Bengaluru Property: ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ತಪ್ಪದ ಹೊಸ ಸಂಕಷ್ಟಗಳು
ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ಭೋಗ್ಯಕ್ಕೆ (ಲೀಸ್)ಗಳ ವಿಚಾರವು ಇದೀಗ ಮತ್ತೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬಾಡಿಗೆ ಮನೆಗಳಿಗೆ ನೀಡುವ ಅಡ್ವಾನ್ಸ್ (ಮುಂಗಡ ಹಣ) ಮೊತ್ತವು ಹೆಚ್ಚಾಗುತ್ತಲ್ಲೇ ಇರುವುದರಿಂದ ಇದು ಬೆಂಗಳೂರಿನ ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆ ಮೊತ್ತ ಹಾಗೂ ಅಡ್ವಾನ್ಸ್ ಹೆಚ್ಚಳವಾಗುತ್ತಿರುವುದು ರಿಯಲ್ ಎಸ್ಟೇಟ್ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ಮನೆ ಮಾಲೀಕರು - ಬಾಡಿಗೆದಾರರ ನಡುವೆ ವಿವಾದಗಳು ಹೆಚ್ಚಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಬೆಂಗಳೂರಲ್ಲಿ ಬಾಡಿಗೆ ಮನೆ ಮಾಡುವುದಕ್ಕೆ ಜನ ಲಕ್ಷಾಂತರ ರೂಪಾಯಿ ಖರ್ಚು ಮಾಡುವಂತೆ ಆಗಿದೆ. ಬೆಂಗಳೂರಲ್ಲಿ 6ರಿಂದ 9ತಿಂಗಳ ಬಾಡಿಗೆ ಮೊತ್ತವನ್ನು ಭದ್ರತಾ ಠೇವಣಿಯಾಗಿ ನೀಡುವ ಬೇಡಿಕೆ ಹೆಚ್ಚಾಗುತ್ತಿದೆ. ಬಣ್ಣ ಬಳಿಯುವುದು, ಸ್ವಚ್ಛಗೊಳಿಸುವುದು ಮತ್ತು ಸಣ್ಣ ದುರಸ್ತಿಗಳಿಗೆ ಬಾಡಿಗೆಯಲ್ಲಿ ಕಡಿತ ಮಾಡಿಕೊಳ್ಳುತ್ತಿರುವುದು ಬಾಡಿಗೆದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ರಾಜ್ಯ ಸರ್ಕಾರವು ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಅಡ್ವಾನ್ಸ್ ಆಗಿ ತೆಗೆದುಕೊಳ್ಳಬೇಕು ಎನ್ನುವ ನಿಯಮ ರೂಪಿಸಿದ್ದರೂ ಇದಿನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಹೀಗಾಗಿ ಈಗಲೂ ಬಾಡಿಗೆದಾರರು ಹೆಚ್ಚು ಅಡ್ವಾನ್ಸ್ ಮೊತ್ತ ಪಾವತಿ ಮಾಡುವಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮನೆ ಮಾಲೀಕರು ತಮ್ಮ ಮನೆಗಳನ್ನು ಖಾಲಿ ಮಾಡುವಾಗ ಪೇಂಟಿಂಗ್ ಶುಲ್ಕವಾಗಿ ಭದ್ರತಾ ಠೇವಣಿಗಳಿಂದ ಒಂದು ತಿಂಗಳ ಬಾಡಿಗೆಗೆ ಸಮಾನವಾದ ಹಣವನ್ನು ಕಡಿತಗೊಳಿಸುತ್ತಿರುವುದು ಭಾರೀ ಅಸಮಾಧಾನ ಹಾಗೂ ಆಕ್ರೋಶಕ್ಕೂ ಕಾರಣವಾಗಿದೆ. ಬೆಂಗಳೂರಿನ ಬಹುತೇಕ ಆಸ್ತಿ ಮಾಲೀಕರು ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ.
