Bengaluru Real Estate: ಬೆಂಗಳೂರು ಮನೆ ಬಾಡಿಗೆದಾರರಿಗೆ ಆಸ್ತಿ ಮಾಲೀಕರಿಂದ ಹೊಸ ತಲೆನೋವು!
Bengaluru Real Estate: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹಾಗೂ ಮನೆಗಳ ಅಡ್ವಾನ್ಸ್ ಸಹ ಹೆಚ್ಚಳವಾಗುತ್ತಿದೆ. ಮನೆ ಬಾಡಿಗೆದಾರರು ಅಡ್ವಾನ್ಸ್ / ಮುಂಗಡ ಹಣ ನೀಡುವುದರಲ್ಲಿ ಹೈರಾಣಾಗಿದ್ದಾರೆ. ಆದರೆ ಆಸ್ತಿ ಮಾಲೀಕರು ಇದನ್ನು ಬೇರೆ ಕಾರಣಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ಕಟ್ಟಡಗಳ ವಿಚಾರವು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖ ರಿಯಲ್ ಎಸ್ಟೇಟ್ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಗಗನಕ್ಕೇರುತ್ತಿರುವ ಬಾಡಿಗೆಗಳು, ಹೆಚ್ಚಿನ ಭದ್ರತಾ ಠೇವಣಿಗಳು (ಅಡ್ವಾನ್ಸ್ ಹಣ) ಮತ್ತು ಮನೆಮಾಲೀಕರ ನಿಷ್ಕ್ರಿಯ ಆದಾಯ ಎಂದು ಹೇಳುತ್ತಿದ್ದಾರೆ. 400-600 ಚದರ ಅಡಿ ವಿಸ್ತೀರ್ಣದ ಸಣ್ಣ ಪ್ರದೇಶಗಳಲ್ಲೂ ಬೆಂಗಳೂರಿನಲ್ಲಿ ₹30,000-40,000 ಗೆ ಬಾಡಿಗೆಗೆ ನೀಡಲಾಗುತ್ತಿದೆ. ಇದಕ್ಕೆ ಅಡ್ವಾನ್ಸ್ ಮೊತ್ತವಾಗಿ ₹1.2 ಲಕ್ಷದಿಂದ ₹2 ಲಕ್ಷದವರೆಗೆ ತೆಗೆದುಕೊಳ್ಳಲಾಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಇದಕ್ಕಿಂತಲೂ ಹೆಚ್ಚು ಹಣ ಪಡೆಯುತ್ತಿರುವುದು ಸಹ ಇದೆ.

ಬೆಂಗಳೂರಿನ ಬಾಡಿಗೆದಾರರು ವಸತಿ ವೆಚ್ಚಗಳು ಹೆಚ್ಚಾಗುತ್ತಿವೆ ಎಂದು ಹೇಳುತ್ತಿದ್ದಾರೆ. ಅಲ್ಲದೇ 400 ರಿಂದ 600 ಚದರ ಅಡಿ ಭಾಗದ ಮನೆಗಳ ಬೆಲೆ ಈಗ ₹30 ಸಾವಿರದಿಂದ ₹40 ಸಾವಿರ ತಲುಪಿದೆ. ಅಲ್ಲದೇ ಬಾಡಿಗೆ ಮನೆಯ ಅಡ್ವಾನ್ಸ್ ಮೊತ್ತವು ಬರೋಬ್ಬರಿ ಲಕ್ಷಗಳಿಗೆ ತಲುಪಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಕಳಪೆ ನಿರ್ವಹಣೆ ಮತ್ತು ಹೆಚ್ಚುವರಿ ಶುಲ್ಕಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಬಾಡಿಗೆ ಹಾಗೂ ಅಡ್ವಾನ್ಸ್ ನೀಡಿದರೆ ಸಾಕಾಗಿತ್ತು. ಇದೀಗ ಕೆಲವು ಮನೆ ಮಾಲೀಕರು ಬೆಂಗಳೂರಿನಲ್ಲಿ ಮನೆಗಳ ಪಾರ್ಕಿಂಗ್ ಜಾಗ, ನೀರು ಹಾಗೂ ಸ್ವಚ್ಛತೆ ಹೆಸರಿನಲ್ಲೂ ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಚುವರಿಯಾಗಿ ತಿಂಗಳಿಗೆ 2,500 ರೂಪಾಯಿ ಪಾವತಿ ಮಾಡುವಂತೆ ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಹಾಗೂ ಅಡ್ವಾನ್ಸ್ ಮೊತ್ತವು ಹೆಚ್ಚಾಗಿದ್ದು. ಮನೆ ಮಾಲೀಕರು ಹೊಸ ನಿಯಮಗಳು ಬಾಡಿಗೆದಾರರನ್ನು ಸಂಕಷ್ಟಕ್ಕೆ ದೂಡಿದೆ.
