Namma Metro: 6 ನಿಲ್ದಾಣಗಳ ಮಧ್ಯೆ ಗುಲಾಬಿ ಮಾರ್ಗ ಕಾರ್ಯಾಚರಣೆಗೆ ಮುಹೂರ್ತ ಫಿಕ್ಸ್

ಬೆಂಗಳೂರು, ಅಕ್ಟೋಬರ್ 07: ರಾಜಧಾನಿಯಲ್ಲಿ ಮುಂದಿನ ದಿನಗಳಲ್ಲಿ ಬಹುತೇಕ ಭಾಗಗಳನ್ನು ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲಿದೆ. ಈ ನಿಟ್ಟಿನಲ್ಲಿ ವಿವಿಧ ಹೊಸ ಮಾರ್ಗಗಳು ನಿರ್ಮಾಣವಾಗುತ್ತಿವೆ. 2026ರ ಡಿಸೆಂಬರ್ ಹೊತ್ತಿಗೆ ಕಾಳೇನ ಅಗ್ರಹಾರದಿಂದ ನಾಗವಾರ ವರೆಗಿನ ಗುಲಾಬಿ ಮಾರ್ಗವು (Pink Line) ಎರಡು ಹಂತಗಳಲ್ಲಿ ತೆರೆಯಲಿದೆ.

ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತರಣಾ ಯೋಜನೆ ವೇಗದಿಂದ ಸಾಗುತ್ತಿದೆ. ಗುಲಾಬಿ ಮಾರ್ಗದ ಈ ಹೊಸ ಕಾರಿಡಾರ್ ಗಳು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಒಟ್ಟು 13.8 ಕಿಲೋ ಮೀಟರ್ ಈ ಮಾರ್ಗವು ಮೊದಲ ಹಂತವು ಆರು ನಿಲ್ದಾಣಗಳ ವ್ಯಾಪ್ತಿಯಲ್ಲಿ ಅಂದರೆ 7.5 ಉದ್ದದ ಲೈನ್ ಇದೇ ಡಿಸೆಂಬರ್ 2026ಕ್ಕೆ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು 2026 ಮಾರ್ಚ್ ಗೆ ಮುಂದೂಡಲಾಗಿದೆ.

Bengaluru Namma Metro Pink Line to Open in Two Phases by 2026 December

06 ನಿಲ್ದಾಣಗಳ ಮಧ್ಯ ಪಿಂಕ್ ಲೈನ್ ಸೇವೆ

ಈ ಪಿಂಕ್ ಮಾರ್ಗ ಸಹ ಇತರ ಮಾರ್ಗಗಳನ್ನು ಸಂಧಿಸುತ್ತದೆ. ಸಾವಿರಾರು ಪ್ರಯಾಣಿಕರಿಗೆ ನಿತ್ಯ ಉತ್ತಮ ಸಾರಿಗೆ ಸೇವೆ ಒದಗಿಸಲಿದೆ. ಈ ಮಾರ್ಗವು ಎತ್ತರದ ಮಾರ್ಗ ಹಾಗೂ ಸುರಂಗ ಮಾರ್ಗವನ್ನು ಹೊಂದಿದೆ. ಮುಂದಿನ ವರ್ಷ ಜೂನ್ ಹೊತ್ತಿಗೆ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ ಬೆಂಗಳೂರು, ಜೆಪಿ ನಗರ 4 ನೇ ಹಂತ, ಜಯದೇವ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರಸ್ತೆ) ಸೇರಿ ಒಟ್ಟು ಆರು ನಿಲ್ದಾಣಗಳ ಮಧ್ಯೆ ಕಾರ್ಯಾಚರಣೆ ನಡೆಸಲು ಬೆಂಗಳೂರು ಮೆಟ್ರೋ ರೈಲು ಮಾರ್ಗ (BMRCL) ತಿರ್ಮಾನಿಸಿದೆ. ಉಳಿದಂತೆ ಡೈರಿ ಸರ್ಕಲ್‌ನಿಂದ ನಾಗವಾರವರೆಗಿನ ಪಿಂಕ್ ಲೈನ್‌ನ 13 ಕಿಮೀ ಭೂಗತ ವಿಭಾಗವು ಅದೇ ವರ್ಷದ ಡಿಸೆಂಬರ್‌ನಲ್ಲಿ ತೆರೆಯುವ ನಿರೀಕ್ಷೆ ಇದೆ.

ಪಿಂಕ್‌ಲೈನ್‌ಗೆ ಜಯದೇವ ಇಂಟರ್‌ಚೇಂಜ್ ನಿಲ್ದಾಣ

ಪಿಂಕ್ ಲೈನ್ ವಿಳಂಬ ಏಕೆ ಎಂದು ನೋಡುವುದಾದರೆ, ಲಾಜಿಸ್ಟಿಕ್ ಸಮಸ್ಯೆಗಳು ಪ್ರಮುಖ ಕಾರಣವಾಗಿದೆ. ಸುರಂಗ ಕೆಲಸ ಪೂರ್ಣಗೊಂಡು ಸಿವಿಲ್ ಕಾಮಗಾರಿಗಳು, ಹಳಿ ಜೋಡಣೆ, ನಿಲ್ದಾಣ ನಿರ್ಮಾಣ ಕೆಲಸ ಬರದಿಂದ ನಡೆಯುತ್ತಿದೆ. ಹಳದಿ ಮಾರ್ಗದ ಜಯದೇವ ನಿಲ್ದಾಣವು ಪಿಂಕ್ ಲೈನ್ ಗೆ ಇಂಟರ್ಚೇಂಜ್ ನಿಲ್ದಾಣವಾಗಿ ಕಾರ್ಯಚರಣೆ ಮಾಡಲಾಗುವುದು ಎಂದು BMRCL ಮೂಲಗಳು ತಿಳಿಸಿವೆ.

ಕಳೆದ ಆಗಸ್ಟ್ ತಿಂಗಳಲ್ಲಿ ಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ತೆರೆಯಲಾಗಿದೆ. ಇದರ ನಂತರ ಪಿಂಕ್ ಲೈನ್ ಬಳಿಕ ಸಿಲ್ಕ್ ಬೋರ್ಡ್ ಅನ್ನು ಕೆ.ಆರ್. ಪುರಂಗೆ ಸಂಪರ್ಕಿಸುವ ನೀಲಿ ಮೆಟ್ರೋ ಮಾರ್ಗ ತೆರೆಯಲು ಪ್ಲಾನ್ ಮಾಡಲಾಗಿದೆ. ಸದ್ಯ ಹಳದಿ ಮಾರ್ಗಕ್ಕೆ ಐದನೇ ರೈಲು ಬೆಂಗಳೂರಿಗೆ ಆಗಮಿಸಿದೆ. ಅದರ ಪರೀಕ್ಷೆಗಳು ನಡೆಯಬೇಕಿದೆ. ಅದಾದ ಬಳಿಕವೇ ಐದು ರೈಲುಗಳು ಹಳದಿ ಮಾರ್ಗದಲ್ಲಿ ಸಂಚಾರ ಮಾಡಲಿವೆ. ಇದರಿಂದ ಮೆಟ್ರೋ ಆವರ್ತ ಸಮಯ 15 ನಿಮಿಷಕ್ಕೆ ಇಳಿಯುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+