ಮನೆ ಮಾಲೀಕರು ಈ ಕ್ರಮವನ್ನು ಸಮರ್ಥಿಸಿಕೊಂಡರು, ಹೆಚ್ಚುತ್ತಿರುವ ಕಾರ್ಮಿಕ ಮತ್ತು ಸಾಮಗ್ರಿ ವೆಚ್ಚಗಳು ಹಾಗೂ ಹೊಸ ಬಾಡಿಗೆದಾರರಿಗೆ ಮನೆಗಳನ್ನು ಸಿದ್ಧಪಡಿಸುವ ಅಗತ್ಯವನ್ನು ಉಲ್ಲೇಖಿಸಿದರು. ಆದಾಗ್ಯೂ, ಬಾಡಿಗೆದಾರರು ಅಂತಹ ಕಡಿತಗಳನ್ನು ಇನ್‌ವಾಯ್ಸ್‌ಗಳಿಂದ ವಿರಳವಾಗಿ ಬೆಂಬಲಿಸಲಾಗುತ್ತದೆ ಅಥವಾ ಫ್ಲಾಟ್‌ನ ನೈಜ ಸ್ಥಿತಿಗೆ ಲಿಂಕ್ ಮಾಡಲಾಗುತ್ತದೆ ಎಂದು ದೂರಿದ್ದಾರೆ, ಅವುಗಳನ್ನು ಅಗತ್ಯ ಆಧಾರಿತ ವೆಚ್ಚಕ್ಕಿಂತ ಸಾಮಾನ್ಯ ನಿಯಮ ಎಂದು ವಿವರಿಸುತ್ತಾರೆ.
1 ಲಕ್ಷಕ್ಕಿಂತ ಕಡಿಮೆ ಠೇವಣೆ ಇಲ್ಲ
ಬೆಂಗಳೂರಿನಲ್ಲಿ ಒಂದು ಬಿಎಚ್‌ಕೆ ಮನೆಗಳಿಗೆ ಬಾಡಿಗೆ ದರವು 8,000 ಸಾವಿರ ರೂಪಾಯಿಯಿಂದ 10,000 ಸಾವಿರ ರೂಪಾಯಿಯ ವರೆಗೂ ಇದೆ. ಆದರೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಅಡ್ವಾನ್ಸ್ ಮೊತ್ತವು 1 ಲಕ್ಷ ರೂಪಾಯಿ ಅಥವಾ 1 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ಇನ್ನು ಬೆಂಗಳೂರಿನಲ್ಲಿ ಬಾಡಿಗೆದಾರರು 1 ಲಕ್ಷ ಠೇವಣಿ ಇರಿಸಿದರೆ ಅವರು ಮನೆಯನ್ನು ಬಿಡುವ ಸಂದರ್ಭದಲ್ಲಿ ಶೇ.60 ಕ್ಕಿಂತ ಹೆಚ್ಚು ಮೊತ್ತವನ್ನು ಕಡಿತ ಮಾಡಿಕೊಂಡು ಉಳಿದ ಹಣವನ್ನು ಬಾಡಿಗೆದಾರರಿಗೆ ಕೊಡಲಾಗುತ್ತಿದೆ. ಇದು ಅತೀ ಮೋಸದ ಪದ್ಧತಿಯಾಗಿದೆ ಎಂದು ಬಾಡಿಗೆದಾರರು ದೂರಿದ್ದಾರೆ.
ಮನೆ ಬಿಡುವಾಗ ಸಮಸ್ಯೆ
ಇನ್ನು ಬೆಂಗಳೂರಿನಲ್ಲಿ ಬಾಡಿಗೆ ಮನೆದಾರರು ಮನೆ ಬಿಡುವ ಸಂದರ್ಭದಲ್ಲಿ ಮೂರು ತಿಂಗಳು ಮುಂಚಿತವಾಗಿ ಹೇಳಬೇಕು / ತಿಳಿಸಬೇಕು ಎನ್ನುವ ನಿಯಮವೂ ಸಹ ಬಾಡಿಗೆದಾರರಿಗೆ ಸಮಸ್ಯೆ ಆಗುತ್ತಿದೆ. ಹೊಸ ಮನೆಗಳ ಮಾಲೀಕರು ಹೆಚ್ಚು ಅವಧಿಗೆ ಮನೆಗಳನ್ನು ಖಾಲಿ ಬಿಡುವುದಿಲ್ಲ. ಈಗಾಗಲೇ ಬಾಡಿಗೆಗೆ ಇರುವ ಮನೆಯ ಮಾಲೀಕರು ಒಂದು ತಿಂಗಳು ಅಥವಾ ಎರಡು ತಿಂಗಳು ಟೈಮ್ ಕೊಡದೆ ಇರುವುದು ಸಹ ಸಮಸ್ಯೆಗೆ ಕಾರಣವಾಗಿದೆ.












Click it and Unblock the Notifications