲು ಸಾಧ್ಯವಿರುವ ಅಥವಾ ಖರೀದಿ ಮಾಡಬಹುದಾದ ಪ್ರದೇಶಗಳ ವಿವರ ಇಲ್ಲಿದೆ.

1. ಸರ್ಜಾಪುರ ರಸ್ತೆ: ಸರ್ಜಾಪುರ ಉತ್ತರ ಬೆಂಗಳೂರು (ಹೊರ ವರ್ತುಲ ರಸ್ತೆ) ಯನ್ನು ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನು ಈ ಮಾರ್ಗದಲ್ಲಿ ಐಟಿ ಪಾರ್ಕ್‌ಗಳು ಸಹ ಹೆಚ್ಚಾಗಿವೆ. 2 ಮತ್ತು 3 ಬಿಎಚ್‌ಕೆ ಫ್ಲಾಟ್‌ಗಳಿಗೆ 70 ಲಕ್ಷ ರೂಪಾಯಿಯಿಂದ 100 ಲಕ್ಷ, ಒಂದು ಕೋಟಿಯ ಒಳಗೆ ಇಲ್ಲಿ ಪ್ರಾಪರ್ಟಿ ಸಿಗ್ತಿದೆ. ಪ್ರತಿ ಚದರ ಅಡಿಗೆ ಅಂದಾಜು. 5,000 ರಿಂದ 6,000 ಸಾವಿರ ರೂಪಾಯಿ ಇದೆ. ಮೆಟ್ರೋ ಹಂತ II ವಿಸ್ತರಣೆ. ಹೊರ ವರ್ತುಲ ರಸ್ತೆಗೆ ಪ್ರವೇಶ ಸಂಪರ್ಕ ಹೆಚ್ಚಾಗುವ ನಿರೀಕ್ಷೆ ಇದ್ದು. ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದೆ.
2. ವೈಟ್‌ಫೀಲ್ಡ್: ಇನ್ನು ಬೆಂಗಳೂರಿನಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇರುವ ಪ್ರದೇಶಗಳಲ್ಲಿ ವೈಟ್‌ಫೀಲ್ಡ್ ಸಹ ಇದೆ. ಟೆಕ್ ಪಾರ್ಕ್ ಮತ್ತು ವಸತಿ ಅಭಿವೃದ್ಧಿಗಳನ್ನು ಹೊಂದಿರುವ, ಪ್ರಸಿದ್ಧ ಐಟಿ ಹಬ್ ಪ್ರದೇಶ ಎಂದೇ ಈ ಪ್ರದೇಶವನ್ನು ಪರಿಗಣಿಸಲಾಗುತ್ತದೆ. ಇನ್ನು ಈ ಪ್ರದೇಶಗಳಲ್ಲಿ ಪ್ರಾಪರ್ಟಿ ಬೆಲೆಯು 80 ಲಕ್ಷ ರೂಪಾಯಿಯಿಂದ 1 ಕೋಟಿ (1-2 BHK ಅಪಾರ್ಟ್‌ಮೆಂಟ್‌ಗಳು) ರೂಪಾಯಿ ಇದೆ. ಅಲ್ಲದೇ ಪ್ರತಿ ಚದರ ಅಡಿಗೆ 5,500 ರಿಂದ 7,000 ಸಾವಿರ ರೂಪಾಯಿ ಇದೆ.
3. ಕನಕಪುರ ರಸ್ತೆ: ಇನ್ನು ಬೆಂಗಳೂರಿನಲ್ಲೇ ವೇಗವಾಗಿ ಭೂಮಿ ಬೆಲೆ ಹೆಚ್ಚಳವಾಗುತ್ತಿರುವ ಪ್ರದೇಶಗಳಲ್ಲಿ ಕನಕಪುರ ರಸ್ತೆಯೂ ಸೇರಿದೆ. ಈ ಭಾಗದಲ್ಲಿ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ನಿರೀಕ್ಷೆ ಇರುವುದರಿಂದ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಕೈಗೆಟುಕುವ ವಸತಿ ಪ್ರದೇಶ ಇದೆ. ಇನ್ನು ಇಲ್ಲಿ ಪ್ರಾಪರ್ಟಿ ಬೆಲೆಯು 65 ಲಕ್ಷದಿಂದ 90 ಲಕ್ಷ (2 ಅಥವಾ 3 BHK) ರೂಪಾಯಿ ಇದೆ. ಪ್ರತಿ ಚದರ ಅಡಿಗೆ 3,500 ರಿಂದ 5,000 ಸಾವಿರ ರೂಪಾಯಿ ಇದೆ.
