Bengaluru PG: ಬೆಂಗಳೂರಿನ ಪಿ.ಜಿಗಳಿಗೆ ಬೀಗ ಹಾಕುತ್ತಿರುವ ಜಿಬಿಎ: ಕಾರಣವೇನು, ಇಲ್ಲಿದೆ ಮಾಹಿತಿ
ಬೆಂಗಳೂರು: ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿರುವ ಪಿ.ಜಿಗಳಿಗೆ ಬೀಗ ಹಾಕುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದುವರಿಸಿದೆ. ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4 ಪಿ.ಜಿ. ಗಳಿಗೆ ಬೀಗ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಸೂಚನೆಯಂತೆ ನಗರ ಪಾಲಿಕೆಯ ಹಲವು ವಾರ್ಡ್‌ಗಳಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಿ.ಜಿ.ಗಳನ್ನು ಪರಿಶೀಲಿಸಿ, ಮಾರ್ಗಸೂಚಿಗಳನ್ನು ಪಾಲಿಸದವುಗಳನ್ನು ಗುರುತಿಸಿ, ಬೀಗಮುದ್ರೆ ಪ್ರಕ್ರಿಯೆ ಮುಂದುವರಿಸಲಾಗಿದೆ. ಈ ಸಂಬಂಧ ವಲಯ 2ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 12, ಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿನ 2 ಪುರುಷರ ಪಿ.ಜಿ.ಗಳಾದ ಸನ್‌ರೈಸ್ ಬಾಯ್ಸ್ ಪಿಜಿ ಮತ್ತು ಬಾಲಾಜಿ ಎನ್.ಎಸ್ ಲಕ್ಸುರಿ ಪಿ.ಜಿ ಗಳ ನಿವಾಸಿಗಳನ್ನು ಮಾರ್ಗಸೂಚಿಗಳನ್ನು ಅನುಸರಿಸದೇ ಇರುವ ಕಾರಣಕ್ಕೆ ತೆರವುಗೊಳಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬೀಗಮುದ್ರೆ ಹಾಕಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಶೀಲನೆಯ ಮುಂದುವರಿದ ಭಾಗವಾಗಿ ಇದೇ ಭಾಗದ ಶಾರದಾ ಲೇಡಿಸ್ ಪಿ.ಜಿಯ ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದೇ ಇರುವ ಕಾರಣಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಅದಕ್ಕೂ ಬೀಗ ಹಾಕಲಾಗಿದೆ. ಮುಂದುವರಿದು ವಲಯ 1ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 3, ಅಟ್ಟೂರು, ಯಲಹಂಕ 4 ನೇ ಹಂತದಲ್ಲಿರುವ ಅಂಜನಿ ಲೇಡಿಸ್ ಪಿಜಿ ಯಲ್ಲಿ ಕೂಡ ಅಡುಗೆ ಮನೆಯ ಶುಚಿತ್ವ ಕಾಪಾಡಿಕೊಳ್ಳದ ಕಾರಣಕ್ಕೆ ಅದಕ್ಕೂ ಸಹ ಬೀಗ ಹಾಕಲಾಗಿದೆ. ಒಟ್ಟಾರೆಯಾಗಿ ನಗರ ಪಾಲಿಕೆಯ ವಲಯ 2 ವ್ಯಾಪ್ತಿಯಲ್ಲಿ 3 ಪಿ.ಜಿ. ಗಳಿಗೆ ಹಾಗೂ ವಲಯ 1ರ ವ್ಯಾಪ್ತಿಯಲ್ಲಿ 1 ಪಿಜಿಗೆ ಸೇರಿದಂತೆ ಒಟ್ಟಾರೆಯಾಗಿ 4 ಪಿ.ಜಿ. ಗಳಿಗೆ ಬೀಗಮುದ್ರೆ ಹಾಕಲಾಗಿದೆ. ಇನ್ಮುಂದೆ ಮಾರ್ಗಸೂಚನೆಗಳನ್ನು ಅನುಸರಿಸದೇ ಇರುವ ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಪಿ.ಜಿ.ಗಳ ಮೇಲೆ ಇನ್ನಷ್ಟು ತೀವ್ರ ಕ್ರಮವಹಿಸಲಾಗುವುದು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಒಣಗಿರುವ ಮರಗಳು, ರೆಂಬೆ ಕೊಂಬೆಗಳ ಮಾಹಿತಿ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿಯನ್ನು ನೀಡುವ ಬಗ್ಗೆ ಪಾಲಿಕೆಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ರಸ್ತೆಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ, ಆಪಾಯ ಸ್ಥಿತಿಯಲ್ಲಿರುವ ಮರಗಳು ಹಾಗೂ ರೆಂಬೆ ಕೊಂಬೆಗಳನ್ನು ಅರಣ್ಯ ವಿಭಾಗದ ವತಿಯಿಂದ ಈಗಾಗಲೇ ತೆರವುಗೊಳಿಸಲಾಗುತ್ತಿದೆ. ಸಾರ್ವಜನಿಕರು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಣಗಿರುವ /ಆಪಾಯ ಸ್ಥಿತಿಯಲ್ಲಿರುವ ಮರಗಳು ಹಾಗೂ ರೆಂಬೆಗಳು ಕಂಡುಬಂದಲ್ಲಿ 1533 ಅಥವಾ 7760933913 /9164597895 ಸಹಾಯವಾಣಿಗೆ ಅಥವಾ ಈ ಅಧಿಕಾರಿಗಳಿಗೆ ದೂರವಾಣಿ ಮೂಲಕ (ವಾಟ್ಸ್‌ಆ್ಯಪ್ ಮುಖಾಂತರ ಜಿಪಿಎಸ್ ಫೋಟೋ ಲಗತ್ತಿಸಿ ಕಳುಹಿಸಬಹುದು) ವಿಳಾಸದೊಂದಿಗೆ ಮಾಹಿತಿ ನೀಡಬಹುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮಾಹಿತಿ
ವಲಯ - 1
ಶಾಂತಿನಗರ / ಸಿ.ವಿ ರಾಮನ್ ನಗರ
ವಿನಯ್
ಉಪ ವಲಯ ಅರಣ್ಯಾಧಿಕಾರಿ
7760933913
ವಲಯ - 2
ಶಿವಾಜಿನಗರ / ಚಾಮರಾಜಪೇಟೆ / ಚಿಕ್ಕಪೇಟೆ
ಶಿವಣ್ಣ ಉಪ ವಲಯ ಅರಣ್ಯಾಧಿಕಾರಿ 9164597895
ವಲಯ - 2
ಗಾಂಧಿನಗರ
ನರೇಂದ್ರ ಬಾಬು
ವಲಯ ಅರಣ್ಯಾಧಿಕಾರಿ
9480685399
-
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ










Click it and Unblock the Notifications