ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪಟಾಕಿ ವ್ಯಾಪಾರಿಗಳ ಬಿಸಿನೆಸ್ ಟುಸ್!

By ಗುರು ಕುಂಟವಳ್ಳಿ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 17 : 'ಸುಮಾರು 20 ವರ್ಷದಿಂದ ವ್ಯಾಪಾರ ಮಾಡ್ತಾ ಇದೀನಿ ಸರ್. ವರ್ಷದಿಂದ ವರ್ಷಕ್ಕೆ ವ್ಯಾಪಾರ ಕಡಿಮೆ ಆಗ್ತಿದೆ, ಈ ವರ್ಷ ಅಂತು ಫುಲ್ ಡಲ್' ಪಟಾಕಿ ಅಂಗಡಿಯಲ್ಲಿ ಜನರಿಗಾಗಿ ಕಾಯುತ್ತಿದ್ದ ಜಗನ್ ಹೀಗೆ ಮಾತು ಆರಂಭಿಸಿದರು.

ಅದು ಬೆಂಗಳೂರಿನ ರಾಮಕೃಷ್ಣ ಆಶ್ರಮದ ಸಮೀಪದ ಬೆಂಗಳೂರು ಹೈಸ್ಕೂಲ್ ಮೈದಾನ. ಬಿಬಿಎಂಪಿ ಕೊನೆ ಕ್ಷಣದಲ್ಲಿ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು ಅನುಮತಿ ಕೊಟ್ಟಿದೆ. 10ಕ್ಕೂ ಹೆಚ್ಚು ವ್ಯಾಪಾರಸ್ಥರು ಅಲ್ಲಿ ಪಟಾಕಿ ಅಂಗಡಿ ಇಟ್ಟಿದ್ದಾರೆ.

ಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿಜ್ಞಾನದ ಬೆಳಕಿನ ಉತ್ಸವ ದೀಪಾವಳಿ ಶುಭತರಲಿ

ಮೈದಾನದಲ್ಲಿ ಮೊದಲು ಸಿಗುವುದೇ ಜಗನ್ ಅವರ ಅಂಗಡಿ. ಶಿವಕಾಶಿಯಿಂದ ಪಟಾಕಿ ತಂದು ಮಾರುವ ಜಗನ್, 'ಈ ಬಾರಿ ವ್ಯಾಪಾರ ಫುಲ್ ಡಲ್ ಸರ್. ಐದು ದಿನ ಮಾತ್ರ ನಮ್ಮ ವ್ಯಾಪಾರ ನಡೆಯೋದು. ಆ ಮೇಲೆ ಉಳಿದ ಪಟಾಕಿ ವಾಪಸ್ ಕೊಡ್ತಿವಿ. ಇದನ್ನ ಮನೆಯಲ್ಲಿಯೂ ಇಟ್ಟುಕೊಳ್ಳುವಂತಿಲ್ಲ' ಎಂದು ಮಾತು ಮುಂದುವರೆಸಿದರು.

ಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳುಬೆಳಕಿನ ಹಬ್ಬ ದೀಪಾವಳಿ ಹೀಗಿದ್ದರೆ ಚೆನ್ನ: 10 ಸಲಹೆಗಳು

'46 ಐಟಮ್‌ಗಳನ್ನು ಹೊಂದಿರುವ ಬಾಕ್ಸ್‌ಗೆ 1,500 ರೂ. ನೋಡಿ. ಮಕ್ಕಳಿಗೆ ಇಷ್ಟವಾಗುವ ಪಟಾಕಿ, ಶಬ್ದ ಇಲ್ಲದಿರುವುದು ಎಲ್ಲವೂ ಬಾಕ್ಸ್‌ನಲ್ಲಿದೆ. ಹಲವು ವರ್ಷಗಳಿಂದ ನೋಡ್ತಾ ಇದೀನಿ ಪಟಾಕಿ ಕೊಳ್ಳುವುದು ಕಡಿಮೆ ಆಗುತ್ತಲೇ ಇದೆ. ಈ ಸಲ ಭಾರೀ ಮಳೆಯಾದ ಬಳಿಕ ಬೇಡಿಕೆ ಮತ್ತಷ್ಟು ಕುಗ್ಗಿ ಹೋಗಿದೆ ನೋಡಿ' ಎಂದು ಗ್ರಾಹಕರನ್ನು ಮಾತನಾಡಿಸಲು ಹೋದರು....

ಅಕ್ಟೋಬರ್ 18ರ ತನಕ ಬೆಂಗಳೂರಲ್ಲಿ ಮಳೆ ಮುನ್ಸೂಚನೆಅಕ್ಟೋಬರ್ 18ರ ತನಕ ಬೆಂಗಳೂರಲ್ಲಿ ಮಳೆ ಮುನ್ಸೂಚನೆ

ಎಲ್ಲಾ ವ್ಯಾಪಾರಿಗಳದ್ದೂ ಒಂದೇ ಕೂಗು

ಎಲ್ಲಾ ವ್ಯಾಪಾರಿಗಳದ್ದೂ ಒಂದೇ ಕೂಗು

ನಗರದ ಶಂಕರನಾಗ್ ಸರ್ಕಲ್, ಬೆಂಗಳೂರು ಹೈಸ್ಕೂಲ್. ಚೌಡೇಶ್ವರಿ ನಗರ, ಮಲ್ಲೇಶ್ವರಂ 18ನೇ ಕ್ರಾಸ್, ಯಡಿಯೂರು ಹೀಗೆ ವಿವಿಧ ಮೈದಾನಗಳಲ್ಲಿನ ಪಟಾಕಿ ವ್ಯಾಪಾರಸ್ಥರದ್ದು ಒಂದೇ ಕೂಗು ವ್ಯಾಪಾರ ಕಡಿಮೆ ಆಗಿದೆ. ಮಳೆ, 'ಪಟಾಕಿ ಹೊಡೆಯಬೇಡಿ ಎಂಬ ಜಾಗೃತಿ ಮುಂತಾದ ಕಾರಣಗಳಿಂದಾಗಿ ವ್ಯಾಪಾರ ಕಡಿಮೆ ಆಗುತ್ತಿದೆ' ಎನ್ನುತ್ತಾರೆ ವ್ಯಾಪಾರಸ್ಥರು.

'ಹಿಂದಿಯವರು ಶಬ್ದದ ಪಟಾಕಿ ಕೇಳ್ತಾರೆ'

'ಹಿಂದಿಯವರು ಶಬ್ದದ ಪಟಾಕಿ ಕೇಳ್ತಾರೆ'

'ನಿನ್ನೆ ಸ್ಟಾಲ್ ಓಪನ್ ಮಾಡಿದೆ ಸರ್, ಶನಿವಾರ ಮುಚ್ಚುವೆ. ಎಲ್ಲಾ ಬಗೆಯ ಪಟಾಕಿನೂ ಇದೆ. ನಮ್ಮ ರಾಜ್ಯದವರು ಬಂದ್ರೆ ಬರೇ ಲೈಟಿಂಗ್ ಇರುವ ಪಟಾಕಿ ಕೇಳ್ತಾರೆ. ಹಿಂದಿಯವರು ಬಂದ್ರೆ ಅವರಿಗೆ ಶಬ್ದ ಬರುವ ಪಟಾಕಿ ಬೇಕು' ಎನ್ನುತ್ತಾರೆ ಜಗನ್.

'ಗಲಾಟೆ ಮಾಡಿದ್ರೆ ಮಾತ್ರ ಕೊಡಿಸ್ತಾರೆ'

'ಗಲಾಟೆ ಮಾಡಿದ್ರೆ ಮಾತ್ರ ಕೊಡಿಸ್ತಾರೆ'

'ಪಟಾಕಿ ಹೊಡೆಯಬೇಡಿ ಎಂದು ಶಾಲೆಗಳಲ್ಲಿ ಜಾಗೃತಿ ಮೂಡಿಸ್ತಾರೆ ಸರ್. ಆದ್ದರಿಂದ ಮಕ್ಕಳು ಪಟಾಕಿ ಹೊಡೆಯುವುದು ಕಡಿಮೆ ಮಾಡಿದಾರೆ. ಗಲಾಟೆ ಮಾಡಿದ್ರೆ ಮಾತ್ರ ಕೊಡಿಸ್ತಾರೆ ಅಷ್ಟೆ' ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸಿದ ವ್ಯಾಪಾರಿ.

'ಬೆಳಗ್ಗೆ ಜನ ಬರೋಲ್ಲ, ಸಂಜೆ ಮಳೆ ಬರುತ್ತೆ ಅಂತ ಭಯ'

'ಬೆಳಗ್ಗೆ ಜನ ಬರೋಲ್ಲ, ಸಂಜೆ ಮಳೆ ಬರುತ್ತೆ ಅಂತ ಭಯ'

20 ವರ್ಷದಿಂದ ವ್ಯಾಪಾರ ಮಾಡುವ ಮುಸ್ತಾಕ್ ಹೇಳುವ ಮಾತು ಅದೇ. 'ಬೆಳಗ್ಗೆ ಜನ ಬರೋಲ್ಲ ಸರ್. ಸಂಜೆ ಮಳೆ ಬಂದ್ರೆ ಯಾರು ಮನೆಯಿಂದ ಹೊರಗೆ ಬರಲ್ಲ. ಐದು ದಿನದಲ್ಲಿ ಎಷ್ಟು ವ್ಯಾಪಾರ ಆಗುತ್ತೆ ಗೊತ್ತಿಲ್ಲ?. ಪ್ರತಿ ವರ್ಷದಂತೆ ಈ ವರ್ಷವೂ ಸ್ಟಾಲ್ ಮಾತ್ರ ಹಾಕಿದ್ದೀವಿ'.

'ಪ್ರಚಾರ ಹೆಚ್ಚಾಗ್ತಾ ಇದೆ ನೋಡಿ'

'ಪ್ರಚಾರ ಹೆಚ್ಚಾಗ್ತಾ ಇದೆ ನೋಡಿ'

'ಪಟಾಕಿ ಹೊಡೆಯಬೇಡಿ ಎಂಬ ಪ್ರಚಾರ ಹೆಚ್ಚಾಗುತ್ತಿದೆ. ಇದರಿಂದ ವ್ಯಾಪಾರ ಕಡಿಮೆ ಆಗುತ್ತಿದೆ. ಬರೀ ಮಳೆಯಿಂದ ವ್ಯಾಪಾರ ಕಡಿಮೆ ಆಗಿದೆ ಅನ್ನೋದಕ್ಕೆ ಸಾಧ್ಯ ಇಲ್ಲ ಸರ್. ಹೋದ ವರ್ಷವೂ ಮಾರಾಟ ಕಡಿಮೆ ಆಗಿತ್ತು. ಈ ವರ್ಷ ಇನ್ನೂ ಕಡಿಮೆ ಆಗಿದೆ. ಸುಮಾರು ಖರ್ಚು ಮಾಡಿದ್ದೇವೆ, ಹಣ ಇರೋಲ್ಲ ಅಂತ ಕಾರ್ಡ್ ಬಳಸಲು ಮೆಷಿನ್ ಎಲ್ಲಾ ತಂದಿದ್ದೇವೆ. ಎಷ್ಟು ಲಾಭ ಬರುತ್ತೋ ಗೊತ್ತಿಲ್ಲ' ಎಂದರು 10 ವರ್ಷದಿಂದ ಪಟಾಕಿ ಮಾರುತ್ತಿರುವ ಕುಮಾರ್.

ವಿಧವಿಧದ ಪಟಾಕಿ ಇದೆ, ಪಿಕಪ್ ಆಗಬಹುದು

ವಿಧವಿಧದ ಪಟಾಕಿ ಇದೆ, ಪಿಕಪ್ ಆಗಬಹುದು

'ವಿಧವಿಧದ ಪಟಾಕಿಗಳು ಇವೆ. ಬೆಳಗ್ಗೆ ಜನರು ಹೆಚ್ಚಿಗೆ ಬರೋಲ್ಲ. 4 ಗಂಟೆ ನಂತರ ಬರ್ತಾರೆ. ಇನ್ನು ಎರಡು ದಿನ ಇದೆ. ವ್ಯಾಪಾರ ಪಿಕಪ್ ಆಗಬಹುದು; ಎನ್ನುತ್ತಾರೆ 15 ವರ್ಷದಿಂದ ಪಟಾಕಿ ಮಾರುತ್ತಿರುವ ವೆಂಕಟೇಶ್.

400 ರೂ.ನಿಂದ ಆರಂಭ

400 ರೂ.ನಿಂದ ಆರಂಭ

400 ರೂ.ನಿಂದ 5000 ರೂ. ವರೆಗಿನ ಪಟಾಕಿ ಗಿಫ್ಟ್‌ ಬಾಕ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. 8000 ರೂ. ಗಳ ವಿಶೇಷ ಗಿಫ್ಟ್‌ ಪ್ಯಾಕ್‌ ಇದೆ. ಗ್ರಾಹಕರು ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

English summary
Heavy rain lashed Bengaluru from past two months. Firecrackers business hit by rain. There is no demand for in this year at Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X