Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ 7 ಖತರ್ನಾಕ್ ಬೈಕ್ ಕಳ್ಳರು ಅಂಧರ್, ಈ ಕಾರಣಕ್ಕೆ ಬೈಕ್ ಕಳ್ಳತನ ಮಾಡ್ತಿದ್ರಂತೆ

Bike Theft In Bengaluru: ಬೆಂಗಳೂರಲ್ಲಿ ದುಬಾರಿ ಬೈಕ್ ಗಳನ್ನು ಕಳ್ಳತನ ಮಾಡುವುದಕ್ಕೆ ಕೆಲವು ತಂಡಗಳೇ ಇವೆ. ಬೈಕ್ ಕೊಳ್ಳುವುದು ಅದನ್ನು ಓಡಿಸುವುದು ಎಂದರೆ ಯುವಕರ ಕನಸು. ಆದರೆ, ಹೊಸ ಬೈಕ್‌ಗಳನ್ನೇ ಟಾರ್ಗೆಟ್‌ ಮಾಡಿ ಕಳುವು ಮಾಡುತ್ತಿದ್ದ ಬೈಕ್ ಕಳ್ಳರನ್ನು ಬೆಂಗಳೂರಿನ ಪೊಲೀಸರು ಅಂಧರ್ ಮಾಡಿದ್ದಾರೆ. ಇದರಲ್ಲಿ ಹೊಸ ಮತ್ತು ಹಳೆಯ ಬೈಕ್‌ಗಳನ್ನು ತಮ್ಮ ಮೋಜು - ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದವರು ಇದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಕಳ್ಳತನ ಮಾಡುವುದು ಹಾಗೂ ಬೈಕ್ ಕಳ್ಳತನ ಮಾಡುವುದು ಹೆಚ್ಚಾಗುತ್ತಲ್ಲೇ ಇದೆ. ಬೆಂಗಳೂರು ಪೊಲೀಸರು ಸಹ ಮಿಂಚಿನ ಕಾರ್ಯಾಚರಣೆಯನ್ನು ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಲ್ಲೇ ಇದ್ದಾರೆ. ಆದರೂ ಸಹ ಬೈಕ್‌ ಕಳ್ಳರ ಹಾವಳಿ ಕಡಿಮೆಯಾಗುತ್ತಿಲ್ಲ. ಇದೀಗ ಬೆಂಗಳೂರು ಪೊಲೀಸರು ಈ ರೀತಿ ಕಂಡ ಕಂಡವರ ಬೈಕ್‌ ಕದ್ದು ಮಜಾ ಮಡ್ತಿದ್ದ 7 ಜನರನ್ನು ಕಂಬಿ ಹಿಂದಕ್ಕೆ ಕಳುಹಿಸಿದ್ದಾರೆ.

Bengaluru Police arrested 7 bike thieves

ಬೆಂಗಳೂರಿನಲ್ಲಿ ಬೈಕ್‌ ಕಳವು ಮಾಡುತ್ತಿದ್ದ ಕಳ್ಳರನ್ನು ಹೇಗೆ ಬಂಧಿಸಲಾಯಿತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ವಿವರಿಸಿದ್ದಾರೆ. ಬೆಂಗಳೂರಲ್ಲಿ ಬೈಕ್‌ ಕಳ್ಳರಿಗೆ ಬಲೆ ಬೀಸುವ ನಿಟ್ಟಿನಲ್ಲಿ ನಗರದಲ್ಲಿ ಸರಣಿ ಕಾರ್ಯಾಚರಣೆ ನಡೆಸಲಾಗಿದೆ. ನಗರದ ಮೂರು ವಿವಿಧ ಪೊಲೀಸ್ ಠಾಣೆಯ ಅಧಿಕಾರಿಗಳು ನಗರದಲ್ಲಿನ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಎಲ್ಲೆಲ್ಲಿ ಬೈಕ್ ಕಳ್ಳರ ಬಂಧನ

ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಮೂವರು ಬೈಕ್ ಖದೀಮರನ್ನು ಬಂಧಿಸಿದ್ದು, ಅವರಿಂದ 17 ಲಕ್ಷ ರೂಪಾಯಿ ಮೌಲ್ಯದ 12 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಮೂಲಕ 6 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ಮಾದರಿಯಲ್ಲಿ ಬ್ಯಾಡರಹಳ್ಳಿ ಠಾಣೆಯ ಪೊಲೀಸರು 2 ಆರೋಪಿಗಳನ್ನು ವಶಕ್ಕೆ ಪಡೆದಿದ್ದು, 5 ಪ್ರಕರಣಗಳಿಗೆ ಸಂಬಂಧಿಸಿದ 7 ಲಕ್ಷ ರೂಪಾಯಿ ಮೌಲ್ಯದ 10 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಕೋಣನಕುಂಟೆ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 7 ಪ್ರಕರಣಗಳಿಗೆ ಸಂಬಂಧಿಸಿದ 5 ಲಕ್ಷ ರೂಪಾಯಿ ಮೌಲ್ಯದ 9 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದ್ದು ವಶಪಡಿಸಿಕೊಂಡ ವಾಹನಗಳ ಮಾಲೀಕರಿಗೆ ಕರೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೈಕ್ ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದು ಹೇಗೆ ?

ವಾಹನ ಸವಾರರು ರಸ್ತೆಯ ಮುಂದೆ ಹಾಗೂ ಮನೆಯ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನೇ ಈ ಕಳ್ಳರು ಟಾರ್ಗೆಟ್‌ ಮಾಡುತ್ತಿದ್ದರು. ಬೈಕ್ ಕಳ್ಳರು ಕಳ್ಳತನ ಮಾಡುತ್ತಿದ್ದ ಬೈಕ್‌ಗಳಲ್ಲೇವು ಬಹುತೇಕ ದುಬಾರಿಯಾಗಿವೆ. ಈ ರೀತಿ ಬೈಕ್‌ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪತ್ತೆ ಹಚ್ಚುವುದಕ್ಕೆ ಸಹಕಾರಿಯಾಗಿದ್ದು, ಸಿಸಿಟಿವಿ ಕ್ಯಾಮೆರಾ ಹಾಗೂ ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಈ ಕಳ್ಳರನ್ನು ಬಂಧಿಸಲು ಸಾಧ್ಯವಾಗಿದೆ. ಕಳ್ಳರು ಸಿಸಿಟಿವಿ ಕ್ಯಾಮೆರಾ ಇಲ್ಲದ ರಸ್ತೆಗಳಲ್ಲಿ ಕಳ್ಳತನ ಮಾಡಿದ್ದಾರೆ. ಆದರೆ, ಸುತ್ತಮುತ್ತಲಿನ ರಸ್ತೆಗಳಲ್ಲಿ ಕ್ಯಾಮೆರಾ ಇದ್ದು, ಅದರಲ್ಲಿ ಸಂಗ್ರಹವಾದ ದೃಶ್ಯಗಳ ಮೂಲಕ ಬೈಕ್‌ ಕಳ್ಳರಿಗೆ ಬಲೆ ಬೀಸಲಾಗಿದೆ. ಬಂಧಿತರು ತಾವು ಮೋಜು - ಮಸ್ತಿ ಮಾಡುವ ಉದ್ದೇಶದಿಂದ ಬೈಕ್‌ ಕಳುವು ಮಾಡುತ್ತಿದ್ದದಾಗಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+