ಮಕ್ಕಳೊಂದಿಗೆ ಬುಗುರಿ ಆಡಿದ ಪೊಲೀಸ್ ಕಮೀಷನರ್

ಬೆಂಗಳೂರು, ಆಗಸ್ಟ್ 31: ರೌಡಿಗಳ ಪಾಲಿನ ದುಃಸ್ವಪ್ನವಾಗಿರುವ ಬೆಂಗಳೂರು ಪೊಲೀಸ್ ಕಮೀಷನರ್ ಮಕ್ಕಳೊಂದಿಗೆ ಮಕ್ಕಳಾದ ಅಪರೂದ ಘಟನೆ ನಿನ್ನೆ ನಡೆದಿದೆ.

ನಿನ್ನೆ ಸಿಟಿ ರೌಂಡ್ಸ್‌ನಲ್ಲಿದ್ದ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಮಕ್ಕಳೊಂದಿಗೆ ಬುಗುರಿ ಆಟ ಆಡಿದ್ದು ಗಮನ ಸೆಳೆದಿದೆ.

ಮಕ್ಕಳು ಬುಗುರಿ ಆಡುತ್ತಿದ್ದುದ್ದನ್ನು ಗಮನಿಸಿದ ಭಾಸ್ಕರ್ ರಾವ್ ಅವರು ಅವರಿದ್ದಲ್ಲಿಗೆ ತೆರಳಿ ತಾವೂ ಅವರೊಂದಿಗೆ ಬುಗುರಿ ಆಡಿದ್ದಾರೆ. ಅವರೊಂದಿಗೆ ಇನ್ನೂ ಕೆಲವು ಐಪಿಎಸ್ ಅಧಿಕಾರಿಗಳು ಬುಗುರಿ ಆಡಿದ್ದಾರೆ.

Bengaluru police commissioner play games with children

ಯಡಿಯೂರಪ್ಪ ಸಿಎಂ ಆದ ನಂತರ ಭಾಸ್ಕರ್ ರಾವ್ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿದ್ದಾರೆ. ನೇಮಕವಾದ ಹಿಂದೆಯೇ ಕೆಲವು ವಿವಾದಗಳು ತಲೆ ಎತ್ತಿವೆ. ಭಾಸ್ಕರ್ ರಾವ್ ಹಾಗೂ ಮತ್ತೊಬ್ಬ ವ್ಯಕ್ತಿಯ ನಡುವೆ ನಡೆದಿದ್ದ ಫೋನ್ ಸಂಭಾಷಣೆ ವೈರಲ್ ಆಗಿತ್ತು. ಇದನ್ನು ಮಾಜಿ ಸಿಟಿ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ಅವರೇ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಕಮೀಷನರ್ ಅವರ ನಿವಾಸಕ್ಕೆ ಸಂಬಂಧಿಸಿದಂತೆಯೂ ವಿವಾದ ತಲೆ ಎತ್ತಿದ್ದು, ಮಾಜಿ ಕಮೀಷನರ್ ಅವರು ತಮ್ಮ ಅಧಿಕೃತ ನಿವಾಸ ತೆರವು ಮಾಡುತ್ತಿಲ್ಲ ಎಂಬುದು ಕೂಡ ಹೊಸ ವಿವಾದ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+