Bengaluru PG Rent Hike: ಪಿಜಿ ನಿವಾಸಿಗಳಿಗೆ ಆಘಾತ! ರೆಂಟ್ ಹೆಚ್ಚಳ, ಎಷ್ಟು?

ಬೆಂಗಳೂರು: ಬೆಂಗಳೂರು ಎಂದರೆ ಸಾಕು ಇಲ್ಲಿ ಅನೇಕ ಕ್ಷೇತ್ರಗಳ ದುಡಿಯುವ ವರ್ಗ ಕಾಣಸಿಗುತ್ತದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳುತ್ತಾರೆ. ಅಂತವರು ಉಳಿದುಕೊಳ್ಳಲು ಹೆಚ್ಚಾಗಿ ಪಿಜಿ (ಪೇಯಿಂಗ್ ಗೆಸ್ಟ್) ಆಶ್ರಯಿಸುತ್ತಾರೆ. ಹೀಗಾಗಿಯೇ ನಗರದಲ್ಲಿ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಪಿಜಿಗಳು ಹೆಚ್ಚಾಗಿವೆ. ಇದೀಗ ಪಿಜಿ ಮಾಸಿಕ ಬಾಡಿಗೆ ದರ ಹೆಚ್ಚಾಗಲಿದ್ದು, ನಿವಾಸಿಗಳಿಗೆ ಶಾಕ್ ಸಿಕ್ಕಂತಾಗಿದೆ. ಈ ಕುರಿತು ಅಕ್ಟೋಬರ್ 7ರ ನಂತರ ಸಭೆ ನಡೆಯಲಿದ್ದು, ಬಳಿಕ ಅಧಿಕೃತ ಮಾಹಿತಿ ಸಿಗಲಿದೆ.

ಇತ್ತೀಚೆಗೆ ರಾಜ್ಯದಲ್ಲಿ ದಿನಸಿ ಪದಾರ್ಥಗಳು, ಹಾಲು, ತರಕಾರಿಗಳ ಏರಿಕೆ ಆಗಿದೆ. ವಿದ್ಯುತ್ ಬೆಲೆ ಮಾತ್ರವಲ್ಲದೇ ಇತ್ತೀಚೆಗೆ ಅಡುಗೆ ಅನಿಲದ ಬೆಲೆ ಹೆಚ್ಚಾಗುತ್ತಲೇ ಇದೆ. ಮಧ್ಯಪ್ರಾಚ್ಯ ಯುದ್ಧದ ವಳೆ 1800-2000 ರೂಪಾಯಿ ಇದ್ದ ವಾಣಿಜ್ಯ ಬಳಕೆಯ ಸಿಲೆಂಡರ್ ಬೆಲೆ 5000-6000 ರೂಪಾಯಿ ಆಗಿತ್ತು. ಇಂದಿಗೂ ಅದರ ಬೆಲೆ ಮೊದಲಿನಂತಿಲ್ಲ. ಸರಬರಾಜು ಸರಿಯಾಗಿ ಆಗುತ್ತಿಲ್ಲ. ಈ ಕಾರಣಕ್ಕೆ ಪಿಜಿಗಳ ಬಾಡಿಗೆ ದರವು ಏರಿಕೆಗೆ ಬೆಂಗಳೂರು ಪಿಜಿ ಅಸೋಸಿಯೇಷನ್ ನಿರ್ಧರಿಸಿದೆ.

Bengaluru PG Rent

ಒಬ್ಬರಿಗೆ ಕನಿಷ್ಠ 500-1000 ರೂ. ಹೆಚ್ಚಳ?

ಅಕ್ಟೋಬರ್ 7ರ ನಂತರ ಬೆಂಗಳೂರು ಪಿಜಿ ಅಸೋಸಿಯೇಷನ್ ಪದಾಧಿಕಾರಿಗಳು ಮಹತ್ವದ ಸಭೆ ನಡೆಸಲಿದ್ದಾರೆ. ಬಳಿಕವೇ ಎಷ್ಟು ಏರಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಿ, ನೀರ್ಣಯ ಪ್ರಕಟಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಪಿಜಿ ಮಾಸಿಕ ಬಾಡಿಗೆ ಬೆಲೆ ಒಬ್ಬರಿಗೆ ಕನಿಷ್ಠ 500 ರೂಪಾಯಿಯಿಂದ 1000 ರೂ.ವರೆಗೆ ಹೆಚ್ಚಳ ನಿರೀಕ್ಷಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಪಿಜಿಗಳಿಗೆ ಬ್ರೇಕ್

ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲವು ಪಿಜಿಗಳ ಮಿತಿ ಮೀರಿ ವರ್ತನೆ, ಅಹಿತಕರ ಘಟನೆ ಕಾರಣಕ್ಕೆ ಹಾಗೂ ಅನಧಿಕೃತ ಪಿಜಿಗಳ ಹಾವಳಿ ಹೆಚ್ಚಾಗಿರುವ ಕಾರಣಕ್ಕೆ ಇದರ ತಡೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಕಾಲ ಕಾಲಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಆರೋಗ್ಯ ಅಧಿಕಾರಿಗಳು ಆಹಾರ, ಸ್ವಚ್ಛತೆ, ನೈರ್ಮಲ್ಯ, ಕಸ ವಿಲೇವಾರಿ ಸೇರಿದಂತೆ ಎಲ್ಲವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.

ಪಿಜಿಗಳು ಯಾವೆಲ್ಲ ರೂಲ್ಸ್ ಫಾಲೋ ಮಾಡಬೇಕು?

* ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ದಿಂದ ಲೈಸೆನ್ಸ್ ಪಡೆದಿರಬೇಕು

* ಪಾಲಿಕೆಯಿಂದ ವಾಣಿಜ್ಯ ಪರಾವನಿಗೆ ಸಹಿತ ಪಿಜಿ ನಡೆಸುತ್ತಿರಬೇಕು.

* ತುರ್ತು ಸೇವೆ ಸಂಬಂಧ ಪಾಲಿಕೆ ಸಹಾಯವಾಣಿ ಸಂಖ್ಯೆ

* ಪಿಜಿಎಗಳಲ್ಲಿ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರ ಇರಬೇಕು

* ಪಿಜಿಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಜೊತೆಗೆ ವಿಡಿಯೋ ಬ್ಯಾಕ್ ಅಪ್ 90 ದಿನವರೆಗೆ ಇರಬೇಕು.

* ಒಬ್ಬರು ವಾಸಿಸಲು 70 ಚದರ ಅಡಿ ಜಾಗ ಇರಬೇಕು

* ಪಿಜಿ ನಿವಾಸಿಗಳಿಗೆ ನೈರ್ಮಲ್ಯಯುತ ಶೌಚಾಲಯ ವ್ಯವಸ್ಥೆ

Namma Metro: 15 ವರ್ಷದ ಬಳಿಕ ಮೆಟ್ರೋಗಳಿಗೆ ಮೊದಲ ಬಿಗ್ ಸರ್ವಿಸಿಂಗ್; ಹಸಿರು-ನೇರಳೆ 57ರೈಲುಗಳ ನವೀಕರಣ
* ಕುಡಿಯುವ ನೀರಿನ ಸೌಲಭ್ಯ ಇರಬೇಕು

* ಬೆಂಕಿ ನಿರೋಧಕ (ಫೈಯರ್ ಸೇಫ್ಟಿ) ಕಡ್ಡಾಯವಾಗಿ ಅಳವಡಿಸಿರಬೇಕು.

* ಕೋಲಿವಿಂಗ್ ಪಿಜಿ ನಡೆಸಲು ಅನುಮತಿ ಪಡೆದಿರಬೇಕು

* ಹಸಿ ಮತ್ತು ಒಣ ಕಸ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ನೀಡಬೇಕು.

* ಪೊಲೀಸ್ ಇಲಾಖೆ ಸಹಾಯವಾಣಿ ಸಂಖ್ಯೆ ಪ್ರದರ್ಶಿಸಬೇಕು

* ಪಿಜಿಗಳಲ್ಲಿ ಫಸ್ಟ್ ಎಡ್ ಕಿಟ್ಸ್ ಅಳವಡಿಕೆ

ಇವೆಲ್ಲ ನಿಯಮಗಳನ್ನು ಬೆಂಗಳೂರು ಪಿಜಿಗಳು ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸುವ, ಒಂದು ವೇಳೆ ಇದ್ಯಾವುದು ಇಲ್ಲದೇ ನೀವು ಪಿಜಿ ನಿರ್ವಹಿಸುತ್ತಿದ್ದರೆ ಅಂತಹ ಪಿಜಿಗಳಿಗೆ ಮುಲ್ಲಾಜಿಲ್ಲದೇ ನೋಟಿಸ್ ನೀಡಿ ಕ್ಲೋಸ್ ಮಾಡಲಾಗುವುದು ಎಂದು ಇತ್ತೀಚೆಗೆ ಜಿಬಿಎ ಅಧಿಕಾರಿಗಳು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+