ಬೆಂಗಳೂರು ಈ ಪಾಲಿಕೆ ಆಯುಕ್ತರ ಸಿಟಿ ರೌಂಡ್ಸ್: ರಸ್ತೆ ಕಸದ ರಾಶಿಯಿಂದ ಮುಜುಗರ!
ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್‌ಗೆ ಹೋದ ಆಯುಕ್ತರು ಕಸದ ರಾಶಿಯನ್ನು ನೋಡಿ ತೀವ್ರ್ ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಸೋಮವಾರ ನಿರ್ಮಾಣವಾಗಿದೆ. ಬೆಂಗಳೂರಿನ ಗ್ರೇಟರ್ ಬೆಂಗಳೂರು ಆಡಳಿತದ ಪ್ರಮುಖ ಪಾಲಿಕೆಗಳಲ್ಲಿ ಒಂದಾಗಿರುವ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರು ಇಂದು ಸಿಟಿ ರೌಂಡ್ಸ್ ಮಾಡಿದ್ದು. ಈ ಸಂದರ್ಭದಲ್ಲಿ ಅವರಿಗೆ ಮುಜುಗರವಾಗುವ ಪ್ರಸಂಗವೊಂದು ನಡೆದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾಗಿ, ಗ್ರೇಟರ್ ಬೆಂಗಳೂರು ಆಡಳಿತ ಪ್ರಾರಂಭವಾದ ಮೇಲೆ ನಗರದಲ್ಲಿ ಐದು ಪಾಲಿಕೆಗಳು ರಚನೆಯಾಗಿದ್ದು ಐದು ಪಾಲಿಕೆಯ ಆಯುಕ್ತರು ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ರೌಂಡ್ಸ್ ಹೋಗುತ್ತಿದ್ದು. ಈ ವೇಳೆ ಬೆಂಗಳೂರಿನ ಸಮಸ್ಯೆಗಳು ಆಯುಕ್ತರ ಕಣ್ಣಿಗೆ ರಾಚುವಂತೆ ಕಾಣಿಸುತ್ತಿವೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚು ಸದ್ದು ಮಾಡುತ್ತಿದ್ದರೂ, ಬೆಂಗಳೂರಿನ ಕಸದ ಸಮಸ್ಯೆ ಗಂಭೀರವಾಗಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಕಸ ಸಂಗ್ರಹಿಸುವುದಕ್ಕೆ ಸರಿಯಾದ ಸಮಯಕ್ಕೆ ವಾಹನಗಳು ಬರುತ್ತಿಲ್ಲ. ಅಲ್ಲದೇ ಬೆಂಗಳೂರಿನಲ್ಲಿ ಈ ಮೊದಲಿಗಿಂತಲೂ ಬ್ಲಾಕ್‌ಸ್ಪಾಟ್ ಸಮಸ್ಯೆಯು ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಗರದಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ಸಮಯ ಬದಲಾವಣೆ ಮಾಡಿದ್ದರೂ ಪರಿಹಾರವಾದಂತೆ ಕಾಣುತ್ತಿಲ್ಲ. ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಸೋಮವಾರ ಸಿಟಿ ರೌಂಡ್ಸ್ ಮಾಡಿದ್ದು. ಕಸದ ಸಮಸ್ಯೆಯಿಂದ ಮುಜುಗರ ಅನುಭವಿಸಿದ್ದಾರೆ. ರಸ್ತೆಯ ಅರ್ಧಭಾಗಕ್ಕೆ ಕಸವನ್ನು ಎಸೆಯಾಲಾಗುತ್ತಿದ್ದು ಈ ಬ್ಲಾಕ್‌ಸ್ಪಾಟ್ ಅನ್ನು ಬೇಗ ಕ್ಲಿಯರ್ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಸೆ.29ರಂದು ಬೆಳಿಗ್ಗೆ ಕೇಂದ್ರ ನಗರಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯಲ್ಲಿನ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಸುಮಾರು 25 ಕೀ.ಮೀ ವ್ಯಾಪ್ತಿ ದ್ವಿಚಕ್ರ (ಬೈಕ್ ) ವಾಹನದ ಮೂಲಕ ರಸ್ತೆ ಗುಂಡಿಗಳನ್ನು ಹಾಗೂ ಕೈಗೊಂಡ ರಸ್ತೆ ದುರಸ್ಥಿ ಕಾಮಗಾರಿ ಬಗ್ಗೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದ ಪ್ರಮುಖ ಸೂಚನೆಗಳು
* ತುರ್ತಾಗಿ ಎಲ್ಲಾ ರಸ್ತೆ ಗುಂಡಿಗಳನ್ನು ಉತ್ತಮ ರೀತಿಯಲ್ಲಿ ಮುಚ್ಚುವುದು
* ಜಂಕ್ಷನ್ ಗಳ ಅಭಿವೃದ್ಧಿ
* ವೃತ್ತಗಳ ಅಭಿವೃದ್ಧಿ
* ಹೊಸೂರು ರಸ್ತೆ ಮೇಲ್ಮೈ ಡಾಂಬರೀಕರಣ (resurfacing)
* ರಸ್ತೆ ಬದಿ ತ್ಯಾಜ್ಯ ಬ್ಲಾಕ್ ಸ್ಪಾಟ್ ಗಳ ತೆರವು ಹಾಗೂ ಬ್ಲಾಕ್ ಸ್ಪಾಟ್ ಗಳಾಗದಂತೆ ತಡೆಯುವುದು.
* ಪಾದಚಾರಿ ಮಾರ್ಗಗಳನ್ನು ದುರಸ್ಥಿಗೊಳಿಸಿ ಪಾದಚಾರಿಗಳ ಸಂಚಾರ ಸುಗಮಗೊಳಿಸುವುದು.
* ಜೆ. ಸಿ ರಸ್ತೆ ಯಲ್ಲಿನ ನಗರಪಾಲಿಕೆ ಜಾಗದ ಸುತ್ತಲೂ ಕಾಂಪೌಂಡ್/
ತಂತಿಬೇಲಿ ಹಾಕುವುದು ಹಾಗೂ ಸದರಿ ಜಾಗದ ಅಭಿವೃದ್ಧಿಗೆ ಡಿ.ಪಿ.ಆರ್ ತಯಾರಿಸುವುದು ಎಂದು ಸೂಚನೆಗಳನ್ನು ಕೊಡಲಾಗಿದೆ.












Click it and Unblock the Notifications