4. ಥಣಿಸಂದ್ರ: ಬೆಂಗಳೂರು ಉತ್ತರದ ಥಣಿಸಂದ್ರದಲ್ಲೂ ಭೂಮಿಗೆ ಒಳ್ಳೆಯ ಬೆಲೆ ಇದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಕಡಿಮೆ ಬೆಲೆ ಭೂಮಿ, ಪ್ರಾಪರ್ಟಿ ಸಿಗುತ್ತಿದೆ. ಐಟಿ ಕೇಂದ್ರಗಳ ಅಭಿವೃದ್ಧಿಯು ಈ ಪ್ರದೇಶಕ್ಕೆ ವರದಾನವಾಗಿ ಬದಲಾಗಿದೆ. ಇಲ್ಲಿ ಪ್ರಾಪರ್ಟಿ ಬೆಲೆಯು 70 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ ವರೆಗೂ ಇದೆ. ಪ್ರತಿ ಚದರ ಅಡಿಗೆ 4,500 ರೂಪಾಯಿಯಿಂದ 6,000 ಸಾವಿರ ರೂಪಾಯಿ ಇದೆ.
5. ಯಲಹಂಕ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯ ಭಾಗವಾಗಿ ನಡೆದ ಅಭಿವೃದ್ಧಿ ಈ ಪ್ರದೇಶಕ್ಕೆ ವರದಾನವಾಗಿದೆ. ಪ್ರಾಥಮಿಕವಾಗಿ ಅಭಿವೃದ್ಧಿಪಡಿಸಲಾದ ವಸತಿ ಮತ್ತು ಕೈಗಾರಿಕಾ ಕಾರಿಡಾರ್ ಸಹ ಸಹಕಾರಿಯಾಗಿದೆ. ಬೇರೆ ಬೇರೆ ಕಾರಣಗಳಿಗೆ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಈ ಪ್ರದೇಶದಲ್ಲಿ 2 ಬಿಎಚ್‌ಕೆ ಫ್ಲಾಟ್‌ಗಳ ಬೆಲೆಯು 70 ಲಕ್ಷದಿಂದ ರೂ. 1 ಕೋಟಿ ರೂಪಾಯಿಯ ವರೆಗೆ ಇದೆ. ಅಲ್ಲದೇ ಪ್ರತಿ ಚದರ ಅಡಿಗೆ 4,000 ರಿಂದ 5,500 ರೂಪಾಯಿ ಇದೆ.
6. ಎಲೆಕ್ಟ್ರಾನಿಕ್ ಸಿಟಿ: ಇನ್ನು ದಕ್ಷಿಣ ಬೆಂಗಳೂರಿನಲ್ಲಿ ವಿವಿಧ ಭಾಗದಲ್ಲೂ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಟೆಕ್ ಪಾರ್ಕ್ ಉಪನಗರ ಪ್ರದೇಶಗಳಲ್ಲಿ ಒಂದಾಗಿರುವ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆಯು ಕಡಿಮೆ ಇದೆ. ಕೈಗೆಟುಕುವ ವಸತಿ ಯೋಜನೆಗಳು ಸಹ ಇಲ್ಲಿವೆ. ಭೂಮಿ ಬೆಲೆಯು ಈ ಭಾಗದಲ್ಲಿ ಪ್ರತಿ ಚದರ ಅಡಿಗೆ 75 ಲಕ್ಷದಿಂದ 1 ಕೋಟಿ ರೂಪಾಯಿಯ ವರೆಗೆ ಇದೆ. ಅಲ್ಲದೇ ಪ್ರತಿ ಚದರ ಅಡಿಗೆ ಭೂಮಿ ಬೆಲೆಯು 4,500 ರಿಂದ 6,000 ಸಾವಿರ ರೂಪಾಯಿಯ ವರೆಗೆ ಇದೆ.
7. ಹೆಣ್ಣೂರು: ಉತ್ತರ ಬೆಂಗಳೂರಿನ ಹೆಣ್ಣೂರು ಭಾಗದಲ್ಲೂ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುತ್ತಿದೆ. ಭೂಮಿಗೆ ಒಳ್ಳೆಯ ಬೆಲೆ ಬರುತ್ತಿರುವ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅಭಿವೃದ್ಧಿ ಹೊಂದುತ್ತಿರುವ ವಸತಿ ಪ್ರದೇಶಗಳು ಇಲ್ಲಿ ಹೆಚ್ಚಾಗಿ ಇವೆ. 2 ಬಿಎಚ್‌ಕೆ ಫ್ಲಾಟ್‌ಗಳು ಪ್ರತಿ ಚದರ ಅಡಿಗೆ 70 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೆ ಇದೆ. ಪ್ರಾಪರ್ಟಿ ಪ್ರತಿ ಚದರ ಅಡಿಗೆ 4,500 ರೂಪಾಯಿಯಿಂದ ಪ್ರಾರಂಭವಾಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications