Get Updates
Get notified of breaking news, exclusive insights, and must-see stories!

Bengaluru Property: ಬೆಂಗಳೂರಲ್ಲಿ ಭೂಮಿ, ಪ್ರಾಪರ್ಟಿ ಮಾರಾಟ ಮಾಡಬೇಡಿ ತಜ್ಞರ ಟ್ವೀಟ್ ವೈರಲ್

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಭೂಮಿ ಹಾಗೂ ಪ್ರಾಪರ್ಟಿಗೆ ಬಂಗಾರದ ಬೆಲೆ ಇದೆ. ಈ ರೀತಿ ಇರುವಾಗಲೇ ಬೆಂಗಳೂರಿಗೆ ಸಾಗರೋಪಾದಿಯಲ್ಲಿ ವಲಸಿಗರು ಬರುವ ಸಾಧ್ಯತೆ ಎನ್ನುವ ವಿಚಾರವು ಹೆಚ್ಚು ಚರ್ಚೆ ಆಗುತ್ತಿದೆ. ತಜ್ಞರೊಬ್ಬರು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಪ್ರಾಪರ್ಟಿ ಮಾರಾಟ ಮಾಡಬೇಡಿ ಎಂದಿದ್ದಾರೆ. ಈ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು ನಗರದಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಬೆಲೆ ಇದೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಭೂಮಿಯ ಬೆಲೆಯು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ನಡುವೆ ತಜ್ಞರೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Bengaluru Property Alert Expert Says Don t Sell Land Tweet Goes Viral

ಬೆಂಗಳೂರಲ್ಲಿ ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಐಟಿ ಬೇಡಿಕೆ, ಮೂಲಸೌಕರ್ಯ ಬೆಳವಣಿಗೆ (ಮೆಟ್ರೋ, ವಿಮಾನ ನಿಲ್ದಾಣ ವಿಸ್ತರಣೆ) ಮತ್ತು ನಗರ ಮಿತಿಗಳ ವಿಸ್ತರಣೆ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ವಿಶೇಷವಾಗಿ ದೇವನಹಳ್ಳಿ, ಸರ್ಜಾಪುರ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ.

ಇದರೊಂದಿಗೆ ಬೆಂಗಳೂರು ಉತ್ತರ, ಪೂರ್ವ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾರ್ಷಿಕವಾಗಿ ಶೇ 5ರಿಂದ 12 ಏರಿಕೆ ಕಂಡಿದೆ. ಹೊಸ ಮೆಟ್ರೋ ಮಾರ್ಗಗಳು, ಸುಧಾರಿತ ರಸ್ತೆ ಅಭಿವೃದ್ಧಿ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ (ಟರ್ಮಿನಲ್ 3) ಸಂಪರ್ಕ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಭೂಮಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಭೂಮಿ ಮಾರಾಟ ಮಾಡಬೇಡಿ

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲ ಬಂದಿದೆ. ಆದರೆ ಈಗ ಯಾವುದೇ ಕಾರಣಕ್ಕೂ ಭೂಮಿ / ಪ್ರಾಪರ್ಟಿ ಮಾರಾಟ ಮಾಡದೆ ಇದನ್ನು ಉಳಿಸಿಕೊಂಡು ಮುಂದಿನ ದಿನಗಳಲ್ಲಿ ಮಾರಾಟ ಮಾಡುವಂತೆ ಅಥವಾ ಪ್ರಾಪರ್ಟಿ ವ್ಯಾಲ್ಯೂ ಉಳಿಸಿಕೊಳ್ಳುವಂತೆ ಐಟಿ ವಾಸ್ತುಶಿಲ್ಪಿ ಅಮರನಾಥ್ ಶಿವಶಂಕರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಕನ್ನಡಿಗರೇ - ಬೆಂಗಳೂರು ಮತ್ತು ಬೆಂಗಳೂರಿಗೆ ಹತ್ತಿರದಲ್ಲಿ, ಕರ್ನಾಟಕದ ಯಾವ ಮೂಲೆಯಲ್ಲಾದರೂ ಸರಿ ನಿಮ್ಮ ಭೂಮಿ ಇದ್ದರೆ ದಯವಿಟ್ಟು ಕಾಪಾಡಿಕೊಳ್ಳಿ. ಉಳಿಸಿಕೊಳ್ಳಿ, ಸದ್ಬಳಕೆ ಮಾಡಿಕೊಳ್ಳಿ. ಉತ್ತರ ಭಾರತದಲ್ಲಿನ ಗಾಳಿ, ನೀರು, ಉದ್ಯೋಗ ಹಾಗೂ ಕಾನೂನು ಸುವ್ಯವಸ್ಥೆ ಮುಂತಾದ ಮೂಲಭೂತ ಸಮಸ್ಯೆಯಿಂದ ಸಾಗರೋಪಾದಿಯಾಗಿ ವಲಸೆ ಬರುತ್ತಾರೆ.

ವಲಸೆ ತಡಿಯುವುದಕ್ಕೆ ಆಗದಿದ್ದರೂ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಒಳ್ಳೆ ದುಡ್ಡು ಆದರೂ ಮಾಡಬಹುದು. ಭಾವನಾತ್ಮಕವಾಗಿ ಕೊರಗಿ ಪ್ರಯೋಜನವಿಲ್ಲ. ಪರಿಸ್ಥಿತಿಯನ್ನು ಲಾಭವಾಗಿ ತಿರುಗಿಸಿಕೊಳ್ಳಬೇಕು ಅಷ್ಟೇ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿಗೆ ವಲಸೆ ಪ್ರಮಾಣ ಹೆಚ್ಚಳ ಸಾಧ್ಯತೆ

ಇನ್ನು ಬೆಂಗಳೂರಿಗೆ ದೆಹಲಿ ಸೇರಿದಂತೆ ವಿವಿಧ ನಗರಗಳಿಂದ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಶೇ 40ರಷ್ಟು ದೆಹಲಿ ನಿವಾಸಿಗಳು ದೆಹಲಿ ಬಿಡುವ ಮನಸ್ಸು ಮಾಡಿದ್ದಾರೆ. ಈ ರೀತಿ ನಗರ ಬಿಡುವವರ ಮೊದಲ ಆಯ್ಕೆ ಬೆಂಗಳೂರೇ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+