ಬೆಂಗಳೂರು-ಮೈಸೂರಿಗೆ ಬರೀ 70 ನಿಮಿಷದಲ್ಲಿ ಪ್ರಯಾಣ.! ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳ ಆಸ್ತಿದಾರರಿಗೆ ಭರ್ಜರಿ ಆಫರ್
Bengaluru-Mysuru Rapid Rail: ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡಬೇಕೆಂದರೆ ಏನಿಲ್ಲ ಅಂದ್ರೂ ಮೂರು ಗಂಟೆ ಬೇಕಾಗುತ್ತಿತ್ತು. ಆದ್ರೆ ಇನ್ಮುಂದೆ ಹಾಗಲ್ಲ, ಪ್ರಯಾಣದ ಅವಧಿ 70 ಗಂಟೆಗೆ ಇಳಿಕೆ ಆಗಲಿದೆ. ಇದು ಹೇಗೆ ಸಾಧ್ಯ ಹಾಗೂ ಜಾರಿಗೆ ಬರಲಿದೆ ಎಂಬ ಪ್ರಶ್ನೆ ಬಹುತೇಕರ ತಲೆಯಲ್ಲಿ ಮೂಡಿರುತ್ತದೆ. ಇದಕ್ಕೆಲ್ಲ ಉತ್ತರ ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು-ಮೈಸೂರು ಮಾರ್ಗಗಳಲ್ಲಿ ರೈಲಿನಲ್ಲಿ ಪ್ರಯಾಣ ಮಾಡಬೇಕಂದ್ರೆ ಪ್ರಯಾಣ ಅವಧಿ 2:20ರಿಂದ 3 ಗಂಟೆ ಬೇಕಾಗುತ್ತಿತ್ತು. ಇದೀಗ ಇದನ್ನು ಕೇವಲ 70 ಗಂಟೆಗೆ ಇಳಿಕೆ ಮಾಡಲು ಮಹತ್ವದ ಯೋಜನೆಗೆ ಕೈಹಾಕಲಾಗಿದೆ. ಈ ಯೋಜನೆ ಜಾರಿಯಾದ್ರೆ, ಬರೀ ಪ್ರಯಾಣ ಅವಧಿ ಕಡಿತ ಮಾತ್ರಬವಲ್ಲದೆ, ಹಲವು ಜಿಲ್ಲೆಗಳಲ್ಲಿ ಆಸ್ತಿ ಬೆಲೆಗಳು ಗಗನಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರು-ಮೈಸೂರು ನಗರಗಳ ನಡುವೆ ರ‍್ಯಾಪಿಡ್ ರೈಲು ರೈಲು ಟ್ರಾನ್ಸಿಟ್ ಸಿಸ್ಟಮ್ ಜಾರಿಗೊಳಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ರ‍್ಯಾಪಿಡ್ ರೈಲು ಟ್ರಾನ್ಸಿಟ್ ಸಿಸ್ಟಮ್ ಜಾರಿಗೆ ಬಂದರೆ, ಬೆಂಗಳೂರು-ಮೈಸೂರು ನಗರಗಳ ನಡುವಿನ ಪ್ರಯಾಣದ ಅವಧಿ 3 ಗಂಟೆಗಳಿಂದ 70 ನಿಮಿಷಕ್ಕೆ ಇಳಿಕೆಯಾಗಲಿದ್ದು, ಇದರಿಂದ ಸಮಯ ಉಳಿತಾಯ ಆದಂತಾಗಲಿದೆ.
ಮುಂಬರಲಿರುವ ನಮೋ ಭಾರತ ಆರ್‌ಆರ್‌ಟಿಎಸ್ ಅನ್ನು ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಜಾರಿ ಮಾಡುವ ರೀತಿಯಲ್ಲೇ ಬೆಂಗಳೂರು-ಮೈಸೂರು ರ‍್ಯಾಪಿಡ್ ರೈಲು ಟ್ರಾನ್ಸಿಟ್ ಸಿಸ್ಟಮ್ ಅನ್ನು ಬೆಂಗಳೂರು ಕಮ್ಯೂಟರ್ ರೈಲು ಟ್ರಾನ್ಸಿಟ್ ಕಾರ್ಪೋರೇಷನ್ ಜಾರಿ ಮಾಡಲಿದೆ ಎಂದು ತಿಳಿದುಬಂದಿದೆ.
ವಿಶೇಷತೆ ಹಾಗೂ ಪ್ರಯೋಜನೆಗಳು: ಆರ್‌ಆರ್‌ಟಿಎಸ್ ರೈಲುಗಳು ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡಲಿದ್ದು, ಬೆಂಗಳೂರಿನಿಂದ ಮೈಸೂರಿಗೆ ಕೇವಲ 70 ನಿಮಿಷದಲ್ಲಿ ಹೀಗಬಹುದು. ಸದ್ಯ ದೇಶದಲ್ಲಿ ಅಹಮದಾಬಾದ್-ಮುಂಬೈ ನಡುವೆ ನಿರ್ಮಾಣ ಆಗುತ್ತಿರುವ ಬುಲೆಟ್ ಟ್ರೈನ್ ಗಂಟೆಗೆ 350 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದೆ. ಆರ್‌ಆರ್‌ಟಿಎಸ್ 2 ನಗರಗಳ ನಡುವಿನ ಪ್ರಯಾಣಿಕರ ಸಂಚಾರಕ್ಕೆ ತುಂಬಾ ಸಹಕಾರಿ ಆಗಲಿದೆ.
ವೆಚ್ಚ ಎಷ್ಟು?: ಬೆಂಗಳೂರು- ಮೈಸೂರು ನಡುವಿನ ಆರ್‌ಆರ್‌ಟಿಎಸ್ ಆರಂಭ ಮಾಡುವ ಕುರಿತು ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ವರದಿ ಈಗಾಗಲೇ ಪೂರ್ಣಗೊಂಡಿದೆ. ಇನ್ನು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಈ ನಗರಗಳ ನಡುವೆ ಆರ್‌ಆರ್‌ಟಿಎಸ್ ನಿರ್ಮಾಣಕ್ಕೆ ಭೂ ಸ್ವಾಧೀನ, ರೈಲು ಹಳಿ ಜೋಡಣೆ ಸೇರಿದಂತೆ ಯೋಜನೆಗೆ 25,000-30,000 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಇದೀಗ ಇರುವ ರೈಲ್ವೇ ಹಳಿಯನ್ನು ಮೇಲ್ದರ್ಜೆಗೇರಿಸುವ ಮತ್ತು ಮೇಲ್ಸೇತುವೆ ರೈಲ್ವೇ ಹಳಿಯನ್ನು ನಿರ್ಮಾಣ ಮಾಡಬೇಕಾಗಿದೆ.
ಅದರಲ್ಲೂ ಈ ಯೋಜನೆ ಜಾರಿ ಆಯಿತೆಂದರೆ ತುಂಬಾ ಅನುಕೂಲಗಳಾಗಲಿವೆ. ಪ್ರಯಾಣದ ಅವಧಿ ಕಡಿತವಾಗಲಿದ್ದು, ಇದರಿಂದ ಪ್ರಯಾಣಿಕರು ಎರಡು ನಗರಗಳ ನಡುವೆ ಕಡಿಮೆ ಸಮಯದಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಪ್ರಯಾಣ ಮಾಡಬಹುದು. ಅಲ್ಲದೆ, ಆರ್ಥಿಕತೆ ಹಾಗೂ ಪ್ರವಾಸೋದ್ಯಮದಲ್ಲಿ ಬೆಳೆಯುತ್ತಿರುವ ಈ ಎರಡು ನಗರಗಳ ನಡುವಿನ ಮಾರ್ಗ ಆರ್‌ಆರ್‌ಟಿಎಸ್ ಯೋಜನೆಗೆ ಸೂಕ್ತ ಮಾರ್ಗ ಎಂದು ರೈಲ್ವೇ ಇಲಾಖೆ ನಿರ್ಧರಿಸಿದೆ.
ಈ ಭಾಗಗಳ ಆಸ್ತಿಗಳಿಗೆ ಭಾರೀ ಡಿಮ್ಯಾಂಡ್?: ಈ ಯೋಜನೆ ಜಾರಿಯಿಂದ ಮಂಡ್ಯ, ರಾಮನಗರ ಜಿಲ್ಲೆಗಳ ಭಾಗದಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ, ಬ್ಯುಸಿನೆಸ್ ಬೆಳವಣಿಗೆಗೂ ಅನುಕೂಲ ಆಗುತ್ತದೆ. ಹೆದ್ದಾರಿಯ ವಾಹನ ದಟ್ಟಣೆ ಕಡಿಮೆಯಾಗಲಿದೆ. ಜೊತೆಗೆ ಪ್ರಯಾಣಿಕರ ದಟ್ಟಣೆ ಕೂಡ ಕಡಿಮೆ ಆದಂತಾಗಲಿದೆ.
ಆರ್‌ಆರ್‌ಟಿಎಸ್ ಮಾರ್ಗ ನಿರ್ಮಾಣಕ್ಕಾಗಿ ಭೂ ಸ್ವಾಧೀನವೇ ಬಹುದೊಡ್ಡ ಸವಾಲಾಗಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯಿಂದ ಭೂ ಸ್ವಾಧೀನಕ್ಕಾಗಿ ಕೆಲಸ ಮಾಡಬೇಕಾಗಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಆರ್‌ಆರ್‌ಟಿಎಸ್ ರೈಲುಗಳಲ್ಲಿ ಸಂಚಾರ ಮಾಡುವಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.












Click it and Unblock the Notifications