ಸೋಷಿಯಲ್ ಮೀಡಿಯಾ ರೆಡ್ಡಿಟರ್ನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಏಕಾಏಕಿ ಬಾಡಿಗೆ ಹೆಚ್ಚಳ, ಏಕಪಕ್ಷೀಯ ಬಾಡಿಗೆ ಮತ್ತು ದಿಢೀರ್ ಅಡ್ವಾನ್ಸ್ ಹೆಚ್ಚಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಸ್ತಿ ಬೆಲೆಗಳು ಹೆಚ್ಚಳವಾಗುತ್ತಿರುವಂತೆಯೇ ಮನೆಗಳ ಬಾಡಿಗೆ ಬೆಲೆಯೂ ಸಹ ಹೆಚ್ಚಾಗುತ್ತಿದೆ ಎಂದು ಹಲವರು ಹೇಳಿದ್ದಾರೆ.
ಸಾಮಾನ್ಯ ಸ್ಥಳಗಳಗಳಿಗೂ ಕೆಲವು ಮನೆ ಮಾಲೀಕರು ಶುಲ್ಕ ವಿಧಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವರು ಮನೆಯ ಟೆರೇಸ್ ಭಾಗಕ್ಕೂ ಹೆಚ್ಚುವರಿ ಶುಲ್ಕವನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.
ಪೂರ್ಣ ಪ್ರಮಾಣದ ಅಡ್ವಾನ್ಸ್ ವಾಪಸ್ ನೀಡುತ್ತಿಲ್ಲ!
ಇನ್ನು ಬೆಂಗಳೂರಿನಲ್ಲಿ ಹಲವು ಆಸ್ತಿ ಮಾಲೀಕರು ಮನೆ ಬಾಡಿಗೆ ನೀಡುವಾಗ ಪಡೆದುಕೊಳ್ಳುವ ತೆಗೆದುಕೊಳ್ಳುವ ಅಡ್ವಾನ್ಸ್ನ ಮೊತ್ತದಲ್ಲಿ ಮನೆ ಬಿಡುವಾಗ ಪೂರ್ಣ ಪ್ರಮಾಣದಲ್ಲಿ ಕೊಡುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಮೊದಲಿನಿಂದಲೂ ಮನೆಗಳ ಆಸ್ತಿ ಮಾಲೀಕರು ಮನೆ ಬಾಡಿಗೆದಾರರ ಅಡ್ವಾನ್ಸ್ನಲ್ಲಿ ಮನೆಯ ಫೈಂಟಿಂಗ್ ಸೇರಿದಂತೆ ಕೆಲವೊಂದು ವಿಷಯಗಳಿಗೆ ಅಡ್ವಾನ್ಸ್ ಮೊತ್ತದಲ್ಲಿ ಕಡಿತ ಮಾಡುವುದು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಮನೆ ಬಾಡಿಗೆದಾರರಿಂದ ಕೇಳಿ ಬರುತ್ತಿದೆ.
-
Swachh Survey: ಬೆಂಗಳೂರು ಸ್ವಚ್ಛ ಸರ್ವೇಕ್ಷಣ 2025-26: 38 ಉದ್ಯಾನವನ, 11 ಮೈದಾನಗಳ ಸ್ವಚ್ಛತೆ: ರಾಜೇಂದ್ರ ಚೋಳನ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications