ಬೆಂಗಳೂರು ಅತ್ಯಾಚಾರ ಪ್ರಕರಣ: ಸಂತ್ರಸ್ತೆ ವಿರುದ್ಧ ಆಟೋ ಚಾಲಕ ದೂರು!
ಬೆಂಗಳೂರು ಆಗಸ್ಟ್ 20: ಬೆಂಗಳೂರಿನ ಹೆಚ್ಎಸ್‌ಆರ್ ಲೇಔಟ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಆಟೋ ಚಾಲಕನೇ ಯುವತಿ ವಿರುದ್ಧ ದೂರು ಕೊಟ್ಟಿದ್ದಾನೆ. ಅರೇ... ಆಟೋ ಚಾಲಕನೇ ಅತ್ಯಾಚಾರವೆಸಗಿದ್ದ ಎನ್ನುವ ಆರೋಪ ಕೇಳಿಬಂದಿತ್ತಲ್ಲ. ಅದ್ಯಾಕೆ ಆಟೋ ಚಾಲಕ ದೂರು ನೀಡಿದ ಅಂತ ನೀವು ಪ್ರಶ್ನೆ ಮಾಡಬಹುದು. ಪೊಲೀಸ್ ವಿಚಾರಣೆಯಲ್ಲಿ ಕೆಲ ಸತ್ಯಗಳು ಬಯಲಾಗಿದ್ದು, ಈಗ ಸಂತ್ರಸ್ತೆಗೆ ಸಂಕಷ್ಟ ಶುರುವಾಗಿದೆ.
ಆಗಸ್ಟ್ 17ರಂದು ರಾತ್ರಿ ಯುವತಿ ಕೊರಮಂಗಲಕ್ಕೆ ಗೆಳೆಯನ ಜೊತೆ ಕಾರಿನಲ್ಲಿ ಹೋಗಿದ್ದಳು. ಊಟ ಮುಗಿಸಿಕೊಂಡು ವಾಪಸ್ ಬರುವಾಗ ಯುವತಿ ಗೆಲೆಯನ ಬದಲಾಗಿ ತಾನೇ ಕಾರನ್ನು ಚಲಾಯಿಸಿದ್ದಾಳೆ. ಈ ವೇಳೆ ಟಾನಿಕ್ ಬಳಿಯ ಮಂಗಳ ಜಂಕ್ಷನ್ ಬಳಿ ಕಾರು ಅಪಘಾತ ಸಂಭವಿಸಿದೆ.

ವಾಹನ ಚಲಾಯಿಸುವ ವೇಳೆ ಎರಡು ಮೂರು ವಾಹನಕ್ಕೆ ಡಿಕ್ಕಿ ಹೊಡೆದ ಯುವತಿ, ಎರಡು ಆಟೋ ಹಾಗೂ ಒಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾಳೆ. ಹೀಗೆ ಸರಣಿ ಅಪಘಾತ ಬಳಿಕವೂ ಕಾರನ್ನು ನಿಲ್ಲಿಸಿದೆ ಮುಂದೆ ಸಾಗಿದ್ದಾಳೆ. ಹೀಗಾಗಿ ಕೋಪಗೊಂಡ ಚಾಲಕರು ಈಕೆಯನ್ನು ಹಿಂಬಾಲಿಸಿದ್ದಾರೆ. ಕೆಲ ಆಟೋ ಚಾಲಕರು ಕಾರಿಗೆ ಅಡ್ಡಹಾಕಿ ಆಕೆಯನ್ನು ಪ್ರಶ್ನೆ ಮಾಡಿದ್ದಾರೆ.
ಆಗ ಕಾರಿನಿಂದ ಇಳಿದ ಯುವತಿ ಕಾರನ್ನು ಅಲ್ಲೇ ಬಿಟ್ಟು ತೆರಳಿದ್ದಾಳೆ. ಕಾರಿನಲ್ಲಿದ್ದ ಯುವಕ ಚಾಲಕರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ನಿಭಾಯಿಸಿ, ಬಳಿಕೆ ಆಕೆಗಾಗಿ ಹುಡುಕಾಟ ಮಾಡಿದ್ದಾನೆ. ಬಳಿಕ ಆಕೆ ಯಾರಿಂದಲೋ ಡ್ರಾಪ್ ಕೇಳಿತ್ತಿದ್ದನ್ನು ಕಂಡು ಯುವಕ ಆಕೆಯ ಬಳಿ ಬಂದು ಆಕೆಯನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾನೆ. ಈ ವೇಳೆ ಪರಿಸ್ಥಿತಿ ನಿಭಾಯಿಸಿರುವುದಾಗಿಯೂ ಗೆಳೆಯ ಆಕೆಗೆ ಹೇಳಿದ್ದಾನೆ. ಆದರೂ ಯುವತಿ ಬೇರೆಯವರಿಂದ ಡ್ರಾಪ್ ತೆಗೆದುಕೊಂಡು ಅಲ್ಲಿಂದ ಹೊರಟು ಹೋಗಿದ್ದಾಳೆ.

ಈ ವೇಳೆ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ತಿಳಿದು ಬಂದಿದೆ. ಬಳಿಕ ಆಕೆ ಸ್ನೇಹಿತರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಮೇಲೆ ಅತ್ಯಾಚಾರವೆಸಗಿದವರಿಗಾಗಿ ಶೋಧಕಾರ್ಯ ಮುಮದುವರೆದಿದೆ. ಘಟನೆ ನಡೆದ ಬಳಿಕ ಆಟೋ ಚಾಲಕ ಸಂತ್ರಸ್ತೆ ಹಾಗೂ ಗೆಳೆಯನ ವಿರುದ್ಧ ಆಡುಗೋಡೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಸಂತ್ರಸ್ತೆಗೆ ಹೊಸ ಸಂಕಷ್ಟ ಎದುರಾಗಿದೆ.
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ
ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುಭಿಕ್ಷಾ (25) ಮೃತ ದುರ್ದೈವಿ. ಮೃತಳಿಗೆ ಎರಡೂವರೆ ವರ್ಷದ ಒಂದು ಗುಂಡು ಮಗು ಇದೆ. ಸುಭಿಕ್ಷಾ ಕಳೆದ 4 ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಜೊತೆ ವಿವಾಹವಾಗಿದ್ದರು. ನಿನ್ನೆ ಸಂಜೆ 4 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದು ವರದಕ್ಷಿಣೆ ಕುರುಕುಳವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ತಹಶೀಲ್ದಾರ್ ರಿಂದ ಸ್ಥಳ ಮಹಜರು ನಡೆದಿದೆ. ಮೃತಳ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಲಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.












Click it and Unblock the Notifications