E-Khata: ಬೆಂಗಳೂರಿನಲ್ಲಿ 21% ಕುಸಿತ ಕಂಡ ಆಸ್ತಿ ನೋಂದಣಿ; ಕಾರಣವೇನು?
ಬೆಂಗಳೂರು ಮಹಾನಗರದಲ್ಲಿ ರಿಯಲ್ ಎಸ್ಟೇಟ್ ಇಂದು ದೊಡ್ಡ ಉದ್ಯಮವಾಗಿದೆ. ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ಆಸ್ತಿಗಳ ಮಾರಾಟ ವಹಿವಾಟು ನಡೆಯುತ್ತದೆ. ಆಸ್ತಿ ಖರೀದಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇ-ಖಾತೆ ಸೇವೆಯನ್ನು ಜಾರಿಗೆ ತಂದಿದೆ. ಆರಂಭದಲ್ಲಿ ಇದರಿಂದ ಒಂದಷ್ಟು ಸಮಸ್ಯೆಗಳಾಗಿದ್ದು, ಆಸ್ತಿ ನೋಂದಣಿಯಲ್ಲಿ ಕುಸಿತ ಕಂಡುಬಂದಿದೆ.
ಅಕ್ಟೋಬರ್ ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 5667 ಆಸ್ತಿ ನೋಂದಣಿಗಳನ್ನು ಮಾಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 7167 ಆಸ್ತಿಗಳನ್ನು ನೋಂದಣಿ ಮಾಡಿದ್ದು ಅಕ್ಟೋಬರ್ ತಿಂಗಳಿನಲ್ಲಿ 21% ಕುಸಿತವಾಗಿದೆ ಎಂದು ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ (ಐಜಿಆರ್) ವರದಿ ತಿಳಿಸಿದೆ.

ಇ-ಖಾತೆ ಸೇವೆಯನ್ನು ಜಾರಿಗೆ ತರಲು ಬಿಬಿಎಂಪಿ ಆರಂಭಿಸಿರುವುದೇ ಆಸ್ತಿ ನೋಂದಣಿ ಕಡಿಮೆಯಾಗಲು ಕಾರಣವಾಗಿದೆ. ಇ-ಖಾತಾ ವ್ಯವಸ್ಥೆಯಿಂದ ಖರೀದಿದಾರರಿಗೆ ಆಸ್ತಿ ದಾಖಲೆಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲು ಹಲವು ಸವಾಲುಗಳು ಎದುರಾಗುತ್ತಿವೆ.
ಏನಿದು ಇ-ಖಾತೆ?
ಇ-ಖಾತಾ ಸಾಂಪ್ರದಾಯಿಕ ಖಾತೆ ವ್ಯವಸ್ಥೆಯ ಎಲೆಕ್ಟ್ರಾನಿಕ್ ಆವೃತ್ತಿ. ಅಕ್ಟೋಬರ್ ತಿಂಗಳಿನಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ಜಾರಿಗೆ ತಂದಿದೆ. ಆನ್‌ಲೈನಲ್ಲಿ ಈ ಡಿಜಿಟಲ್ ದಾಖಲೆಯುವ ಲಭ್ಯವಿರಲಿದ್ದು ಆಸ್ತಿ ಮಾಲೀಕರು ಕಚೇರಿಗಳಿಗೆ ಭೇಟಿ ನೀಡದೆಯೇ ತಮ್ಮ ಖಾತೆಗೆ ಅರ್ಜಿ ಸಲ್ಲಿಸಲು, ಡೌನ್‌ಲೋಡ್ ಮಾಡಲು ಮತ್ತು ಪರಿಶೀಲನೆ ಮಾಡಲು ಅನುವು ಮಾಡಿಕೊಡುತ್ತದೆ.
2023ರ ಅಕ್ಟೋಬರ್ ತಿಂಗಳಿಗೆ ಹೋಲಿಕೆ ಮಾಡಿದರೆ 2024ರ ಅಕ್ಟೋಬರ್ ನಲ್ಲಿ ಬೆಂಗಳೂರಿನಲ್ಲಿ ಆಸ್ತಿಗಳ ನೋಂದಣಿ ಸಂಖ್ಯೆ 12.8% ರಷ್ಟು ಕಡಿಮೆಯಾಗಿದೆ. ಆಗಸ್ಟ್ 2024ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 7,753 ಆಸ್ತಿ ನೋಂದಣಿಗಳಾಗಿದೆ. ಜುಲೈ 2024 ರಲ್ಲಿ 7,333 ಆಸ್ತಿಗಳು ನೋಂದಣಿಯಾಗಿವೆ.
ಆಸ್ತಿ ನೋಂದಣಿ ಕುಸಿಯಲು ಕಾರಣವೇನು?
ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಕಡಿಮೆಯಾಗಲು ಹಲವು ಕಾರ್ಯಾಚರಣೆಗಳು ಅಡ್ಡಿಯಾಗಿರುವುದು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. "ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಲಭವಾಗಿಸಲು ಈ ವ್ಯವಸ್ಥೆ ಜಾರಿ ಮಾಡಿದ್ದರೂ, ಸರ್ವರ್ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಿದ್ದು, ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಆಸ್ತಿ ನೋಂದಣಿಗೆ ಸಮಸ್ಯೆಯಾಗಿದೆ" ಎಂದು ಸ್ಕ್ವೇರ್ ಯಾರ್ಡ್ಸ್‌ನ ಸಂಶೋಧನಾ ಮುಖ್ಯಸ್ಥೆ ರೇಣುಕಾ ಕುಲಕರ್ಣಿ ತಿಳಿಸಿರುವುದಾಗಿ ಹೆಚ್‌ಟಿ ವರದಿ ಮಾಡಿದೆ.
ಆಸ್ತಿ ನೋಂದಣಿ ಕುಸಿದಿರುವುದು ಕೇವಲ ತಾತ್ಕಾಲಿಕವಾಗಿದೆ. ಇ-ಖಾತಾ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದರೆ, ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿದೆ ಎಂದು ರೇಣುಕಾ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications