Bengaluru Rain: ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಧರೆಗುರುಳಿದ ಮರಗಳು, ಟ್ರಾಫಿಕ್ ಜಾಮ್
ಬೆಂಗಳೂರಿನ ಹಲವು ಕಡೆಗಳಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಹಲವು ಅವಾಂತರ ಉಂಟಾಗಿದೆ. ನಗರದಲ್ಲಿ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ಟ್ರಾಫಿಕ್ ಪೋಲೀಸರು ಸಂಚಾರ ದಟ್ಟಣೆ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ. ಹಲವು ಕಡೆ ಅಂಡರ್ ಪಾಸ್ ತುಂಬಿದ್ದು ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಿದ್ದಾರೆ. ಹಲವು ಕಡೆ ರಸ್ತೆ ಮೇಲೆ ಮರ ಬಿದ್ದ ಕಾರಣ ಸಂಚಾರ ಸಮಸ್ಯೆ ಉಂಟಾಗಿದೆ.

ಕೆಎಚ್‌ಬಿ ಮುಖ್ಯ ರಸ್ತೆಯ ಪುಷ್ಪಾಂಜಲಿ ಥಿಯೇಟರ್ ಬಳಿ ಮರದ ಕೊಂಬೆ ಮುರಿದು ರಸ್ತೆಯಲ್ಲಿ ಬಿದ್ದ ಕಾರಣ ಸಂಚಾರ ನಿಧಾನಗತಿಯಲ್ಲಿತ್ತು. ಮರದ ಕೊಂಬೆಯನ್ನು ಶೀಘ್ರವಾಗಿ ತೆರವುಗೊಳಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಮುಳುಗಿದ ರಸ್ತೆಗಳು, ಟ್ರಾಫಿಕ್ ಜಾಮ್
ಮಹಾರಾಣಿ ಕೆಳಸೇತುವೆ, ವಡ್ಡರಪಾಳ್ಯ ಸಿಗ್ನಲ್, ಸುಮ್ಮನನಹಳ್ಳಿ, ಹೆಬ್ಬಾಳ ರೈಲು ನಿಲ್ದಾಣದಲ್ಲಿ ರಸ್ತೆಗಳಲ್ಲಿ ನೀರು ನಿಂತ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಲಿಂಗರಾಜಪುರ ಮುಖ್ಯರಸ್ತೆಯಲ್ಲಿ ಮರ ಬಿದ್ದ ಕಾರಣ ಸಂಚಾರ ನಿಧಾನಗತಿಯಲ್ಲಿತ್ತು.
ರಸ್ತೆಗಳಲ್ಲಿ ನೀರು ನಿಂತ ಕಾರಣ ಹೆಬ್ಬಾಳ ಫ್ಲೈಓವರ್ ವಿಮಾನ ನಿಲ್ದಾಣದ ಕಡೆಗೆ ಸಾಗುವ ರಸ್ತೆ, ಹೆಬ್ಬಾಳ ಸರ್ಕಲ್ ಬಸ್ ನಿಲ್ದಾಣ, ವೀರಣ್ಣಪಾಳ್ಯದ ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಹೆಣ್ಣೂರು ಮುಖ್ಯರಸ್ತೆ, ಪಿ.ಜಿ.ಹಳ್ಳಿ, ಎಚ್‌ಕ್ಯೂಟಿಸಿ ಬಸ್ ನಿಲ್ದಾಣ, ರಾಮಮೂರ್ತಿ ನಗರ ಕೆಳಸೇತುವೆ, ಹೆಬ್ಬಾಳ ಸರ್ಕಲ್ ಬಸ್ ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ನಿಧಾನಗತಿಯ ಸಂಚಾರ ಉಂಟಾಗಿತ್ತು.
First rains of the season deal a blow to Bengaluru's brand as civic infrastructure struggles to cope, requiring significant efforts for improvement.
— Suhas Satish M.D. (@CerebralWizard) May 6, 2024
We need to do much much better!!! #Bengaluru#Traffic#Rains#Civic #infrastructure pic.twitter.com/9hDYokrsOQ
ಮೇಕ್ರಿ ವೃತ್ತದಲ್ಲಿ ಬೃಹತ್ ಮರವೊಂದು ಬಿದ್ದಿದ್ದ ಕಾರಣ ಸಿಕ್ಯೂಎಎಲ್ ಜಂಕ್ಷನ್‌ನಿಂದ ಮೇಕ್ರಿ ವೃತ್ತದ ಕಡೆಗೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಥಣಿಸಂದ್ರ ಮುಖ್ಯರಸ್ತೆ ಕಡೆಗೆ ನಗರವ ಬಸ್ ನಿಲ್ದಾಣದಲ್ಲಿ ಜಲಾವೃತಗೊಂಡಿದ್ದರಿಂದ ನಿಧಾನಗತಿಯ ಸಂಚಾರ ಉಂಟಾಗಿತ್ತು. ನೀರು ತುಂಬಿರುವ ಕಾರಣ ಸ್ಯಾಂಕಿ ರಸ್ತೆಯ ಕಡೆಗೆ ಸಂಪರ್ಕಿಸುವ ಅಂಡರ್‌ಪಾಸ್, ಕಲ್ಪನಾ ಜಂಕ್ಷನ್ ಬಳಿ (ಕನ್ನಿಂಗ್‌ಹ್ಯಾಮ್ ರಸ್ತೆ) ಮುಚ್ಚಲಾಗಿತ್ತು.
ಗುಂಡೂರಾವ್ ವೃತ್ತದಲ್ಲಿ ಚಂದನ ಟಿವಿ ಟವರ್ ಕಡೆಗೆ ಮರ ಬಿದ್ದಿತ್ತು. ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಕ್ವೀನ್ಸ್ ರಸ್ತೆ ಕಡೆಗೆ ಮರ ಬಿದ್ದ ಕಾರಣ ವಾಹನ ಸವಾರರು ಪರದಾಡುವಂತಾಗಿತ್ತು.
ಮಳೆಗಾಲು ಇನ್ನು ಆರಂಭವೇ ಆಗಿಲ್ಲ, ಹೀಗೆ ಒಂದೇ ಮಳೆಗೆ ನಗರದಲ್ಲಿ ಹಲವು ರಸ್ತೆಗಳು, ಅಂಡರ್ ಪಾಸ್ ಗಳು ಜಲಾವೃತವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗೆ ಆದರೆ ಬ್ರಾಂಡ್ ಬೆಂಗಳೂರು ಕತೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications