Bengaluru Power Cut: ಇಂದು ನಗರದ ಹಲವೆಡೆ ಸಂಜೆ 5ರವರೆಗೆ ವಿದ್ಯುತ್ ಕಡಿತ, ಎಲ್ಲೆಲ್ಲಿ?
ಬೆಂಗಳೂರು, ಆಗಸ್ಟ್ 25: ಬೆಂಗಳೂರು ಮಹಾನಗರದಲ್ಲಿ ನಿತ್ಯ ಒಂದಲ್ಲ ಒಂದಷ್ಟು ಪ್ರದೇಶಗಳಲ್ಲಿ ಇಡೀ ದಿನ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ಮಳೆಗಾದಲ್ಲಿಯೇ ಲೋಡ್ ಶೆಡ್ಡಿಂಗ್ ಗೆ ಮುಂದಾಯ್ತಾ? ಎಂದನಿಸುತ್ತದೆ. ಬೆಸ್ಕಾಂ ತಿಳಿಸಿರುವ ಮಾಹಿತಿ ಪ್ರಕಾರ, ಇಂದು ಆಗಸ್ಟ್ 25ರಂದು ಸೋಮವಾರ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಭಾನುವಾರವು ಪೂರೈಕೆಯಲ್ಲಿ ಅಚರಣೆ ಉಂಟಾಗಿತ್ತು. ಇದೀಗ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯ ರಾಜಾಜಿನಗರ ಎನ್ ಆರ್ ಎಸ್ ಹಾಗೂ ಕೆ.ವಿ. ಟೆಲಿಕಾಂ ಬಡಾವಣೆ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಜಾಜಿನಗರ, ವಿಜಯನಗರ ಸುತ್ತಮುತ್ತ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜಾಜಿನಗರದ 220/66/11 ಕೆ.ವಿ. ಸಾಮರ್ಥ್ಯ ಕೇಂದ್ರದ ನಿರ್ವಹಣೆ ಪ್ರಯುಕ್ತ ರಾಜಾಜಿನಗರ 1 ರಿಂದ 6ನೇ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಗುಬ್ಬಣ್ಣ ಕೈಗಾರಿಕಾ ಪ್ರದೇಶ, ದೇವಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆಯ 1 ರಿಂದ 5 ನೇ ಕ್ರಾಸ್, ಡಾ. ಮೋದಿ ಆಸ್ಪತ್ರೆ ರಸ್ತೆ, ರಾಜ್ ಕುಮಾರ್ ರಸ್ತೆ, ಸಾಯಿಮಂದಿರ, ಮಂಜುನಾಥನಗರ, ಮಹಾಗಣಪತಿನಗರ, ಕೆಎಚ್ ಬಿ ಕಾಲೋನಿ 2ನೇಹಂತ, ಪಲಾಡಿಯಂವಸತಿ ಸಮುಚ್ಚಯ, ಪ್ರಕಾಶನಗರ, ಲಸ್ಕ್ ರಸ್ತೆ, ಸುಬ್ರಮಣ್ಯನಗರ, ಎಲ್ ಎನ್ ಪುರ, ದಯಾನಂದನಗರ, ಹರಿಶ್ಚಂದ್ರ ಘಾಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ವಿದ್ಯುತ್ ಸರಬರಾಜಿನಲ್ಲಿ ಕಡಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
66/11 ಕೆ.ವಿ.ಟಿಲಿಕಾಂ ಲೇಔಟ್ ಕೇಂದ್ರದ ನಿರ್ವಹಣೆ ಮಾಡುವುದಿದೆ. ಅದರ ಕಾರ್ಯ ಸೋಮವಾರ ನಡೆಯುವ ಪ್ರಯುಕ್ತ ಇಲ್ಲಿನ ವೆಸ್ಟ್ ಆಫ್ ಕಾರ್ಡ್ ರಸ್ತೆ, ಹೊಸಹಳ್ಳಿ ಮುಖ್ಯರಸ್ತೆ, ಜಗಜೀವನರಾಂ ನಗರ, ಗೋಪಾಲಪುರ, ಹಂಪಿನಗರ, ಮಾಗಡಿ ಮುಖ್ಯರಸ್ತೆ, ಬಿನ್ನಿಪೇಟೆ, ಹೊಸಹಳ್ಳಿ, ಹಳೇಗುಡ್ಡದಹಳ್ಳಿ, ಎಂಸಿ ಬಡಾವಣೆ, ವಿಜಯನಗರ ವಾಟರ್‌ಟ್ಯಾಂಕ್, ಭುವನೇಶ್ವರಿನಗರ ಸುತ್ತಲಿನ ಪ್ರದೇಶಗಳಲ್ಲಿ ಸಂಜೆ 5ಗಂಟೆವರೆಗೆ ಕರೆಂಟ್ ಕಟ್ ಆಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಶಕ್ತಿ ಯೋಜನೆ ಜಾರಿ ಬಳಿಕ ಜನರಿಗೆ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಅದಕ್ಕು ಮೇಲೆ ಬಳಕೆ ಮಾಡುವವರಿಂದ ಶುಲ್ಕ ಸಂಗ್ರಹಿಸಲಾಗುತ್ತದೆ. ಬೇಸಿಗೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗಲೇ ಪದೇ ಪದೆ ವಿದ್ಯುತ್ ಕಡಿತಗೊಳ್ಳುತ್ತಿರುವುದಕ್ಕೆ ಜನರು ಅಸಮಾಧಾನ ಹೊರ ಹಾಕಿದ್ದಾರೆ.












Click it and Unblock the Notifications