Bengaluru Property Good News: ಆಸ್ತಿದಾರರಿಗೆ ಡಿ.ಕೆ ಶಿವಕುಮಾರ್ 4 ಮಹತ್ವದ ಸೌಲಭ್ಯ ಘೋಷಣೆ; ಅರ್ಜಿ ಸಲ್ಲಿಕೆಗೆ ಡೆಡ್‌ಲೈನ್
ಬೆಂಗಳೂರು: ಬೆಂಗಳೂರಿನ ಆಸ್ತಿದಾರರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಆಸ್ತಿದಾರರಿಗೆ ಬಿಡಿಎ ಹಾಗೂ ಕರ್ನಾಟಕ ಸರ್ಕಾರದಿಂದ ಗುಡ್‌ನ್ಯೂಸ್ ಕೊಡಲಾಗಿದೆ. ನಾಗರಿಕರ ಹಿತಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 4 ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಿಡಿಎ ವತಿಯಿಂದ ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. 10.07.2008ಕ್ಕೂ ಮೊದಲು ನಿರ್ಮಿಸಿರುವ ಅರ್ಹ ಮನೆಗಳ ಸಕ್ರಮಕ್ಕೆ ಅವಕಾಶ, ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಸ್ವಇಚ್ಛೆಯಿಂದ ಭೂಮಿ ನೀಡಿ ನಗದು ಪರಿಹಾರ ಪಡೆದ ಅರ್ಹ ಭೂಮಾಲೀಕರಿಗೆ ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ, ಬಿಡಿಎ ನಿವೇಶನಗಳ ಪಕ್ಕದ ಅಂಚಿನ ಜಾಗ ಹಂಚಿಕೆ ಹಾಗೂ ಗುತ್ತಿಗೆ ಅವಧಿ ಮುಗಿದಿರುವ ನಿವೇಶನಗಳಿಗೆ ಶುದ್ಧ ಕ್ರಯಪತ್ರ ನೋಂದಣಿಗಾಗಿ ವಿಶೇಷ ಮೇಳ ಆಯೋಜನೆ ಈ ಕ್ರಮಗಳಲ್ಲಿ ಸೇರಿವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ನಾಗರಿಕರ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ಕ್ರಮಗಳಿಗೆ ಸರ್ಕಾರ ಆದ್ಯತೆ ನೀಡಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಶುದ್ಧ ಕ್ರಯಪತ್ರ ಮೇಳ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನದ ಗುತ್ತಿಗೆ ಅವಧಿ ಮುಗಿದಿದೆಯೇ, ಇನ್ನೂ ಶುದ್ಧ ಕ್ರಯಪತ್ರ ಮಾಡಿಸಿಕೊಂಡಿಲ್ಲವೇ. ಸುಮಾರು 20 ಸಾವಿರ ಹಂಚಿಕೆದಾರರ ಅನುಕೂಲಕ್ಕಾಗಿ ಶುದ್ಧ ಕ್ರಯಪತ್ರ ಮೇಳ 17.12.2026ರ ಒಳಗೆ ಅರ್ಜಿ ಸಲ್ಲಿಸಿ. 60 ದಿನಗಳೊಳಗೆ ಶುದ್ಧ ಕ್ರಯಪತ್ರ ನೋಂದಣಿಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಲಾಗಿದೆ.
ಬಿಡಿಎ ವ್ಯಾಪ್ತಿಯ ಅನಧಿಕೃತ ಮನೆಗಳ ಸಕ್ರಮಕ್ಕೆ ಅವಕಾಶ
10.07.2008ಕ್ಕೂ ಮೊದಲು ನಿರ್ಮಿಸಿರುವ ಅರ್ಹ ವಾಸಯೋಗ್ಯ ಮನೆಗಳಿಗೆ ನಿಯಮ 38(ಡಿ) ಅಡಿ ಮರುಮಂಜೂರಾತಿ ಅವಕಾಶ
ಪಾವತಿ ದರದಲ್ಲೂ ಭಾರೀ ಇಳಿಕೆ
20x30 Jon: 10% → 5%
30x40 on: 25% → 12.5%
40x60 3on: 40% → 20%
50x80 Jon: 50% → 25%
ಅರ್ಜಿ ಸಲ್ಲಿಸಲು ಕೊನೆಯ ದಿನ: 15.12.2026 ಎಂದೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂಚಿನ ಜಾಗ ಹಂಚಿಕೆ
ನಿಮ್ಮ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನದ ಪಕ್ಕದ ಅಂಚಿನ ಜಾಗ ಪಡೆಯಲು ಅವಕಾಶ ನಿಮ್ಮ ನಿವೇಶನದ ಹಿಂಭಾಗ ಅಥವಾ ಅಕ್ಕ-ಪಕ್ಕದಲ್ಲಿ ಬಿಡಿಎಗೆ ಸೇರಿದ ಅಂಚಿನ ಜಾಗವಿದ್ದರೆ, ಚಾಲ್ತಿಯಲ್ಲಿರುವ ಮಾರ್ಗಸೂಚಿ ದರದಲ್ಲಿ ಹಂಚಿಕೆ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ: 17 ಡಿಸೆಂಬರ್ 2026. ಅರ್ಜಿ ಸ್ವೀಕರಿಸಿದ 60 ದಿನಗಳೊಳಗೆ ನಿಯಮಾನುಸಾರ ಹಂಚಿಕೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಲಾಗಿದೆ.
ಭೂಮಿ ನೀಡಿದ ಭೂಮಾಲೀಕರಿಗೆ ಪ್ರೋತ್ಸಾಹದಾಯಕ ನಿವೇಶನ
ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಸ್ವಇಚ್ಛೆಯಿಂದ ಭೂಮಿ ನೀಡಿ ನಗದು ಪರಿಹಾರ ಪಡೆದ ಅರ್ಹ ಭೂಮಾಲೀಕರಿಗೆ ವಿಶೇಷ ಪ್ರೋತ್ಸಾಹ ಯೋಜನೆಯಡಿ ನಿವೇಶನ ಹಂಚಿಕೆ. ಅರ್ಹತಾ ನಿಯಮಗಳನ್ನು ಪೂರೈಸಿದ ಭೂಮಾಲೀಕರಿಗೆ ಈ ಸೌಲಭ್ಯ ಲಭ್ಯ ಇರಲಿದೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.





Click it and Unblock the Notifications
