Bengaluru Weather Today: ಭಾರೀ ಮಳೆಗೆ 10 ವಿಮಾನಗಳು ಚೆನ್ನೈಗೆ ಬದಲಾವಣೆ: ಬೆಂಗಳೂರು ಹವಾಮಾನ
ಬೆಂಗಳೂರು, ಮಾರ್ಚ್ 23: ವಾರಗಳ ಕಾಲ ಬಿಸಿಲಿನ ತಾಪಕ್ಕೆ ಕಾದಿದ್ದ ಬೆಂಗಳೂರು ನಗರವು ಶನಿವಾರ ಜೋರು ಮಳೆಗೆ ಸಾಕ್ಷಿ ಆಯಿತು. ನೋಡ ನೋಡುತ್ತಲೇ ಸಂಜೆ ಸುರಿದ ಮಳೆಗೆ (Bengaluru Rains) ವಾಹನ ಸಂಚಾರ ಅಸ್ತವ್ಯಸ್ತ ಮಾತ್ರವಲ್ಲದೇ, ಈ ಮಳೆಯಿಂದಾಗಿ ವಿಮಾನಗಳ ಸಂಚಾರ, ಲ್ಯಾಂಡಿಂಗ್‌ಗೂ ತೊಂದರೆ ಉಂಟು ಮಾಡಿತು. ಹೀಗಾಗಿ ಹಲವು ವಿಮಾನಗಳು ಬೆಂಗಳೂರು ಬದಲಾಗಿ ಚೆನ್ನೈ ಶೀಫ್ಟ್ ಆಗಬೇಕಾಯಿತು.
ಬೆಂಗಳೂರಿನಲ್ಲಿ ಪೂರ್ವ ಮುಂಗಾರು (Pre Monsoon 2025) ಚುರುಕಾಗಿದೆ. ಪೂರ್ವ ಮುಂಗಾರು ಶುರುವಾದಾಗಿನಿಂದ ಎರಡನೇ ಭಾರಿ ಅಬ್ಬರಿಸಿದ ಭಾರೀ ಮಳೆಯಿಂದಾಗಿ ವಿಮಾನ ಪ್ರಯಾಣದಲ್ಲಿ ಗಮನಾರ್ಹ ಅಡಚಣೆ ಉಂಟಾಗಿದೆ. ಕನಿಷ್ಠ 10 ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಗಿದೆ. ಬೆಂಗಳೂರು ಬದಲಾಗಿ ಅಲ್ಲಿ ಲ್ಯಾಂಡಿಂಗ್ ಮಾಡಲಾಯಿತು ಎಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru Airport) ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹವಾಮಾನದಲ್ಲಿನ ದಿಢೀರ್ ಬದಲಾವಣೆ, ಗಾಳಿ-ಮಳೆಯ ಪರಿಸ್ಥಿತಿಗಳು ವಿಮಾನ ಸಂಚಾರ ವಿಳಂಬಕ್ಕೆ ಕಾರಣವಾಯಿತು. ತಡವಾಗಿ ಬಂದ ಇಂಡಿಗೋ ಮತ್ತು ಏರ್ ಇಂಡಿಯಾ ಸೇರಿದಂತೆ ಕೆಲವು ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಯಿತು. ಹೀಗಾಗಿ ಪ್ರಯಾಣಿಕರು ವಿಮಾನ ವೇಳಾಪಟ್ಟಿ, ಸದ್ಯದ ವಿಮಾನಗಳ ಸ್ಥಿತಿಗತಿ ಕುರಿತು ಗಮನಿಸುವಂತೆ ಸೂಕ್ತ ಸಲಹೆ ನೀಡಲಾಗಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ X ಖಾತೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಅಗತ್ಯ ಸಲಹೆ ಸೂಚನೆ
