ಬೆಂಗಳೂರಿನ ಈ ಎರಡು ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ: ಈ ಭಾಗದ ಆಸ್ತಿದಾರರಿಗೆ ಬಂಪರ್!

Bengaluru Real Estate Boom:ಬೆಂಗಳೂರು ರಿಯಲ್ ಎಸ್ಟೇಟ್ ಹೊಸ ಬೂಸ್ಟ್ ಪಡೆದುಕೊಂಡಿದೆ. ಬೆಂಗಳೂರಿನ ಬಗ್ಗೆ ಅಪಪ್ರಚಾರಗಳು ಹೆಚ್ಚಾಗುತ್ತಿದೆ. ಬೆಂಗಳೂರಿನಿಂದ ಐಟಿ - ಬಿಟಿ ಕಂಪನಿಗಳು ಹೊರಗೆ ಹೋಗಲಿವೆ. ಅಲ್ಲದೇ ಬೆಂಗಳೂರಿಗೆ ಭಾರೀ ಸಂಕಷ್ಟ ಎದುರಾಗಲಿದೆ. ಈ ಎಲ್ಲ ಕಾರಣಗಳಿಂದ ಬೆಂಗಳೂರಿನ ರಿಯಲ್ ಎಸ್ಟೇಟ್‌ಗೆ ಭಾರೀ ಹಿನ್ನಡೆ ಆಗಲಿದೆ ಎಂದು ರಿಯಲ್ ಎಸ್ಟೇಟ್ ವಲಯದಲ್ಲಿ ಕೆಲವರು ಅಂದಾಜಿಸಿದ್ದರು. ಆದರೆ, ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ರಿಯಲ್ ಎಸ್ಟೇಟ್ ಹಿಂದೆಂದಿಗಿಂತಲೂ ಬೂಸ್ಟ್‌ ಆಗಿದ್ದು. ಬೆಂಗಳೂರಿನ ಕೆಲವು ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಸಿಲಿಕಾನ್‌ಸಿಟಿ ಖ್ಯಾತಿಯ ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರವು ಭಾರೀ ಅಪಪ್ರಚಾರದ ನಡುವೆಯೂ ಭರ್ಜರಿ ಬೆಳವಣಿಗೆ ಕಂಡಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಮತ್ತೊಮ್ಮೆ ಹೂಡಿಕೆದಾರರು ಹಾಗೂ ಮನೆಮಾಲೀಕರಿಗೆ ಅತ್ಯಂತ ಲಾಭದಾಯಕ ಮಾರುಕಟ್ಟೆಯಾಗಿ ಬದಲಾಗಿದೆ. ಅದರಲ್ಲೂ ಬೆಂಗಳೂರಿನ ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಭೂಮಿ ಬೆಲೆ ಬಂಗಾರದ ಬೆಲೆಯನ್ನೂ ಮೀರಿಸುವಂತೆ ಇದೆ. ಬೆಂಗಳೂರಿನ ರಿಯಲ್ ಎಸ್ಟೇಟ್‌ನಲ್ಲಿ ಎರಡು ಪ್ರದೇಶಗಳು ಭಾರೀ ಡಿಮ್ಯಾಂಡ್ ಪಡೆದುಕೊಂಡಿದೆ.

Bengaluru Real Estate Boom Land Prices Skyrocket in These Two Areas Golden Opportunity for Property Owners

Bengaluru Real Estate Boom: ಬೆಂಗಳೂರಿನ ಸರ್ಜಾಪುರ ರಸ್ತೆ ಹಾಗೂ ಥಣಿಸಂದ್ರ ಮುಖ್ಯ ರಸ್ತೆಗಳು 2021ರ ಕೊನೆ ಹಾಗೂ 2025ರ ಎರಡನೇ ತ್ರೈಮಾಸಿಕದ ನಡುವೆ ದೇಶದಲ್ಲಿ ಅತ್ಯಧಿಕ ಬಂಡವಾಳ ಮತ್ತು ಬಾಡಿಗೆ ಬೆಳವಣಿಗೆಗಳು ಕಂಡಿದೆ ಎಂದು ಅನರಾಕ್ ಸಂಸ್ಥೆ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಮುಖ್ಯ ಕಾರಣಗಳಲ್ಲಿ ಮೆಟ್ರೋ ಅಭಿವೃದ್ಧಿಯೂ ಪ್ರಮುಖವಾಗಿದೆ. ನಗರದ ಪೂರ್ವ ಐಟಿ ಕಾರಿಡಾರ್‌ನ ಪ್ರಮುಖ ಭಾಗವಾಗಿರುವ ಸರ್ಜಾಪುರ ರಸ್ತೆಯು ಈ ಅವಧಿಯಲ್ಲಿ ಆಸ್ತಿ ಬೆಲೆಗಳಲ್ಲಿ ಬರೋಬ್ಬರಿ ಶೇ 80% ರಷ್ಟು ಪ್ರಗತಿಯನ್ನು ಕಂಡಿದೆ. ಇದು ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

ಮನೆ ಅಥವಾ ಸೈಟುಗಳ ಬೆಲೆ ಮಾತ್ರವಲ್ಲ 2BHK ಸರಾಸರಿ ಮಾಸಿಕ ಬಾಡಿಗೆ 81% ರಷ್ಟು ಏರಿಕೆ ಕಂಡಿದೆ. ಹೆಬ್ಬಾಳ & ಸರ್ಜಾಪುರ ಪ್ರದೇಶಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಮುಖ್ಯವಾಗಿ ಈ ಭಾಗ ಮೆಟ್ರೋ ಯೋಜನೆ ಆಗಿದೆ. ಹೌದು ಉದ್ದೇಶಿತ ಈ ರಸ್ತೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೆಡ್‌ಲೈನ್ ಯೋಜನೆ ಜಾರಿಯಾಗುತ್ತಿದೆ. ಈ ಯೋಜನೆಯಿಂದಾಗಿ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವುದಕ್ಕೆ ಕಾರಣವಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳಕ್ಕೆ ಮುಖ್ಯವಾಗಿ ಐಟಿ ಪ್ರದೇಶ ಹಾಗೂ ಮೆಟ್ರೋ ಲೈನ್ ಕಾರಣವಾಗಿದೆ. ಅಲ್ಲದೇ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರವೂ ಲಾಭ ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+