Bengaluru-Mysuru Expressway: ಬೂದನೂರು ಬಳಿ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ್‌ ಸಿಂಹ- ಫೋಟೊಗಳಿವೆ ನೋಡಿ

ಮಾರ್ಚ್‌ 12 ರಂದು ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸೋಮವಾರ ಬೂದನೂರು ಬಳಿ ಕಾಮಗಾರಿಯನ್ನು ಪರೀಕ್ಷಿಸಿರುವ ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಬೆಂಗಳೂರು, ಮಾರ್ಚ್‌ 06: ಮಾರ್ಚ್‌ 12 ರಂದು ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸೋಮವಾರ ಬೂದನೂರು ಬಳಿ ಕಾಮಗಾರಿಯನ್ನು ಪರೀಕ್ಷಿಸಿರುವ ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇನ್ನು ನಾಲ್ಕು ದಿನಗಳ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸಂಸದ ಪ್ರತಾಪ್‌ ಸಿಂಹ್‌ ಅಧಿಕಾರಿಗಳಿಗೆ ಸೂಚಿಸದ್ದಾರೆ.

ಈ ವಿಚಾರವಾಗಿ ಪ್ರತಾಪ್‌ ಸಿಂಹ ಟ್ವಿಟರ್‌ ಖಾತೆಯಿಂದ ಸರಣಿ ಟ್ವೀಟ್‌ ಮಾಡಲಾಗಿದೆ. 'ಮೈಸೂರು - ಬೆಂಗಳೂರು ದಶಪಥ ಹೆದ್ದಾರಿ ಬೂದನೂರು ಬಳಿ 2 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇನ್ನ ನಾಲ್ಕೈದು ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಡಿಬಿಎಲ್ ಮತ್ತು NHAI ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ತಿಳಿಸಲಾಗಿದೆ.

Bengaluru-Mysuru Expressway: MP Pratap Simha inspects work near Budanur - see photos

'ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ರವರು ಮಾರ್ಚ್ 12 ರಂದು ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳದ ವೀಕ್ಷಣೆ ಮತ್ತು ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಭೆ ನಡೆಸಲಾಯಿತು. PWD ಮುಖ್ಯ ಎಂಜಿನಿಯರ್ ಗೋವಿಂದ ರಾಜು, ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಧರ್, ತಿಬ್ಬಾದೇವಿ ಟೆಂಟ್ ನ ಕೃಷ್ಣ ಮತ್ತು ಮಂಡ್ಯ ಬಿಜೆಪಿ ಅಧ್ಯಕ್ಷರಾದ ಉಮೇಶ್ ರವರು ಉಪಸ್ಥಿತರಿದ್ದರು' ಎಂದೂ ಟ್ವೀಟ್‌ ಮಾಡಲಾಗಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಅನ್ನು 9000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಳಿಂದ 90 ನಿಮಿಷಗಳಿಗಿಂತಲೂ ಕಡಿಮೆ ಮಾಡುವ ನಿರೀಕ್ಷೆಯಿದೆ.

ಆರು ಪಥಗಳ ಎಕ್ಸ್‌ಪ್ರೆಸ್‌ವೇ ಪ್ರವೇಶ ನಿಯಂತ್ರಿತ ವಿಸ್ತರಣೆಯಾಗಿದ್ದು, ಬೈಕ್‌ಗಳು, ಆಟೋಗಳು ಮತ್ತು ಇತರ ನಿಧಾನವಾಗಿ ಚಲಿಸುವ ವಾಹನಗಳನ್ನು ನಿಷೇಧಿಸಲಾಗಿದೆ. ಇದು ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ದ್ವಿಪಥದ ಸೇವಾ ರಸ್ತೆಗಳನ್ನು ಹೊಂದಿದ್ದು, ಇದನ್ನು 10-ಲೇನ್ ಕಾರಿಡಾರ್ ಎಂದು ಹೆಸರಿಸಲಾಗಿದೆ.

Bengaluru-Mysuru Expressway: MP Pratap Simha inspects work near Budanur - see photos

117 ಕಿಮೀ ಕಾರಿಡಾರ್ ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಬೆಂಗಳೂರಿನಿಂದ ನಿಡಗಟ್ಟಾ ಮತ್ತು ಇನ್ನೊಂದು ನಿಡಗಟ್ಟಾದಿಂದ ಮೈಸೂರಿಗೆ ವಿಭಾಗವಾಗಿದೆ.

ಈ ಮಾರ್ಗವು ಬೆಂಗಳೂರಿನ ಹೊರವಲಯದಲ್ಲಿ NICE ರಸ್ತೆಯ ಪಕ್ಕದಲ್ಲಿ ಪ್ರಾರಂಭವಾಗುತ್ತದೆ ಮತ್ತು ಹೊರವರ್ತುಲ ರಸ್ತೆಯ ಛೇದಕಕ್ಕೆ ಸಮೀಪದಲ್ಲಿ ಮೈಸೂರಿನಲ್ಲಿ ಕೊನೆಗೊಳ್ಳುತ್ತದೆ.

ಟೋಲ್ ದರವನ್ನು ಅಂತಿಮಗೊಳಿಸಲಾಗಿಲ್ಲ. ಆದರೆ ಸಂಸದ ಸಿಂಹ ಪ್ರಕಾರ, 'ಇದು ಸುಮಾರು 250 ರೂ ಇರಲಿದೆ. ಬೆಂಗಳೂರಿನಿಂದ ನಿಡಘಟ್ಟದವರೆಗಿನ ಮೊದಲ ಮಾರ್ಗಕ್ಕೆ 135 ರೂ ವೆಚ್ಚವಾಗಬಹುದು. ಉಳಿದವು ಇತರ ಮಾರ್ಗಗಳ ಟೋಲ್‌ ದರವಾಗಲಿದೆ. ಇಡೀ ಎಕ್ಸ್‌ಪ್ರೆಸ್‌ವೇಗೆ ಸುಮಾರು 250 ರೂಪಾಯಿ ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಂದೇ ದಿನದಲ್ಲಿ ಎರಡೂ ಬದಿಗಳನ್ನು ಬಳಸಿದರೆ ಅದು ಕಡಿಮೆಯಾಗುತ್ತದೆ,' ಎಂದು ಹೇಳಿದ್ದಾರೆ.

ಎಕ್ಸ್‌ಪ್ರೆಸ್‌ವೇ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಭಾರತಮಾಲಾ ಪರಿಯೋಜನಾ (BMP) ಭಾಗವಾಗಿದೆ. ಇದು ಎಂಟು ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ಆಗಿದೆ. ಒಂಬತ್ತು ಪ್ರಮುಖ ಸೇತುವೆಗಳು, 42 ಚಿಕ್ಕ ಸೇತುವೆಗಳು. 64 ಅಂಡರ್‌ಪಾಸ್‌ಗಳು, 11 ಮೇಲ್ಸೇತುವೆಗಳು, ನಾಲ್ಕು ರಸ್ತೆ-ಮೇಲ್ಸೇತುವೆಗಳು (ROB ಗಳು) ಮತ್ತು ಐದು ಬೈಪಾಸ್‌ಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+