ಹವಾಮಾನದಲ್ಲಿನ ಬದಲಾವಣೆ, (Bengaluru Weather) ಜೋರು ಮಳೆಯ ಕಾರಣದಿಂದ ವಿಮಾನ ಸಂಚಾರ ಬದಲಾವಣೆಯಲ್ಲಿ ಅಧಿಕೃತವಾಗಿ ದೃಢಪಡಿಸಿದೆ. ಪರಿಸ್ಥಿತಿ ಕುರಿತು ಸಂಸ್ಥೆ ಪ್ರಯಾಣಿಕರಿಗೆ ತಿಳಿಸಿದೆ. ತೀವ್ರ ಮಳೆಯಿಂದಾಗಿ ಸಕಾಲದಲ್ಲಿ ವಿಮಾನ ಓಡಿಸಲು ಪ್ರಯತ್ನಿಸಲಾಗಿದೆ. ವಿಳಂಬದ ಕುರಿತು ಪ್ರಯಾಣಿಕರಿಗೆ ಸಲಹೆ ನೀಡಿದೆ. ನೈಜ-ಸಮಯದ ಮಾಹಿತಿಗಾಗಿ ಪ್ರಯಾಣಿಕರು ವಿಮಾನದ ಸ್ಥಿತಿ ಪರಿಶೀಲಿಸುವಂತೆ ಮಾಹಿತಿ ನೀಡುತ್ತಲೇ ಬಂದಿದ್ದೇವೆ. ಪ್ರಯಾಣಿಕರಿಗೆ ಪುನಃ ಟಿಕೆಟ್ ಬುಕ್ ಮಾಡಲು, ಹಣ ಮರುಪಾವತಿ ಆಯ್ಕೆಯನ್ನು ನೀಡಲಾಗಿದೆ ಎಂದು ಇಂಡಿಗೋ ತಿಳಿಸಿದೆ.
ಬೆಂಗಳೂರು ಭಾಗದಲ್ಲಿ ಶನಿವಾರ ಸಂಜೆಯಿಂದ ಸುರಿದ ಭಾರೀ ಮಳೆಯಿಂದ ವಾಯು ಪ್ರಯಾಣಕ್ಕೆ ಅಡಚಣೆ ಉಂಟಾಯಿತು. ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ ಎಂದು ಏರ್ ಇಂಡಿಯಾ ಸಹ ಅಧಿಕೃತ ಮಾಹಿತಿ ನೀಡಿದೆ. ಪ್ರಯಾಣಿಕರು ಏರ್‌ಪೋರ್ಟ್ ತೆರಳುವ ಮೊದಲು ತಮ್ಮ ವಿಮಾನದ ಸ್ಥಿತಿಗತಿ ಪರಿಶೀಲಿಸಿ ತೆರಳುವಂತೆ ಹೇಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏರ್ ಇಂಡಿಯಾ ಮಾಹಿತಿ ಹಂಚಿಕೊಂಡಿದೆ.

ಬೆಂಗಳೂರಿನ ಅನೇಕ ಕಡೆಗಳಲ್ಲಿ ಶನಿವಾರ ವ್ಯಾಪಕ ಮಳೆ ದಾಖಲಾಗಿದೆ. ಹತ್ತೇ ಹತ್ತು ನಿಮಿಷ ಮಳೆಗೆ ನಗರ ಕೆಲವು ಭಾಗಗಳಲ್ಲಿ ನೀರು ನಿಂತಿದೆ. ಕಾದ ನೆಲಕ್ಕೆ ತೆಂಪೆರೆದ ಮಳೆರಾಯನಿಂದ ಸಂಚಾರ ಸಮಸ್ಯೆ ಉಂಟಾಗಿದೆ. ತಾಪಮಾನಕ್ಕೆ ತತ್ತರಿಸಿದ್ದ ಜನರು ನಿಟ್ಟುಸಿರುವ ಬಿಡುವಂತಾಗಿದೆ. ವಾತಾವರಣ ಕೂಲ್ ಆಗಿದೆ.
ಸದ್ಯ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ಬಿಸಿಲಿಗೆ ಮುಕ್ತಿ ಸಿಕ್ಕಿದೆ. ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದ್ದು, ಮುಂದಿನ ಎರಡು ದಿನ ಇದೇ ರೀತಿ ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ಬೆಂಗಳೂರು ಏರ್‌ಪೋರ್ಟ್ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ, ಈ ಭಾಗದಲ್ಲಿ ವ್ಯಾಪಕ ಮಳೆ ಆಗಿದೆ. ಹೊಸಕೋಟೆಯಲ್ಲಿ ಆಲಿಕಲ್ಲು ಮಳೆ ದಾಖಲಾಗಿದೆ.












Click it and Unblock the Notifications