Bengaluru Racecourse: ಬೆಂಗಳೂರು ರೇಸ್‌ಕೋರ್ಸ್ ಕುಣಿಗಲ್‌ಗೆ ಸ್ಥಳಾಂತರ: ರಾಜ್ಯ ಸರ್ಕಾರ ನಿರ್ಧಾರ
Bengaluru Racecourse: ಬೆಂಗಳೂರು ಹೃದಯ ಭಾಗದಲ್ಲಿರುವ ಹೆಸರುವಾಸಿಯಾಗಿದ್ದ ರೇಸ್‌ಕೋರ್ಸ್ ಅನ್ನು ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಇರುವ ಈ ಜಾಗವನ್ನು ಮೈಸೂರು ರಾಜರು ಕುದುರೆ ಓಟದ ಸ್ಪರ್ಧೆಗೆಂದು ನೀಡಿದ್ದರು. ಇದೀಗ ಇದನ್ನು ಕುಣಿಗಲ್‌ಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಕೇಂದ್ರ ಭಾಗದಲ್ಲಿನ ರೇಸ್‌ಕೋರ್ಸ್ ಅನ್ನು ಕುಣಿಗಲ್ ಸ್ಟಡ್ ಫಾರಂ ಬಳಿ 101.24 ಎಕರೆ ಜಾಗಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಹತ್ತಿರದ 8.36 ಎಕರೆ ಜಮೀನನ್ನು ಸೇರಿಸಿ ಒಟ್ಟು 110.20 ಎಕರೆ ಬಾಡಿಗೆ ಆಧಾರದ ಮೇಲೆ 29 ವರ್ಷಗಳ ಅವಧಿಗೆ ಟರ್ಫ್ ಕ್ಲಬ್‌ಗೆ ನೀಡಲಾಗುವುದು. ಹಾಗಾದ್ರೆ ಪ್ರಸ್ತುತ ಇರುವ ಈ ಸ್ಥಳವನ್ನು ಕೊಡುಗೆಯಾಗಿ ನೀಡಿದ್ದು ಯಾಕೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮೈಸೂರು ಮಹಾರಾಜರು ನೀಡಿದ್ದ ಜಾಗ
ರೇಸ್‌ಕೋರ್ಸ್ ಮಂಡಳಿಯು ಈ ಸ್ಥಳಾಂತರವನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಒಪ್ಪಿದೆ. ಮೂಲತಃ 1923ರಲ್ಲಿ ಮೈಸೂರಿನ ರಾಜರು 83.14 ಎಕರೆ ಜಾಗವನ್ನು ಕುದುರೆ ಓಟ ಸ್ಪರ್ಧೆ ಮತ್ತು ತರಬೇತಿಗಾಗಿ ನೀಡಿದ್ದರು. ಸ್ಥಳಾಂತರದ ನಂತರ ಈ ಕೇಂದ್ರದ ಜಾಗವನ್ನು ಹಸಿರು ಪ್ರದೇಶವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸ್ಥಳಾಂತರ ಮಾಡಲು ಪ್ರಮುಖ ಕಾರಣ ಏನು?
ಹೆಚ್ಚುವರಿ ಬಾಡಿಗೆ ಸಂಗ್ರಹದ ನಿರ್ಧಾರ ಕೈಗೊಂಡಿದ್ದು, 2010ರಿಂದ ಜಮೀನು ಬಾಡಿಗೆ ದರವನ್ನು ಪರಿಶೀಲಿಸದೇ ಉಳಿಯುವ ಕಾರಣದಿಂದ ನಷ್ಟ ಆಗಿರುವ ಹಣವನ್ನು ಬರಿಸಲಾಗುವುದು. 2010-2021 ನಡುವಿನ ಸಮಯದಲ್ಲಿ ವಾರ್ಷಿಕ ಆದಾಯದ ಶೇಕಡ 2ರಷ್ಟು ಬಾಡಿಗೆ ವಸೂಲಿ ಮಾಡಲು ತೀರ್ಮಾನಿಸಲಾಗಿದೆ.
ರೇಸ್‌ಕೋರ್ಟ್ ಸ್ಥಳಾಂತರಕ್ಕೆ ಪ್ರಮುಖ ಕಾರಣವೆಂದರೆ, ಬೆಂಗಳೂರು ಕೇಂದ್ರದ ಸಂಚಾರದಟ್ಟಣೆ. ಕುಣಿಗಲ್‌ನಲ್ಲಿ ಈಗಾಗಲೇ 1992ರಿಂದ ಖಾಸಗಿ ಸಂಸ್ಥೆಯು ಸ್ಟಡ್ ಫಾರಂ ರೇಸ್‌ಕೋರ್ಸ್ ನಡೆಸುತ್ತಿದ್ದು, ಮೂಲಸೌಕರ್ಯವಾಗಿದೆ ಮತ್ತು ಸಂಚಾರದ ದಟ್ಟಣೆ ಸಮಸ್ಯೆ ಇಲ್ಲದಿರುವುದರಿಂದ ಸ್ಥಳಾಂತರ ಸೂಕ್ತವಾಗಿದೆ ಎಂದು ಸರ್ಕಾರ ತಿಳಿಸಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications